ಪಕ್ಷದಲ್ಲಿ ಇರಲು ಇಷ್ಟವಿಲ್ಲವಾದರೆ ರಾಜೀನಾಮೆ ನೀಡಿ: ಶಾಸಕ ಶಿವರಾಮ ಹೆಬ್ಬಾರ್ ಗೆ ಸುನೀಲ್ ಕುಮಾರ ತಿರುಗೇಟು
ಶಿರಸಿ: ಪಕ್ಷ ಬದಲಾಯಿಸುವವರ ಬಗ್ಗೆ ಎಚ್ಚರವಹಿಸಬೇಕಿದೆ. ಪಕ್ಷದಲ್ಲಿ ಇರಲು ಇಷ್ಟವಿಲ್ಲವಾದರೆ ರಾಜೀನಾಮೆ ನೀಡಿ, ಧೈರ್ಯವಿದ್ದರೆ ಉಪ ಚುನಾವಣೆ ಎದುರಿಸಲಿ ಎಂದು ಶಾಸಕ ಶಿವರಾಮ ಹೆಬ್ಬಾರ್ ಗೆ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಹಾಗೂ ಕಾರ್ಕಳ ಶಾಸಕ ವಿ.ಸುನೀಲಕುಮಾರ ತಿರುಗೇಟು ನೀಡಿದರು. ಅವರು ಬನವಾಸಿಯಲ್ಲಿ ಮಾಧ್ಯಮದವರ ಜತೆ ಮಾತನಾಡಿ, ಬಿಜೆಪಿಯು ಕಾರ್ಯಕರ್ತರ ಆಧಾರ ಪಕ್ಷವಾಗಿದ್ದು, ಬಿಜೆಪಿಯಿಂದ ಎಲ್ಲ ಅವಕಾಶ ಸಿಕ್ಕಿದೆ. ಲಾಭ ಪಡೆದುಕೊಂಡಿರುವುದು ಬಿಜೆಪಿಯಿಂದ. ಯಾಕೆ ಅವರು ಪ್ರಚಾರಕ್ಕೆ ಬರುತ್ತಿಲ್ಲ ಎಂಬುದನ್ನು ಅವರೇ ಸ್ಪಷ್ಟಪಡಿಸಬೇಕು ಎಂದರು.
ಈ ಚುನಾವಣೆ ಭಾರತ ಭವಿಷ್ಯ ಹಾಗೂ ಬದುಕಿನ ನಡುವಿನ ಚುನಾವಣೆಯಾಗಿದ್ದು, ನರೇಂದ್ರ ಮೋದಿ ಮೂರನೆಯ ಬಾರಿಗೆ ಪ್ರಧಾನಿಯಾಗಬೇಕಿರುವುದು ಅನಿವಾರ್ಯ ಎಂದು ಜನರು ಮಾತನಾಡಿಕೊಳ್ಳುತ್ತಿದ್ದಾರೆ. ಅವರ ಬಲ ನೀಡಲು ಉತ್ತರಕನ್ನಡ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ ಜತೆ ಬಿಜೆಪಿ ಬೆಂಬಲಿಸಬೇಕು ಎಂದು ಹೇಳಿದರು. ಈ ವೇಳೆ ರಾಜ್ಯ ಕಾರ್ಯಕಾರಿಣಿ ಸದಸ್ಯ ಕೆ.ಜಿ.ನಾಯ್ಕ, ರಾಜ್ಯ ವಕ್ತಾರ ಹರಿಪ್ರಕಾಶ ಕೋಣೆಮನೆ ಸೇರಿದಂತೆ ಮತ್ತಿತರರು ಇದ್ದರು.
ವಿಸ್ಮಯ ನ್ಯೂಸ್, ಶಿರಸಿ