ಅಂಕೋಲಾ: 16
ಭಟ್ಕಳ: 14
ಹಳಿಯಾಳ: 39
ಕಾರವಾರ: 1
ಕುಮಟಾ: 8
ಮುಂಡಗೋಡ: 1
1,163ಕ್ಕೆ ಏರಿಕೆಯಾದ ಸೋಂಕಿತರ ಸಂಖ್ಯೆ
ಇಂದು 40 ಮಂದಿ ಇಂದು ಆಸ್ಪತ್ರೆಯಿಂದ ಡಿಸ್ಚಾರ್ಜ್
ಭಟ್ಕಳದಲ್ಲಿ ತಹಶೀಲ್ದಾರ್ ಕಚೇರಿ ಸಿಬ್ಬಂದಿಗೂ ಸೋಂಕು
ಕುಮಟಾ: ಉತ್ತರಕನ್ನಡ ಜಿಲ್ಲೆಯಲ್ಲಿ ಕರೊನಾ ಆರ್ಭಟ ನಿಲ್ಲುತ್ತಿಲ್ಲ. ಜಿಲ್ಲೆಯಲ್ಲಿ ಇಂದು ಒಟ್ಟು 78 ಕರೊನಾ ಪ್ರಕರಣಗಳು ದೃಢಪಟ್ಟಿವೆ. ಅಂಕೋಲಾದಲ್ಲಿ 16, ಭಟ್ಕಳದಲ್ಲಿ 14, ಹಳಿಯಾಳದಲ್ಲಿ 39, ಕಾರವಾರದಲ್ಲಿ 1, ಕುಮಟಾದಲ್ಲಿ 8, ಮುಂಡಗೋಡದಲ್ಲಿ 1 ಪ್ರಕರಣಗಳು ದೃಢಪಟ್ಟಿವೆ. ಇದರಿಂದಾಗಿ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 1,163 ಕ್ಕೆ ಏರಿಕೆಯಾಗಿದೆ. ಇಂದು ಕುಮಟಾದಲ್ಲಿ 19, ಕಾರವಾರದಲ್ಲಿ ಐವರು, ಹೊನ್ನಾವರದಲ್ಲಿ ಓರ್ವ, ಮುಂಡಗೋಡದಲ್ಲಿ 14, ಶಿರಸಿಯಲ್ಲಿ ಒಬ್ಬರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.
ಭಟ್ಕಳದಲ್ಲಿಂದು 14 ಮಂದಿಯಲ್ಲಿನ ಸೋಂಕು ಪತ್ತೆ
ಭಟ್ಕಳ: ಸೋಮವಾರದಂದು ಒಟ್ಟು 14 ಕೊರೊನಾ ಪ್ರಕರಣ ಪತ್ತೆಯಾಗಿದ್ದು, ಭಟ್ಕಳ ತಹಸೀಲ್ದಾರ್ ಕಚೇರಿಯ ಸಿಬ್ಬಂದಿಗು ಸೋಂಕು ಇರುವುದು ಪತ್ತೆಯಾಗಿದೆ. ತಾಲೂಕಿನ ಅಜಾದ ನಗರ 41 ವರ್ಷದ ಪುರುಷ, ಸುಲ್ತಾನ್ ಸ್ಟ್ರೀಟನ 52 ವರ್ಷದ ಪುರುಷ, ಮುಟ್ಟಳ್ಳಿಯ 42 ವರ್ಷದ ಮಹಿಳೆ, 66 ವರ್ಷದ ವೃದ್ಧೆ ಹಾಗೂ 32 ವರ್ಷದ ಪುರುಷ, ಹೆಗ್ಲೆಯ 44 ವರ್ಷದ ಪುರುಷ, ಗುಡ್ ಲಕ್ ರೋಡಿನ 14 ವರ್ಷದ ಬಾಲಕ, ಶಿರಾಲಿಯ 66 ವರ್ಷದ ವೃದ್ಧ ಹಾಗೂ 60 ವೃದ್ಧೆ, ಕಾಸಿಯಾ ಸ್ಟ್ರೀಟನ 51 ವರ್ಷದ ಪುರುಷ. ಹೊನ್ನೆಗದ್ದೆಯ 39 ವರ್ಷದ ಮಹಿಳೆಯಲ್ಲಿ ಸೋಂಕು ದೃಢಪಟ್ಟಿದೆ. ತಾಲೂಕಿನ ತಹಶೀಲ್ದಾರ್ ಕಚೇರಿಯ 35 ವರ್ಷದ ಸಿಬ್ಬಂದಿ ಹಾಗೂ ಗ್ರಾಮೀಣ ಠಾಣೆಯ ಸೋಂಕಿತ ಪೇದೆಯ 3 ವರ್ಷದ ಗಂಡು ಮಗು ಹಾಗೂ 17 ವರ್ಷದ ಯುವತಿವಲ್ಲಿ ಸೋಂಕು ಪತ್ತೆಯಾಗಿರುವುದು ತಿಳಿದು ಬಂದಿದೆ.
