Follow Us On

WhatsApp Group
Important
Trending

ಕುಮಟಾದಲ್ಲಿ ಒಂದು ಎಕರೆಗೂ ಅಧಿಕ ಪ್ರದೇಶದಲ್ಲಿ ಗುಡ್ಡಕುಸಿತ: ಕುಮಟಾ-ಸಿದ್ದಾಪುರ ಮಾರ್ಗ ಬಂದ್

ಕುಮಟಾ: ಉತ್ತರಕನ್ನಡದಲ್ಲಿ ಭಾರೀ ಮಳೆಗೆ ಗುಡ್ಡಕುಸಿತ ಮುಂದುವರಿದಿದೆ. ಅಂಕೋಲಾದ ಶಿರೂರು, ಕುಮಟಾದ ಬರ್ಗಿ ಬಳಿಕ ಇದೀಗ ಸಿದ್ದಾಪುರ ಕುಮಟಾ ಮಾರ್ಗವು ಉಳ್ಳೂರಮಠ ಕ್ರಾಸ್ ಬಳಿ ಬೃಹತ್ ಪ್ರಮಾಣದಲ್ಲಿ ಗುಡ್ಡ ಕುಸಿತವಾಗಿದೆ. ಸುಮಾರು ಮುಕ್ಕಾಲು ಕಿಲೋಮಿಟರ್ ದೂರದಿಂದ ಗುಡ್ಡ ಕುಸಿದು ಬಂದು ರಸ್ತೆಯ ಮೇಲೆ ಬಿದ್ದಿದೆ. ಮತ್ತು ಗುಡ್ಡ ಕುಸಿಯುತ್ತಲೇ ಎಂದು ಪ್ರತ್ಯಕ್ಷದರ್ಶಿಗಳು ವಿಸ್ಮಯ ಟಿ.ವಿಗೆ ಮಾಹಿತಿ ನೀಡಿದ್ದಾರೆ.

ಸುಮಾರು ಒಂದು ಎಕರೆಗೂ ಅಧಿಕ ಜಾಗದಲ್ಲಿ ಗುಡ್ಡಕುಸಿತವಾಗಿದ್ದು, ಇದರಿಂದ ಕುಮಟಾ-ಸಿದ್ದಾಪುರ ರಸ್ತೆ ಸಂಚಾರ ಸ್ಥಗಿತವಾಗಿದೆ. ಬೃಹತ್ ಪ್ರಮಾಣದಲ್ಲಿ ಮರಗಳು ರಸ್ತೆಯಲ್ಲಿ ಮೇಲೆ ಬಂದು ಬಿದ್ದಿದೆ.

ಬ್ಯೂರೋ ರಿಪೋರ್ಟ್ ವಿಸ್ಮಯ ನ್ಯೂಸ್

Back to top button