ಉದಯ್ ಬಜಾರ್‌ನಿಂದ ಮತ್ತೊಂದು ಕೊಡುಗೆ: “ಉದಯ ಫ್ಯಾಷನ್ ವರ್ಡ್” ಶುಭಾರಂಭ
ಜನವರಿ 26 ರಿಂದ ಫೆಬ್ರವರಿ 5ರ ವರೆಗೆ ವಿಶೇಷ ರಿಯಾಯತಿ ಮಾರಾಟ
ಕುಮಟಾ: ವಿಶ್ವಾಸಾರ್ಹ ಸೇವೆಯ ಮೂಲಕ ಕುಮಟಾ ತಾಲೂಕಿನಲ್ಲಿ ಅತ್ಯಂತ ಹೆಸರುವಾಸಿಯಾಗಿರುವ ಉದಯ ಬಜಾರ್‌ನ “ಉದಯ ಫ್ಯಾಷನ್ ವರ್ಡ್” ಇಂದು ಶುಭಾರಂಭಗೊoಡಿತು. ಈ ಒಂದು ನೂತನ ಉದಯ ಫ್ಯಾಷನ್ ವರ್ಡ್ನ ಉದ್ಘಾಟನೆಯನ್ನು ಪಟ್ಟಣದ ವೈಭವ ಪ್ಯಾಲೆಸ್‌ನ ಮಾಲೀಕರಾದ ಜಯಲಕ್ಷಿ ಶೈಲೇಶ್ ನಾಯ್ಕ ಅವರು ರಿಬ್ಬನ್ ಕತ್ತರಿಸುವ ಮೂಲಕ ನೆರವೇರಿಸಿದರು. ಅಂತೆಯೇ ಡಾ. ಎ.ವಿ ಬಾಳಿಗಾ ಕಲಾ ಮತ್ತು ವಿಜ್ಞಾನ ಪದವಿ ಪೂರ್ವ ಮಹಾವಿದ್ಯಾಲಯದ ಪ್ರಾಂಶುಪಾಲರಾದ ವೀಣಾ ಕಾಮತ್ ಅವರು ದೀಪ ಬೆಳಗುವ ಮೂಲಕ ಮಳಿಗೆಯನ್ನು ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ನಮ್ಮ ವಿಸ್ಮಯ ಟಿ.ವಿ ಯೊಂದಿಗೆ ಮಾತನಾಡಿದ ವೀಣಾ ಕಾಮತ್ ಅವರು, ಎಲ್ಲಾ ನಾರಿಯರು ಬಯಸುವಂತಹ ಅಲಂಕಾರಿಕ ವಸ್ತುಗಳ ನೂತನ ಮಳಿಗೆಯು ಉದಯ ಬಜಾರ್‌ನಲ್ಲಿ ಶುಭಾರಂಭಗೊoಡಿರುವುದು ಬಹಳ ಸಂತೋಷದ ವಿಷಯವಾಗಿದೆ. ಈ ಹಿಂದೆ ಮನೆ ಬಳಕೆಯ ಸಾಮಗ್ರಿ ಸೇರಿದಂತೆ ಇನ್ನಿತರ ಅನೇಕ ವಸ್ತುಗಳನ್ನು ರೀಯಾಯತಿ ದರದಲ್ಲಿ ವ್ಯಾಪಾರ ಮಾಡುವ ಮೂಲಕ ಮನೆ ಮಾತಾಗಿರುವ ಉದಯ ಬಜಾರ್ ಇದೀಗ ಉದಯ ಫ್ಯಾಷನ್ ವರ್ಡ್ ಎಂಬ ನೂತನ ಮಳಿಗೆಯ ಸೇವೆಯನ್ನು ಸಾರ್ವಜನಿಕರಿಗೆ ನೀಡಲು ಮುಂದಾಗಿದ್ದು, ಇದರ ಸದುಪಯೋಗವನ್ನು ಎಲ್ಲರು ಪಡೆದುಕೊಳ್ಳಿ ಎಂದು ಶುಭಹಾರೈಸಿದರು.
