Important
Trending

ಕ್ಯಾಶ್ ಬಾಕ್ಸ್ ಹೊತ್ತೊಯ್ದ ಕಳ್ಳರು! ಕಳ್ಳರ ಕೈ ಚಳಕ ನೋಡಿ?

ಅಂಕೋಲಾ: ಮಳೆಗಾಲ ಆರಂಭವಾಗುತ್ತಿದ್ದಂತೆ ತಾಲೂಕಿನಲ್ಲಿ ಮತ್ತೆ ಕಳ್ಳರ ಕೈಚಳಕ ಮುಂದುವರಿದಂತಿದ್ದು,ಬೈಕ್ ಕಳ್ಳತನ,ಅಂಗಡಿ ಕಳ್ಳತನದಂತಹ ಕೃತ್ಯಕ್ಕೆ ಮುಂದಾದಂಗುತ್ತಿದ್ದಾರೆ. ಪಟ್ಟಣದ ಬಂಡಿ ಬಜಾರಿನಲ್ಲಿ ಹನುಮಾನ್ ಕೋಲ್ಡ್ರಿಂಕ್ಸ್ ಹೆಸರಿನಲ್ಲಿ ಬಬ್ರುವಾಡ ಗ್ರಾ ಪಂ ವ್ಯಾಪ್ತಿಯ ಸಹೋದರರು, ಶುಚಿ ರುಚಿಯಾದ ತಂಪು ಪಾನೀಯ ಮತ್ತು ಜ್ಯೂಸ್ ತಯಾರಿಸಿ ಗ್ರಾಹಕರ ಪ್ರೀತಿ ವಿಶ್ವಾಸ ಗಳಿಸಿ, ಕಳೆದ ಅನೇಕ ವರ್ಷಗಳಿಂದ ಕಷ್ಟಪಟ್ಟು ದುಡಿದು, ತಮ್ಮ ಸಂಸಾರ ನಿಭಾಯಿಸುತ್ತಿದ್ದರು.

ಮಾಜಿ ಸಂಸದ ಅನಂತ್‌ಕುಮಾರ್ ಹೆಗಡೆ ಮನೆಯಲ್ಲಿ ಬೆಂಕಿ ಅನಾಹುತ

ಜೂನ್ 24 ರ ಸೋಮವಾರ ಎಂದಿನಂತೆ ವ್ಯಾಪಾರ – ವಹಿವಾಟು ಮುಗಿಸಿ ರಾತ್ರಿ ಅಂಗಡಿ ಲಾಕ್ ಮಾಡಿ ಹೋಗಿದ್ದರಾದರೂ, ಬೆಳಕು ಹರಿಯುವುದರೊಳಗೆ ಅವರ ಅಂಗಡಿ ಕಳ್ಳತನವಾಗಿದ್ದು, ಬಂದು ನೋಡುವಷ್ಟರಲ್ಲಿ ಕ್ಯಾಶ್ ಬಾಕ್ಸ್ ನ್ನೇ (ಗಲ್ಲಾಪೆಟ್ಟಿಗೆ ) ಕಳ್ಳರು ಹೊತ್ತೈದಿರುವುದು ಕಂಡು ಬಂದಿದೆ. ಅಂಗಡಿಯ ವಿದ್ಯುತ್ ಬಿಲ್ ತುಂಬಲು ಕಷ್ಟ ಪಟ್ಟು ಕೂಡಿಟ್ಟಿದ್ದ ಹಣ ಹಾಗೂ ಇತರೆ ಅಲ್ಪ ಪ್ರಮಾಣದ ಹಣ ಅದರಲ್ಲಿ ಇತ್ತಲ್ಲದೇ, ಎಟಿಎಂ ಕಾರ್ಡ್ ಮತ್ತಿತರ ಕೆಲ ದಾಖಲೆ ಪತ್ರಗಳು ಇದ್ದವು ಎನ್ನುತ್ತಾರೆ ಅಂಗಡಿ ಮಾಲಕರು.

112 ತುರ್ತು ಪೊಲೀಸ್ ಸಿಬ್ಬಂದಿಗಳು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದರು. ಅಂಗಡಿಯ ಪಕ್ಕದಲ್ಲಿ ಪಿ. ಎಲ್ ಡಿ ಬ್ಯಾಂಕಿಗೆ ಹೋಗುವ ಕಚ್ಚಾ ರಸ್ತೆ ಇದ್ದು, ಅಲ್ಲಿ ಹೋದ ಕಳ್ಳರು, ಅತೀ ಸುಲಭವಾಗಿ ಏರಬಹುವಾದ ಕಡಿಮೆ ತಗ್ಗಿನ ಹಳೆಯ ಅಂಗಡಿಯ ಮೇಲ್ಬಾವಣಿ ಹತ್ತಿ,ಹಂಚುಗಳನ್ನು ಸರಿಸಿ, ಕೆಳಗಿಳಿದು,ಅಂಗಡಿಯ ದೊಡ್ಡ ಪ್ರೀಜರ ಮೇಲೆ ಇಟ್ಟಿದ್ದ ಕ್ಯಾಶ್ ಬಾಕ್ಸ್ ನ್ನೇ ಕದ್ದೊಯ್ದಿದ್ದಾರೆ ಎನ್ನಲಾಗಿದೆ.ಕಳ್ಳರು ಬಂದು ಹೋಗಿರುವ ದೃಶ್ಯಾವಳಿಯ ತುಣುಕು ಬ್ಯಾಂಕಿನ ಸಿಸಿ ಕ್ಯಾಮೆರಾದಲ್ಲಿ ದಾಖಲಾಗಿರುವ ಸಾಧ್ಯತೆ ಕೇಳಿಬಂದಿದೆ.

