Follow Us On

WhatsApp Group
Important
Trending

ಆಟವಾಡುತ್ತಿದ್ದ ಮೂರುವರ್ಷದ ಮಗು ಆಕಸ್ಮಿಕವಾಗಿ ಬಾವಿಗೆ ಬಿದ್ದು ಸಾವು

WhatsApp Group Join Now

ಶಿರಸಿ: ಆಟವಾಡುತ್ತಿದ್ದ ಮಗುವೊಂದು ಆಕಸ್ಮಿಕವಾಗಿ ಬಾವಿಗೆ ಬಿದ್ದು ಮೃತಪಟ್ಟ ಘಟನೆ ತಾಲೂಕಿನ ಸಿ.ಪಿ.ಬಜಾರ್ ನಲ್ಲಿ ನಡೆದಿದೆ. ಈಕೆಯ ತಾಯಿ ಬಾವಿಯಿಂದ ನೀರು ತೆಗೆಯುತ್ತಿದ್ದು, ಈ ವೇಳೆ ಅಲ್ಲೆ ಪಕ್ಕದಲ್ಲಿ ಆಟವಾಡುತ್ತಿದ್ದ ಮಗು ಬಾವಿಗೆ ಬಿದ್ದಿದ್ದಾಳೆ. ಇದನ್ನು ಗಮನಿಸಿದ ತಾಯಿ ರಕ್ಷಣೆಗಾಗಿ , ಸಹಾಯಕ್ಕಾಗಿ ಕೂಗಿಕೊಂಡಿದ್ದಾಳೆ. ಈ ವೇಳೆ ಸ್ಥಳೀಯರೊಬ್ಬರು ಕೂಡಲೇ ಬಾವಿಗೆ ಇಳಿದು, ಪಟ್ಟ ಮಗುವನ್ನು ರಕ್ಷಿಸಲು ಪ್ರಯತ್ನಿಸಿದ್ದಾರೆ. ಆದರೆ, ಮಗು ಆವಾಗಲೇ ಮೃತಪಟ್ಟಿತ್ತು. ಅನುಶ್ರೀ ರಾಜಶೇಖರ್ ನೂಲಾ ಶೆಟ್ಟರ್ ಮೃತಪಟ್ಟ ಬಾಲಕಿ. ನಗರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.

ವಿಸ್ಮಯ ನ್ಯೂಸ್, ಶಿರಸಿ

Back to top button