ಈ ವೇಳೆ ಉದಯ ಕಿಚೆನೆಕ್ಸ್ಟ ಪ್ರೈವೇಟ್ ಲಿಮಿಟೆಡ್ ಇದರ ವ್ಯವಸ್ಥಾಪಕ ನಿರ್ದೇಶಕರಾದ ರಮೇಶ ಬಂಗೇರ ಅವರು ಮಾತನಾಡಿ, 1981 ರಿಂದ ಇಲ್ಲಿಯ ವರೆಗೆ ಉತ್ತರ ಕನ್ನಡ ಜಿಲ್ಲೆಯ ಜನರು ಅತ್ಯಂತ ಸಹಕಾರ ನೀಡಿ ನಮ್ಮನ್ನು ಬೆಳೆಸಿದ್ದು, ಇದೀಗ ಮತ್ತೊಂದು ಹೆಜ್ಜೆಯನ್ನಿಟ್ಟು “ಉದಯ ಫ್ಯಾಷನ್ ವರ್ಡ್” ಎಂಬ ನೂತನ ಮಳಿಗೆಯನ್ನು ಶುಭಾರಂಭಗೊಳಿಸಿದ್ದೆವೆ. ಈ ಹಿಂದೆ ತಾವೆಲ್ಲಾ ನೀಡಿದ ಸಹಕಾರವನ್ನು ಮುಂಬರುವ ದಿನಗಳಲ್ಲಿಯೂ ನೀಡಬಕೆಂದು ಎಂದು ತಿಳಿಸಿದರು.
ಗ್ರಾಹಕರಿಗೆ ಅಗತ್ಯವಾದ ಎಲ್ಲ ವಿಧದ ವಸ್ತುಗಳನ್ನು ನೀಡುತ್ತಿರುವ ಉದಯ ಬಜಾರ್ ಇದೀಗ ಉದಯ ಫ್ಯಾಷನ್ ವರ್ಡ್ ಅನ್ನು ತೆರೆದಿದ್ದು, ಇಲ್ಲಿ ಮಹಿಳೆಯರಿಗೆ ಬೇಕಾದಂತಹ ಎಲ್ಲಾ ವಿಧದ ಅಲಂಕಾರಿಕ ವಸ್ತುಗಳು ಸೇರಿದಂತೆ ಶಾಂಪು, ಸೋಪ್, ಗೊಂಬೆಗಳು, ಮಕ್ಕಳ ಆಟಿಕೆ ವಸ್ತುಗಳು ಲಭ್ಯವಿದೆ. ಜನವರಿ 26 ರಿಂದ ಫೆಬ್ರವರಿ 5 ರ ವರೆಗೆ ವಿಶೇಷ ಆಫರ್ ಕೂಡ ಚಾಲ್ತಿಯಲ್ಲಿರಲಿದ್ದು, ನೂರು ರೂಪಾಯಿಗಿಂತ ಹೆಚ್ಚಿನ ಖರೀದಿಗೆ ಲಕ್ಕಿ ಕೂಪನ್ ನೀಡಲಾಗುತ್ತಿದೆ. ಕುಮಟಾದಹಳೆಯ ಬಸ್ ನಿಲ್ದಾಣ ರಸ್ತೆಯಲ್ಲಿರುವ ವರುಣ್ ಆರ್ಕೆಡ್ ಬಿಲ್ಡಿಂಗ್‌ನಲ್ಲಿರುವ ಉದಯ ಬಜಾರ್ ಮಳಿಗೆಯಲ್ಲಿಯೇ “ಉದಯ ಫ್ಯಾಷನ್ ವರ್ಡ್” ಪ್ರತ್ಯೇಕ ಮಳಿಗೆಯಾಗಿ ಶುಭಾರಂಭಗೊAಡಿದ್ದು, ಪ್ರತಿಷ್ಠಿತ ಕಂಪನಿಗಳ ಕಾಸ್ಮೆಟಿಕ್ಸ್ ಗಳು, ಸುಗಂಧದ ದ್ರವ್ಯಗಳು, ಅಲಂಕಾರಿಕ ವಸ್ತುಗಳು ಈ ಮಳಿಗೆಯಲ್ಲಿ ಲಭ್ಯವಿದ್ದು ಗ್ರಾಹಕರಿಗೆ ಬೇಕಾದ ವಸ್ತುಗಳನ್ನು ಆಯ್ದುಕೊಳ್ಳಲು ವ್ಯವಸ್ಥೆ ಕಲ್ಪಿಸಲಾಗಿದೆ.
ವಿಸ್ಮಯ ನ್ಯೂಸ್, ಯೋಗೇಶ ಮಡಿವಾಳ. ಕುಮಟಾ.