ಸ್ಥಳೀಯರೇ ಈ ಕೃತ್ಯ ಮಾಡಿಡಬಹುದೇ ಅಥವಾ ಇತರರೊಂದಿಗೆ ಶಾಮೀಲಾ ಗಿಬಹುದೇ ಇಲ್ಲವೇ ಹೊರಗಿನ ಕಳ್ಳರೇ ಈ ಕೃತ್ಯ ಎಸಗಿದರೇ ಎಂಬ ಕುರಿತು ಪೊಲೀಸ್ ತನಿಖೆಯಿಂದ ತಿಳಿದು ಬರಬೇಕಿದ್ದು, ಪೊಲೀಸರು ಕಳ್ಳತನ ಪ್ರಕರಣ ಭೇಧಿಸಿಯಾರೇ ಕಾದು ನೋಡಬೇಕಿದೆ. ಇತ್ತೀಚೆಗೆ ನಿಧನರಾಗಿದ್ದ ಹೆಸರಾಂತ ರಿಯಲ್ ಎಸ್ಟೇಟ್ ಉದ್ಯಮಿ ಓರ್ವರ ಬಂಡೀ ಬಜಾರನಲ್ಲಿರುವ ಆಫೀಸ್ ಗೆ ಕಳ್ಳನೋರ್ವ ಈ ಹಿಂದೆ ಫೆಬ್ರುವರಿ ತಿಂಗಳಲ್ಲಿ ,ಹಂಚು ತೆಗೆದು ಒಳನುಗ್ಗಿ,ಅಲ್ಲಿ ಇಲ್ಲಿ ತಡಕಾಡಿ, ನಂತರ ಏನನ್ನೋ ತನ್ನ ಕಿಸೆಯಲ್ಲಿ ಹಾಕಿಕೊಂಡು ಪರಾರಿಯಾದ ದೃಶ್ಯ,ಅಲ್ಲಿನ ಸಿಸಿ ಕ್ಯಾಮೆರಾದಲ್ಲಿ ದಾಖಲಾಗಿತ್ತಾದರೂ ಕಳ್ಳನ ಜಾಡು ಪತ್ತೆ ಹಚ್ಚುವಲ್ಲಿ ಪೊಲೀಸರಿಗೆ ಈ ವರೆಗೂ ಸಾಧ್ಯವಾಗಿಲ್ಲ ಎನ್ನಲಾಗಿದೆ.

ಇದೇ ಸ್ಥಳದ ಅಕ್ಕ ಪಕ್ಕದ ಅಂಗಡಿಗೂ ಅದಾವುದೋ ಕಳ್ಳರು ನುಗ್ಗುವ ಪ್ರಯತ್ನ ಮಾಡಿದ್ದರು ಎನ್ನಲಾಗಿತ್ತು.ಮಳೆಗಾಲ ಆರಂಭವಾಗುತ್ತಿದ್ದಂತೆ ಮತ್ತೆ ಕಳ್ಳರ ಕೈ ಚಳಕ ಮುಂದುವರಿದಿದ್ದು,ಪೊಲೀಸರು ಬಿರು ಪಹರೆ ನಡೆಸಬೇಕಿದೆ. ಇದೇ ವೇಳೆ ಸಾರ್ವಜನಿಕರು ತಮ್ಮ ಮನೆ ಅಂಗಡಿ ಮತ್ತಿತರ ಖಾಸಗಿ ಸ್ಥಳಗಳಲ್ಲಿ ಸಿಸಿ ಕ್ಯಾಮೆರಾ ಅಳವಡಿಸುವುದು ಮತ್ತಿತರ ಸುರಕ್ಷತೆ ಕೈಗೊಳ್ಳಬೇಕಿದೆ ಮತ್ತು ತಮ್ಮ ಸುತ್ತಮುತ್ತ ಯಾವುದೇ ವ್ಯಕ್ತಿಗಳ ಅನುಮಾನಾಸ್ಪದ ಓಡಾಟ ಕಂಡುಬಂದಲ್ಲಿ, ಮತ್ತಿತರ ತುರ್ತು ಸಂದರ್ಭಗಳಲ್ಲಿ 112 ಇಲ್ಲವೇ ಸ್ಥಳೀಯ ಪೊಲೀಸ್ ಠಾಣೆಗೆ ಮಾಹಿತಿ ನೀಡಬೇಕಿದೆ.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Back to top button