Focus News
Trending

ಜೋಯಿಡಾದಲ್ಲಿ ಅಕ್ರಮವಾಗಿ ದಾಸ್ತಾನು ಮಾಡಿದ್ದ ಅಪಾರ ಪ್ರಮಾಣದ ಉಸುಕು ವಶಕ್ಕೆ

ಜೊಯಿಡಾ: ತಾಲೂಕಿನ ಅಸು ಗ್ರಾಮ ಪಂಚಾಯತ ವ್ಯಾಪ್ತಿಯ ಕಸಾರ್ಲೆ ಮತ್ತು ಚಾಪಾಳಿಯಲ್ಲಿ ಜೊಯಿಡಾ ತಹಸಿಲ್ದಾರ ನೇತೃತ್ವದಲ್ಲಿ ಅಕ್ರಮ ಉಸುಕು ದಾಸ್ತಾನು ಪತ್ತೆ ಮಾಡಿ ಪ್ರಕರಣ ದಾಖಲಿಸಿ ವಶಕ್ಕೆ ಪಡೆಯಲಾಗಿದೆ. ಕಸಾರ್ಲೆಯಲ್ಲಿ ಒಟ್ಟೂ  ಅಂದಾಜು 22 ಟಿಪ್ಪರ್ ದಾಸ್ತಾನು ಮಾಡಿದ್ದ ಉಸುಕು ಹಾಗೂ  ಚಾಪಾಳಿಯಲ್ಲಿ 6 ಟಿಪ್ಪರ್ ಉಸುಕು ದಾಸ್ತಾನು ಮಾಡಿದ್ದನ್ನು ಪತ್ತೆ ಮಾಡಲಾಗಿದೆ. ಸರಕಾರಿ ಧರದ ಪ್ರಕಾರ ಅಂದಾಜು ಮೌಲ್ಯ  ಸುಮಾರು 4 ಲಕ್ಷ  ಎಂದು ಅಂದಾಜಿಸಲಾಗಿದೆ.

ಕಾರವಾರ ಎಸಿ ಜಯಲಕ್ಷ್ಮಿ ರಾಯಕೊಡ ಮಾರ್ಗದರ್ಶನದಲ್ಲಿ ಜೊಯಿಡಾ ತಹಶೀಲ್ದಾರ ಬಸವರಾಜ ತೆನ್ನಳ್ಳಿ ಮತ್ತು ಪೊಲಿಸ್ ಕಂದಾಯ ಇಲಾಖೆಯ ಸಿಬ್ಬಂದಿಗಳು ಇದ್ದರು.

ವಿಸ್ಮಯ ನ್ಯೂಸ್ ಜೋಯ್ಡಾ

Back to top button