ಬಿಜೆಪಿಯಿಂದ ಮಹಿಳೆಯರ ವಿಶೇಷ 33% ಮೀಸಲಾಯಿ ವಿಧೇಯಕಕ್ಕೆ ಅಭಿನಂದನೆ: ಪಟಾಕಿ ಸಿಡಿಸಿ ಸಿಹಿಹಂಚಿ ಸಂಭ್ರಮ
ಭಟ್ಕಳ: ಪ್ರಧಾನಿ ಮೋದಿ ಅವರು ಹೊಸ ಸಂಸತ ಅಧಿವೇಶನದಲ್ಲಿ ಮಹಿಳೆಯರಿಗೆ ವಿಶೇಷವಾಗಿ 33% ಮೀಸಲಾತಿ ನೀಡಿದ ವಿಧೇಯಕ ಬಿಲ್ ಮಂಡಿಸಿದ ಕೇಂದ್ರ ಸರಕಾರಕ್ಕೆ ಭಟ್ಕಳ ಬಿಜೆಪಿ ಮಂಡಲದಿoದ ಸಂಶುದ್ದೀನ್ ಸರ್ಕಲನಲ್ಲಿ ಅಭಿನಂದಿಸಿ ಪಟಾಕಿ ಸಿಡಿಸಿ ಸಂಭ್ರಮಿಸಲಾಯಿತು. ಈ ವೇಳೆ ನಂತರ ಮಾತನಾಡಿದ ಮಂಡಲಾಧ್ಯಕ್ಷ ಸುಬ್ರಾಯ ದೇವಾಡಿಗ ‘ದೇಶದಲ್ಲಿ ಮಹಿಳೆಯರಿಗಾಗಿ ವಿಶೇಷ ಮೀಸಲಾತಿ ನೀಡುವ ಹಿನ್ನೆಲೆ ಕೇಂದ್ರ ಸರಕಾರವು ಹೊಸ ಸಂಸತ್ ವಿಶೇಷ ಅಧಿವೇಶನದಲ್ಲಿ ಐತಿಹಾಸಿಕವಾಗಿ ವಿಧೇಯಕ ಬಿಲ್ ಮಂಡಿಸಿದೆ.
ಮಹಿಳೆಯರು ಎಲ್ಲಾ ಕ್ಷೇತ್ರಗಳಲ್ಲಿ ಮುನ್ನಡೆಯುತ್ತಿದ್ದಾರೆ. ಆದ್ದರಿಂದ, ನೀತಿ ನಿರೂಪಣೆಯಲ್ಲಿ ನಮ್ಮ ತಾಯಂದಿರು, ಸಹೋದರಿಯರು ಮತ್ತು ಮಹಿಳೆಯರು ತಮ್ಮ ಗರಿಷ್ಠ ಕೊಡುಗೆಯನ್ನು ನೀಡುವುದು ಮತ್ತು ಪ್ರಮುಖ ಪಾತ್ರವನ್ನು ವಹಿಸುವುದು ಅತ್ಯಗತ್ಯ. ಈ ಕಾರಣಕ್ಕಾಗಿಯೇ ಈ ದಿನ ಅಮರವಾಗಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದರು. ಸುಮಾರು 25 ವರ್ಷಗಳಲ್ಲಿ ಏಳನೇ ಬಾರಿಗೆ ಮಹಿಳಾ ಮೀಸಲಾತಿ ಮಸೂದೆಯನ್ನು ಮಂಡಿಸಲಾಯಿತು. ಈ ಹಿನ್ನೆಲೆ ಕೇಂದ್ರ ಸರಕಾರದ ಈ ಮಹತ್ವದ ಐತಿಹಾಸಿಕ ವಿಧೇಯಕಕ್ಕೆ ಅಭಿನಂದಿಸಿದ್ದೇವೆ ಎಂದರು.
ಇದೇ ಸಂದರ್ಭದಲ್ಲಿ ಜಿಲ್ಲಾ ಬಿಜೆಪಿ ಕಾರ್ಯದರ್ಶಿ ಶಿವಾನಿ ಶಾಂತಾರಾಮ ಮಾತನಾಡಿ ‘ ಮಹಿಳೆಯರಿಗೆ ಅಗತ್ಯವಾಗಿ ಈ ಮೀಸಲಾತಿಯ ಅವಶ್ಯಕತೆ ಇದ್ದು, ಈ ನಿಟ್ಟಿನಲ್ಲಿ ನಮ್ಮ ಕೇಂದ್ರ ಸರಕಾರ ಪ್ರಧಾನಿ ಮೋದಿ ಅವರು ಈ ವಿಧೇಯಕ ಮಂಡಿಸಿ ಇನ್ನು ಮುಂದೆ ಅದು ಕಾನೂನಾಗಿ ಜಾರಿಗೊಳ್ಳಲಿದೆ. ಇದರಲ್ಲಿ 15% ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ಮೀಸಲಾತಿ ನೀಡಲಾಗಿದೆ. ಈ ವಿಧೇಯಕದಿಂದ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಜನಪ್ರತಿನಿಧಿಯಾಗಿ ಕೆಲಸ ಮಾಡಲು ಅವಕಾಶ ನೀಡಿದಂತಾಗಿದೆ. ಬಿಜೆಪಿಯಲ್ಲಿ ಮಹಿಳೆಯರ ಬಲ ಹೆಚ್ಚಿದ್ದು ನಮ್ಮ ಪಕ್ಷಕ್ಕೆ ಇದು ಇನ್ನಷ್ಟು ಅನುಕೂಲವಾಗಿದೆ ಎಂದು ಪ್ರಧಾನಿ ಮೋದಿ ಅವರಿಗೆ ಅಭಿನಂದಿಸಿದರು.
ಈ ಸಂಧರ್ಭದಲ್ಲಿ ಸಂಶುದ್ದೀನ್ ಸರ್ಕಲನಲ್ಲಿ ಪಟಾಕಿ ಸಿಡಿಸಿದ ಬಿಜೆಪಿ ಕಾರ್ಯಕರ್ತರು ನಂತರ ಒಬ್ಬರಿಗೊಬ್ಬರು ಸಿಹಿ ಹಂಚಿ ಅಭಿನಂದಿಸಿ ಸಂಭ್ರಮಿಸಿದರು. ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗೋವಿಂದ ನಾಯ್ಕ, ಶ್ರೀಕಾಂತ ನಾಯ್ಕ, ಶ್ರೀನಿವಾಸ ನಾಯ್ಕ, ಬಿಜೆಪಿ ಮಹಿಳಾ ಮೋರ್ಚಾದ ಅಧ್ಯಕ್ಷೆ ಸವಿತಾ ಗೊಂಡ, ಶ್ರೇಯಾ ಮಹಾಲೆ ಸೇರಿದಂತೆ ನೂರಾರು ಕಾರ್ಯಕರ್ತರು ಇದ್ದರು.
ವಿಸ್ಮಯ ನ್ಯೂಸ್, ಉದಯ್ ಎಸ್ ನಾಯ್ಕ, ಭಟ್ಕಳ