Important
Trending

Kumta Jatre: ಕುಮಟಾ ಜಾತ್ರೆಗೆ ಭರದ ಸಿದ್ಧತೆ: ಫೆಬ್ರವರಿ 16 ರಂದು ಮಹಾರಥೋತ್ಸವ

ಕುಮಟಾ: ಉತ್ತರಕನ್ನಡ ಜಿಲ್ಲೆಯ ಸುಪ್ರಸಿದ್ಧ ಜಾತ್ರೆಗಳಲ್ಲಿ ಒಂದಾದ ಕುಮಟಾದ ಶ್ರೀ ವೆಂಕಟರಮಣ ದೇವರ ಮಹಾರಥೋತ್ಸವವು ( Kumta Jatre) ಇದೇ ಫೆಬ್ರುವರಿ 16 ರಂದು ಅದ್ಧೂರಿಯಾಗಿ ನಡೆಯಲಿದೆ. ಈ ನಿಟ್ಟಿನಲ್ಲಿ ದೇವಾಲಯದಲ್ಲಿ ಜಾತ್ರೆಯ ತಯಾರಿ ಜೋರಾಗಿದೆ. ವಿವಿಧ ಧಾರ್ಮಿಕ ಕಾರ್ಯಕ್ರಮ ಸೇರಿದಂತೆ ಸ್ಥಳೀಯ ಹಾಲಕ್ಕಿ ಸಮಾಜದವರಿಂದ ಶ್ರೀ ದೇವರ ರಥವನ್ನು ಕಟ್ಟುವ ಕಾರ್ಯ ಭರದಿಂದ ಸಾಗಿದೆ.

( Kumta Jatre) ಶ್ರೀ ದೇವರ ಜಾತ್ರಾ ಮಹೋತ್ಸವದ ವಿಶೇಷವಾಗಿ ಮಹಾರಥೋತ್ಸವಕ್ಕೂ ಮುಂಚಿತವಾಗಿ ಶ್ರೀ ದೇವರ ಪ್ರಾರ್ಥನೆ, ಪುಣ್ಯಾಹವಾಚನ, ಪಂಚಾoಗಶ್ರವಣ ಉತ್ಸವ, ಗರುಡೋತ್ಸವ, ಮೃತ್ತಿಕಾಹರಣ, ಧ್ವಜಾರೋಹಣ, ಮಹಾಬಲಿ, ಸಂತರ್ಪಣೆ, ಹಗಲೋತ್ಸವ, ಪುಷ್ಪ ರಥೋತ್ಸವ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನೆರವೇರುತ್ತಿದೆ. ಅದೇ ರೀತಿ ಮಹಾರಥ ಹಾಗೂ ಪುಷ್ಪ ರಥದ ನಿಮಾಣಕಾರ್ಯ ಪ್ರಾರಂಭಗೊoಡಿದೆ.

ಜಿಲ್ಲೆ ಸೇರಿದಂತೆ ರಾಜ್ಯ ಹೊರ ರಾಜ್ಯಗಳಲ್ಲಿಯೂ ಭಕ್ತಾಧಿಗಳನ್ನು ಹೊಂದಿರುವ ಕುಮಟಾದ ಶ್ರೀ ವೆಂಕಟರಮಣ ದೇವರ ಮಹಾರಥೋತ್ಸವವು ಅತ್ಯಂತ ವಿಶೇಷವಾಗಿದೆ. ಸಾವಿರಾರು ವರ್ಷಗಳ ಇತಿಹಾಸ ಹೊಂದಿರುವ ಈ ದೇವಾಲಯವು ತನ್ನದೇ ಆದ ಭಕ್ತ ಸಮೂಹವನ್ನು ಹೊಂದಿದೆ. ಅದೇ ರೀತಿ ವರ್ಷಪ್ರತಿಯಂತೆ ಶ್ರೀ ದೇವರ ರಥೋತ್ಸವಕ್ಕೆ ಸಾವಿರಾರು ಭಕ್ತರು ಪಾಲ್ಗೊಂಡು ರಥ ಎಳೆದು ಪುನೀತರಾಗುತ್ತಾರೆ. ಜಾತ್ರಾ ಮಹೋತ್ಸವದ ಅಂಗವಾಗಿ ಪ್ರತಿ ನಿತ್ಯ ದೇವಾಲಯದಲ್ಲಿ ಅನೇಕ ಧಾರ್ಮಿಕ ಕಾರ್ಯಕ್ರಮಗಳು ಸಂಪನ್ನಗೊಳ್ಳುತ್ತಿದೆ.

ವಿಸ್ಮಯ ನ್ಯೂಸ್, ಯೋಗೇಶ ಮಡಿವಾಳ, ಕುಮಟಾ.

Back to top button