Join Our

WhatsApp Group
Focus NewsImportant
Trending

ಮೀನು ಹಿಡಿಯಲು ಹೋದವ ಕಣ್ಮರೆ: ಗಂಗಾವಳಿ ನದಿ ತೀರದ ನಿವಾಸಿ ಗಾಗಿ ಮುಂದುವರೆದ ಶೋಧ

ಅಂಕೋಲಾ: ಗಂಗಾವಳಿ ನದಿಯಲ್ಲಿ ಮೀನು ಹಿಡಿಯಲು ಹೋಗುವುದಾಗಿ ಮನೆಯಲ್ಲಿ ಹೇಳಿ ಹೋಗಿದ್ದ ಯುವಕ ಮನೆಗೆ ಮರಳದೇ ಕಾಣೆಯಾದ ಘಟನೆ ತಾಲೂಕಿನ ಸಗಡಗೇರಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಉಳುವರೆಯಲ್ಲಿ ನಡೆದಿದೆ.  ಉಳುವರೆ ನಿವಾಸಿ ರಾಮಚಂದ್ರ ಹೊನ್ನಾ ಗೌಡ (30) ಕಾಣೆಯಾದ  ವ್ಯಕ್ತಿಯಾಗಿದ್ದು ಈತ ರವಿವಾರ ಸಂಜೆ ಮನೆ ಸಮೀಪದ ಗಂಗಾವಳಿ ನದಿಯಲ್ಲಿ ಗಾಳ ಹಾಕಿ ಮೀನು ಹಿಡಿಯಲು ಹೋಗುವುದಾಗಿ ಹೇಳಿ ಹೋಗಿದ್ದವ ಮನೆಗೆ ಮರಳಿ ಬಂದಿಲ್ಲ ಎನ್ನಲಾಗಿದೆ. 

ಡಿವೈಡರ್ ಹಾರಿ ಅಡ್ಡ ಬಂದು ಬಸ್ಸಿಗೆ ಬಡಿದುಕೊಂಡ ಕಾರು: ಹೊಸ ವರ್ಷದ ಮೊದಲ ದಿನವೇ ನಾಲ್ವರ  ದುರ್ಮರಣ

ಊರವರು ಸೇರಿ ನದಿ ತೀರದಲ್ಲಿ ಹುಡುಕಾಟ ನಡೆಸಿದರೂ ಯುವಕನ ಪತ್ತೆಯಾಗದ ಕಾರಣ ಆತನ ಸಹೋದರ ಅಂಕೋಲಾ ಪೊಲೀಸ್ ಠಾಣೆಯಲ್ಲಿ ವ್ಯಕ್ತಿ ಕಾಣೆಯಾಗಿರುವ ಕುರಿತು ದೂರು ದಾಖಲಿಸಿದ್ದಾರೆ.  ಅಂಕೋಲಾ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Back to top button