ವಿಸ್ಮಯ ನ್ಯೂಸ್ ಉದಯ್ ಎಸ್ ನಾಯ್ಕ, ಭಟ್ಕಳ
ಅಕೋಲಾದಲ್ಲಿ 16 ಪ್ರಕರಣ ದೃಢ:
ಅಂಕೋಲಾ: ತಾಲೂಕಿನಲ್ಲಿ ಇಂದು 16 ಕರೊನಾ ಪ್ರಕರಣಗಳು ದೃಢಗೊಂಡಿದೆ. ಈ ಹಿಂದೆ ಸೋಂಕು ಕಾಣಿಸಿಕೊಂಡ ಮೂಲೆಕೇಣಿ ಮತ್ತು ಮುಲ್ಲಾವಾಡಗಳಲ್ಲಿ ಐದಾರು ಪ್ರಕರಣ ದಾಖಲಾಗಿದೆ. ಇವರಿಗೆ ಈ ಹಿಂದಿನ ಸೋಂಕಿತರ ಪ್ರಾಥಮಿಕ ಮತ್ತು ದ್ವಿತೀಯ ಸಂಪರ್ಕದಿoದ ಬಂದಿರಬಹುದೆoದು ಶಂಕಿಸಲಾಗಿದೆ. ಮೊಗಟಾ, ಕಣಗೀಲ, ಮತ್ತು ಪಟ್ಟಣ ವ್ಯಾಪ್ತಿಯ ಕಂತ್ರಿಯಲ್ಲಿಯೂ ತಲಾ ಒಂದೊoದು ಪ್ರಕರಣ ಕಾಣಿಸಿಕೊಂಡಿದೆ.
ಕುಮಟಾದಲ್ಲಿ ಇಂದು ಎಂಟು ಮಂದಿಗೆ ಸೋಂಕು:
ಕುಮಟಾ: ತಾಲೂಕಾ ವ್ಯಾಪ್ತಿಯಲ್ಲಿ ಇಂದು ಎಂಟು ಕರೊನಾ ಪ್ರಕರಣ ದೃಢಪಟ್ಟಿದೆ. ಗೋಕರ್ಣದ ಸುತ್ತಮುತ್ತ ಐದು ಕೇಸ್ ದಾಖಲಾದರೆ, ಮಾವಳ್ಳಿ, ಹೆಗಡೆ, ಸಂತೇಗುಳಿಯಲ್ಲೂ ಸೋಂಕಿನ ನಂಜು ಆವರಿಸುತ್ತಿದೆ.
ಈ ಕುರಿತ ಸಮಗ್ರ ಮಾಹಿತಿಯನ್ನು ರಾತ್ರಿ 8.30ಕ್ಕೆ ಪ್ರಸಾರವಾಗುವ ವಿಸ್ಮಯ ನ್ಯೂಸ್‌ನಲ್ಲಿ ವೀಕ್ಷಿಸಿ.
ಪಂಡಿತ್ ಶಂಕರ್ ಗುರೂಜಿ
ಪ್ರಸಿದ್ಧ ಜ್ಯೋತಿಷ್ಯರು, ಬೆಂಗಳೂರು, ಮೊ- 9535432749
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ಎರಡೇ ದಿನಗಳಲ್ಲಿ ಫೋನಿನ ಮೂಲಕ ನೆರವೇರಿಸಿ ಕೊಡುತ್ತಾರೆ. ಇಂದೇ ಸಂಪರ್ಕಿಸಿ.
(ಜಾಹೀರಾತು)