ವಿಸ್ಮಯ ಟಿ.ವಿಯ ವೆಬ್‌ಸೈಟಿನಲ್ಲಿ ಬಂದ ಸುದ್ದಿಯನ್ನು ತಿರುಚಿ ವಾಟ್ಸಾಪ್ ಗ್ರೂಫ್‌ಗಳಲ್ಲಿ ಹರಿಬಿಟ್ಟ ಕಿಡಿಗೇಡಿಗಳು: ಸೈಬರ್ ಠಾಣೆಯಲ್ಲಿ ದೂರು ನೀಡಲು ನಿರ್ಧಾರ
ಕಾರವಾರ: ಉತ್ತರಕನ್ನಡ ಜಿಲ್ಲೆಯಲ್ಲಿ ಗುಣಮಟ್ಟದ, ವಸ್ತುನಿಷ್ಠ, ವಿಶ್ವಾಸಾರ್ಹ ಸುದ್ದಿಗಳ ಮೂಲಕ ಮನೆ ಮಾತಾಗಿರುವ ವಿಸ್ಮಯ ಟಿ.ವಿಯ ಹೆಸರನ್ನು ಕೆಡಿಸಲು ಕೆಲ ಕಿಡಿಗೇಡಿಗಳು ಮುಂದಾಗಿರುವುದು ಬೆಳಕಿಗೆ ಬಂದಿದೆ. ವಿಸ್ಮಯ ಟಿ.ವಿಯ ವೆಬ್‌ಸೈಟಿನಲ್ಲಿ ಬಂದ ಸುದ್ದಿಯನ್ನು ತಿರುಚಿ, ವಾಟ್ಸಾಪ್ ಗ್ರೂಫ್‌ಗಳಲ್ಲಿ ಹರಿಬಿಡಲಾಗಿದೆ. ಕಾರವಾರ, ಜೋಯಿಡಾ, ಹಳಿಯಾಳ , ದಾಂಡೇಲಿ, ಹೊನ್ನಾವರ ತಾಲೂಕುಗಳಲ್ಲಿ ನಾಳೆ ( ಜುಲೈ 26 ರಂದು) ರಜೆ ಘೋಷಣೆ ಮಾಡಲಾಗಿದೆ. ಅಲ್ಲದೆ, ಉಳಿದ ತಾಲೂಕುಗಳಲ್ಲಿ ಸ್ಥಳೀಯ ಪರಿಸ್ಥಿತಿ ಅವಲೋಕಿಸಿ, ರಜೆಯ ನಿರ್ಧಾರ ಕೈಗೊಳ್ಳಲು ತಹಶೀಲ್ದಾರ್ ಅವರಿಗೆ ಸೂಚನೆ ನೀಡಲಾಗಿದೆ. ಕುಮಟಾ, ಅಂಕೋಲಾದಲ್ಲಿ ಮಳೆಯ ಪರಿಸ್ಥಿತಿ ಅವಲೋಕಿಸಲಾಗುತ್ತಿದ್ದು, ಶೀಘ್ರವೇ ನಿರ್ಧಾರ ಪ್ರಕಟಿಸುವುದಾಗಿ ಅಧಿಕಾರಿಗಳು ವಿಸ್ಮಯ ಟಿ.ವಿಗೆ ಮಾಹಿತಿ ನೀಡಿದ್ದಾರೆ ಎಂದು ವಿಸ್ಮಯ ಟಿ.ವಿ ತನ್ನ ವೆಬ್‌ಸೈಟಿನಲ್ಲಿ ಪ್ರಕಟಿಸಿತ್ತು. ಆದರೆ, ಕೆಲ ಕಿಡಿಗೇಡಿಗಳು ಇದನ್ನು ಯಥಾವತ್ತಾಗಿ ಕಾಫಿ ಮಾಡಿ, ಕೊನೆಯಲ್ಲಿ ನಿರ್ಧಾರ ಪ್ರಕಟವಾಗಿದೆ. ಮಾನ್ಯ ತಹಶೀಲ್ದಾರರು ಕುಮಟಾ, ಅಂಕೋಲಾ ತಾಲೂಕುಗಳಿಗೆ 27-07- 2023 ರಂದು ರಜೆ ಘೋಷಣೆ ಮಾಡಿದ್ದಾರೆ ಎಂದು ತಿರುಚಿ ವಾಟ್ಸಾಪ್ ಮತ್ತು ಇತರ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ಹರಿಬಿಟ್ಟ ಸುಳ್ಳುಸುದ್ದಿಯ screenshot ಇಲ್ಲಿದೆ ನೋಡಿ.
