ಎಚ್ಚರಿಕೆ ಮೀರಿ ಸಮುದ್ರಕ್ಕೆ ಇಳಿದ ಪ್ರವಾಸಿಗರು: ಮುರ್ಡೇಶ್ವರದಲ್ಲಿ ಓರ್ವ ನಾಪತ್ತೆ, ಇಬ್ಬರ ರಕ್ಷಣೆ

ಭಟ್ಕಳ: ಮುರುಡೇಶ್ವರದಲ್ಲಿ ಸಮುದ್ರ ಅಲೆಗೆ ಕೊಚ್ಚಿ ಹೋಗುತ್ತಿದ್ದ ಇಬ್ಬರು ಪ್ರವಾಸಿಗರನ್ನು ಲೈಫ್ ಗಾರ್ಡ್ ಸಿಬ್ಬಂದಿಗಳು ರಕ್ಷಣೆ ಮಾಡಲಾಗಿದ್ದು ಓರ್ವ ನಾಪತ್ತೆಯಾಗಿರುವಘಟನೆ ಮುರುಡೇಶ್ವರ ಸಮುದ್ರ ತೀರದಲ್ಲಿ ನಡೆದಿದೆ. ರಕ್ಷಣೆಯಾದ ಪ್ರವಾಸಿಗರನ್ನು ಹಸನ್ ಮುಜ್ಜಿಗಿ ಗೌಡ (21) ಸಂಜೀವ ಹೆಬ್ಬಳ್ಳಿ(20) ಎಂದು ಗುರುತಿಸಲಾಗಿದೆ. ಹಾಗೂ ಇವರ ಜೊತೆಯಲ್ಲಿದ್ದ ಸಂತೋಷ ಹುಲಿಗುಂಡ (19)ನಾಪತ್ತೆಯಾಗಿದ್ದಾನೆ.
ಸಮುದ್ರದ ದಡಕ್ಕೆ ಅಪ್ಪಳಿಸುತ್ತಿದ್ದ ಕಡಲ ಅಲೆಗಳು ಮೂವರನ್ನು ಕೊಚ್ಚಿಕೊಂಡು ಹೋಗಿದ್ದು, ಮೂವರಲ್ಲಿ ಇಬ್ಬರನ್ನು ರಕ್ಷಣೆ ಮಾಡಲಾಗಿದ್ದು. ನಾಪತ್ತೆಯಾದ ಯುವಕನಿಗಾಗಿ ಶೋಧ ಕಾರ್ಯ ಮುಂದುವರೆದಿದೆ. ಕಲಘಟಗಿಯಿಂದ 22 ಮಂದಿ ಮುರುಡೇಶ್ವರಕ್ಕೆ ಪ್ರವಾಸಕ್ಕೆ ಬಂದಿದ್ದರು ಎಂದು ಮಾಹಿತಿ ತಿಳಿದು ಬಂದಿದೆ. ಸೈಕ್ಲೋನ್ ಎಫೆಕ್ಟ್ ಇರುವ ಕಾರಣ ಪ್ರವಾಸಿಗರು ಸಮುದ್ರಕ್ಕೆ ಇಳಿಯದಂತೆ ಸೂಚನಾ ಫಲಕ ಹಾಕಲಾಗಿತ್ತು. ಇದನ್ನು ಲೆಕ್ಕಿಸದೆ ಪ್ರವಾಸಿಗರು ಸಮುದ್ರ ನೀರಿಗೆ ಇಳಿಯುತ್ತಿದ್ದಾರೆ.
ವಿಸ್ಮಯ ನ್ಯೂಸ್, ಉದಯ್ ಎಸ್ ನಾಯ್ಕ, ಭಟ್ಕಳ