Focus News
Trending

ಪಿಎಚ್.ಡಿ.ಪದವಿ ಪಡೆದ ಡಾ.ಎಂ.ಜಿ.ಹೆಗಡೆ ಅವರಿಗೆ ಊರಿನ ಗಣೇಶೋತ್ಸವ ಸಮಿತಿಯಿಂದ ಅಭಿನಂದನೆ

ಹೊನ್ನಾವರ:ತಾಲೂಕಿನ ಗುಂಡಿಬೈಲಿನ ಶ್ರೀ ಗಣೇಶೋತ್ಸವ ಸಮಿತಿಯ ವತಿಯಿಂದ ಊರಿನ ಪ್ರಥಮ ಪಿಎಚ್.ಡಿ.ಪದವೀಧರ,ಇಂಗ್ಲಿಷ್ ಪ್ರಾಧ್ಯಾಪಕ ಹಾಗೂ ಪತ್ರಕರ್ತ ಡಾ.ಎಂ.ಜಿ.ಹೆಗಡೆ ಅವರಿಗೆ ಅಭಿನಂದನಾ ಕಾರ್ಯಕ್ರಮ ದಿನಾಂಕ 4-9-22ರಂದು ಗುಂಡಿಬೈಲಿನ ಶ್ರೀ ಗಣೇಶೋತ್ಸವ ಸಮಿತಿಯ ಸಭಾಭವನದಲ್ಲಿ ನಡೆಯಿತು. ಅಭಿನಂದನಾ ನುಡಿಗಳನ್ನಾಡಿದ ಪ್ರೊ.ನಾಗರಾಜ ಹೆಗಡೆ ಅಪಗಾಲ,’ಎಂ.ಜಿ.ಹೆಗಡೆ ಅವರ ಬಹುಮುಖಿ ವ್ಯಕ್ತಿತ್ವ,ಪರಿಸರ ಪ್ರೇಮ ಹಾಗೂ ನ್ಯಾಯ ನಿಷ್ಠುರತೆಯ ವ್ಯಕ್ತಿತ್ವದ ಕುರಿತು ತಿಳಿಸಿ ಊರಿನ ಎಲ್ಲರ ಪರವಾಗಿ ಅಭಿನಂದನೆ ಸಲ್ಲಿಸಿದರು.

ಪವರ್ ಸ್ಟಾರ್ ಜೊತೆ ಹಾಟ್ ಸೀಟ್ ನಲ್ಲಿ ಕುಳಿತ ಗಣಪತಿ: ಗಮನಸೆಳೆದ ಕೋಟ್ಯಾಧಿಪತಿ ಕಾರ್ಯಕ್ರಮ ಮಾದರಿಯ ವಿನಾಯಕ

ಮುಖ್ಯ ಅತಿಥಿ ಸಾಹಿತಿ, ಸುಮುಖಾನಂದ ಜಲವಳ್ಳಿ ಮಾತನಾಡಿ,’ಗಣೇಶೋತ್ಸವದ ಆಚರಣೆ ಒಂದು ಮೌಢ್ಯ ಬಿತ್ತುವ ಧಾರ್ಮಿಕ ಆಚರಣೆಯಾಗಬಾರದು.ಆಚರಣೆಗಳ ಹಿಂದಿನ ಸದಾಶಯವನ್ನು ಬೆಳೆಸುವಂತಿರಬೇಕು. ಡಾ.ಎಂ.ಜಿ.ಹೆಗಡೆ ಒಳ್ಳೆಯ ಪತ್ರಕರ್ತರೂ ಹೌದು.ಅವರ ಪಿಎಚ್.ಡಿ. ಅಧ್ಯಯನ ಪ್ರಬಂಧವನ್ನು ಅವರು ಕನ್ನಡ ಭಾಷೆಗೆ ತರ್ಜುಮೆ ಮಾಡಿ ಊರಿನವರೆಲ್ಲ ಅದನ್ನು ಓದಿ ಅವರೊಂದಿಗೆ ವಿಷಯದ ಕುರಿತು ಚರ್ಚಿಸುವಂತಾಗಲಿ.ಶ್ರೀ ಗಣೇಶೋತ್ಸವ ಸಮಿತಿ ಮಾಡಿದ ಈ ಕಾರ್ಯ ಎಲ್ಲರಿಗೆ ಪ್ರೇರಣಾದಾಯಕವಾದದ್ದು.ಈ ಕಾರ್ಯ ಮಾಡಿದ ಊರಿನ ಎಲ್ಲರೂ ಅಭಿನಂದನಾರ್ಹರು” ಎಂದು ಹೇಳಿದರು. ಅಭಿನಂದನೆ ಸ್ವೀಕರಿಸಿದ ಡಾ.ಎಂ.ಜಿ.ಹೆಗಡೆ ಮಾತನಾಡಿ,”ಊರಿನವರು ನೀಡಿದ ಈ ಗೌರವ ಸ್ಮರಣೀಯವಾದದ್ದು.ನನ್ನ ಪ್ರಬಂಧದ ಕನ್ನಡಾನುವಾದಕ್ಕೆ ಪ್ರಯತ್ನಿಸುತ್ತೇನೆ” ಎಂದು ಹೇಳಿ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು.

honnavar news

ಗಣೇಶೋತ್ಸವ ಸಮಿತಿಯ ಅಧ್ಯಕ್ಷ ಗಣಪತಿ ನಾಯ್ಕ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.ಕಾರ್ಯದರ್ಶಿ ಗಜೇಂದ್ರ ನಾಯ್ಕ ಉಪಸ್ಥಿತರಿದ್ದರು.ವೇದಿಕೆಯಲ್ಲಿದ್ದ ಗಣ್ಯರು ಡಾ.ಎಂ.ಜಿ.ಹೆಗಡೆ ಅವರಿಗೆ ಶಾಲು ಹೊದೆಸಿ,ಫಲ-ಪುಷ್ಪ-ಹಾರ ಸಮರ್ಪಿಸಿ ಅಭಿನಂದನಾ ಪತ್ರ ಸಲ್ಲಿಸಿ ಗೌರವಿಸಿದರು. ಶ್ರೀ ಗಣೇಶೋತ್ಸವ ಸಮಿತಿಯ ಸದಸ್ಯ ಶಂಕರ ನಾಯ್ಕ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತ ಕೋರಿದರು.ಶಿಕ್ಷಕ ಹನುಮಂತ ನಾಯ್ಕ ನಿರೂಪಿಸಿ ವಂದಿಸಿದರು. ಊರಿನ ನಾಗರಿಕರು,ವಿದ್ಯಾರ್ಥಿಗಳು,ಭಜಕರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.ಸಭಾ ಕಾರ್ಯಕ್ರಮದ ನಂತರ ಮೆರವಣಿಗೆಯಲ್ಲಿ ತೆರಳಿ ಮಂಗಲಮೂರ್ತಿಯನ್ನು ವಿಸರ್ಜಿಸಲಾಯಿತು.

ವಿಸ್ಮಯ ನ್ಯೂಸ್, ಹೊನ್ನಾವರ

land for sale

Back to top button