ವಿಸ್ಮಯ ಟಿ.ವಿ ಹೆಸರು ಬಳಸಿಕೊಂಡು ಸುಳ್ಳು ಮಾಹಿತಿ ನೀಡಿ ಜನರ ದಿಕ್ಕುತಪ್ಪಿಸುವ ಪ್ರಯತ್ನ ಮಾಡಿದ ಕಿಡಿಗೇಡಿಗಳನ್ನು ವಿರುದ್ಧ ಸೈಬರ್ ಠಾಣೆಯಲ್ಲಿ ದೂರು ದಾಖಲಿಸಲು ನಿರ್ಧರಿಸಲಾಗಿದೆ. ಹೀಗಾಗಿ ಶೀಘ್ರದಲ್ಲೇ ಉದ್ದೇಶಪೂರ್ವಕವಾಗಿ ಸುಳ್ಳುಸುದ್ದಿ ಹರಿಬಿಟ್ಟವರ ಹೆಸರು ಬಹಿರಂಗಗೊಳ್ಳಲಿದೆ. ಅಂಥವರ ವಿರುದ್ಧ ಕಾನೂನು ಪ್ರಕಾರ ಕ್ರಮಕೈಗೊಳ್ಳಲಾಗುವುದು. ಜನರು ವಾಟ್ಸಾಪ್ ಗಳಲ್ಲಿ ಬಂದ ಇಂಥ ಸುಳ್ಳು ಸುದ್ದಿಯನ್ನು ನಂಬದೆ, ಸುದ್ದಿಯ ವಿಶ್ವಾಸಾರ್ಹತೆಯನ್ನು ಖಾತರಿಪಡಿಸಿಕೊಳ್ಳಬೇಕಿದೆ. ಗೊಂದಲವಿದ್ದಲ್ಲಿ ಅಥವಾ ಇಂಥ ಸುಳ್ಳು ಸುದ್ದಿಗಳು ವಿಸ್ಮಯ ಟಿ.ವಿಯ ಹೆಸರಿನಲ್ಲಿ ಪ್ರಕಟವಾದಲ್ಲಿ ನೈಜತೆಯನ್ನು ಖಾತರಿಪಡಿಸಿಕೊಳ್ಳಿ. ನಮ್ಮ ವಿಸ್ಮಯ ಟಿ.ವಿ, ನಮ್ಮ ವೆಬ್‌ಸೈಟ್, ಅಧಿಕೃತ ಫೇಸ್‌ಬುಕ್, ಯುಟ್ಯೂಬ್‌ಗಳಿಗೆ ತೆರಳಿ ಪರಿಶೀಲಿಸಬೇಕಾಗಿ ವಿನಂತಿ. ನಮ್ಮ ವಾಹಿನಿಯ ವಿಶ್ವಾಸಾರ್ಹತೆಯನ್ನು ನಂಬಿ, ಸದಾ ನಮ್ಮನ್ನು ಪ್ರೋತ್ಸಾಹಿಸುತ್ತಿರುವ ಓದುಗರು ಮತ್ತು ವೀಕ್ಷಕರು ಯಾವುದೇ ಗೊಂದಲಕ್ಕೆ ಒಳಗಾಗದಂತೆ ನಮ್ಮ ಅಧಿಕೃತ ವೆಬ್ಸೈಟ್ ಸುದ್ದಿಗಳನ್ನು ಓದಿ,ಅದರಲ್ಲಿನ ಮಾಹಿತಿಗಳನ್ನು ತಿಳಿದುಕೊಳ್ಳುವಂತಾಗಬೇಕು ಎನ್ನುವುದು ನಮ್ಮ ಆಶಯವಾಗಿದೆ.
ಸoಪಾದಕರು, ವಿಸ್ಮಯ ಟಿ.ವಿ