ಗೋಕರ್ಣ: ಸಮಸ್ತ ಸಮಾಜಕ್ಕೆ ಸುಜ್ಞಾನದ ಬೆಳಕನ್ನು ಹರಿಸಿದ ಗುರುಪರಂಪರೆಯ ಪೂಜೆಯೇ ಗುರುಪೂರ್ಣಿಮೆಯ ವಿಶೇಷ ಎಂದು ರಾಘವೇಶ್ವರ ಭಾರತೀ ಶ್ರೀಗಳು ಹೇಳಿದರು. ಗುರುಕುಲ ಚಾತುರ್ಮಾಸ್ಯ ಪ್ರಥಮ ದಿನ ಧರ್ಮಸಭೆಯಲ್ಲಿ ಆಶೀರ್ವಚನ ನೀಡಿದ ಅವರು, ಗುರುಪೂರ್ಣಿಮೆ ಎನ್ನುವುದು ಜ್ಞಾನಚೈತನ್ಯದ ಪೂಜೆ ಎಂದರು.
ಅಶೋಕೆಯಲ್ಲಿ ನಿರ್ಮಾಣವಾಗುತ್ತಿರುವ ಶ್ರೀ ವಿಷ್ಣುಗುಪ್ತ ವಿಶ್ವವಿದ್ಯಾಪೀಠದ ಮೂಲ ಉದ್ದೇಶವೂ ಸುಜ್ಞಾನ ಪ್ರಸಾರ. ಸಮಸ್ತ ಸಮಾಜವನ್ನು ತೊಡಗಿಸುವುದೇ ಗುರುಕುಲ ಚಾತುರ್ಮಾಸ್ಯದ ಸಂಕಲ್ಪ ಎಂದರು. ಈ ಚಾತುರ್ಮಾಸ್ಯ ವಿವಿವಿಗೆ ಭೀಮಶಕ್ತಿಯನ್ನು, ರಾಮಶಕ್ತಿಯನ್ನು ನೀಡಲಿ. ತಾನು ಬೆಳಗಿ, ದೇಶವನ್ನು ಬೆಳಗಿ, ವಿಶ್ವವನ್ನು ಬೆಳಗುವಂತಾಗಲಿ ಎಂದು ಆಶಿಸಿದರು.
ಚಾತುರ್ಮಾಸ್ಯದ ಆರಂಭದ ದಿನ ಆಯುರ್ವೇದ ಕ್ಷೇತ್ರದಲ್ಲಿ ಮಹತ್ಸಾಧನೆ ಮಾಡಿದ ಡಾ.ಗಿರಿಧರ ಕಜೆಯವರ ‘ಪೌಷ್ಟಿಕ’ ಕೃತಿ ಬಿಡುಗಡೆಯಾಗಿರುವುದು ಔಚಿತ್ಯಪೂರ್ಣ ಎಂದರು.
ವಿಸ್ಮಯ ನ್ಯೂಸ್, ಗೋಕರ್ಣ