Focus News
Trending

ಹೊನ್ನಾವರದಲ್ಲಿ ರಾಷ್ಟ್ರೀಯ ಕೊಂಕಣಿ ಮಾನ್ಯತಾ ದಿನ ಆಚರಣೆ

ಹೊನ್ನಾವರ : ತಾಲೂಕಿನ ಕೊಂಕಣಿ ಸಂಘಟನೆಯಾದ ‘ಕೊಂಕಣಿ ಕಲಾ ಕುಟಮ್’(ರಿ) ಇವರ ನೇತ್ರತ್ವದಲ್ಲಿ ಸೆಪ್ಟೆಂಬರ್ 01 ರಂದು ನಗರದ ಸೋಷಿಯಲ್ ಕ್ಲಬ್ ಸಭಾಭವನದಲ್ಲಿ 32 ನೇ ರಾಷ್ಟ್ರೀಯ ಕೊಂಕಣಿ ಮಾನ್ಯತಾ ದಿನವನ್ನು ವಿಜ್ರಂಭಣೆಯಿoದ ಆಚರಿಸಲಾಯಿತು. ಆರಂಭದಲ್ಲಿ ಸಂಘದ ಸದಸ್ಯರಾದ ಶ್ರೀಮತಿ ಸಂಗೀತಾ ಡಿಸೋಜ ಕುಟುಂಬದವರು ಪ್ರಾರ್ಥನೆ ಗೀತೆಯನ್ನು ಹಾಡಿದರು.

ಸಂಘದ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಜೇಕಬ್ ಫರ್ನಾಂಡಿಸ್ ಇವರು ತಮ್ಮ ಪ್ರಾಸ್ತಾವಿಕ ನುಡಿಗಳಲ್ಲಿ ಈ ದಿನದ ಮಹತ್ವವನ್ನು ತಿಳಿಸಿದರು ಹಾಗೂ ಎಲ್ಲರನ್ನು ಸ್ವಾಗತಿಸಿದರು. ಈ ಸಂಧರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ಶ್ರೀ ಹೆರ್ನಿ ಲೀಮಾ ಅವರನ್ನು ಸಂಘಟನೆಯ ಪರವಾಗಿ ಸನ್ಮಾನಿಸಲಾಯಿತು.

ಸನ್ಮಾನ ಸ್ವೀಕರಿಸಿದ ಮುಖ್ಯ ಅತಿಥಿಗಳು ‘ಸಂವಿಧಾನದ 8 ನೇ ಪರಿಚ್ಚೇದದಲ್ಲಿ ಕೊಂಕಣಿ ಭಾಷೆಗೆ ರಾಷ್ಟ್ರೀಯ ಮಾನ್ಯತೆ ದೊರಕಿರುವುದು ನಮ್ಮೆಲ್ಲ ಕೊಂಕಣಿ ಭಾಷಿಕರ ಸೌಭಾಗ್ಯ’ ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು. ಸಂಘಟನೆಯ ಅಧ್ಯಕ್ಷ ಶ್ರೀ ಸ್ಟೀಫನ್ ರೋಡ್ರಿಗೀಸ್ ಮಾತನಾಡಿ ನಮ್ಮ ಮಾತ್ರ ಭಾಷೆ ಮತ್ತು ಸಂಸ್ಕೃತಿಯನ್ನು ಮುಂದಿನ ಪೀಳಿಗೆಗೆ ಹಸ್ತಾಂತರಿಸುವ ಪ್ರಕ್ರಿಯೆಯಲ್ಲಿ ಎಲ್ಲರು ತೊಡಗಿಸಿಕೊಳ್ಳುವಂತೆ ಕರೆಕೊಟ್ಟರು.

ಕಾರ್ಯಕ್ರಮದ ಸಂಚಾಲಕರಾದ ಶ್ರೀ ಅಪೀಪನ್ ಫರ್ನಾಂಡಿಸ್ ಎಲ್ಲರನ್ನು ವಂದಿಸಿದರು. ಕಲಾವಿದ ಶ್ರೀ ಸಾಮ್ಸನ್ ನೇತ್ರತ್ವದಲ್ಲಿ ಹಲವಾರು ಸದಸ್ಯರು ವಿವಿಧ ಕೊಂಕಣಿ ಸಾಂಸ್ಕೃತಿಕ ಕಾರ್ಯಕ್ರಮವನ್ನು ಪ್ರದರ್ಶಿಸಿದರು. ಸಂಘಟನೆಯ ವತಿಯಿಂದ ಭೋಜನಾ ವ್ಯವಸ್ಥೆ ಮಾಡಲಾಗಿತ್ತು.

ವಿಸ್ಮಯ ನ್ಯೂಸ್, ವಿವೇಕ್ ಶೇಟ್, ಹೊನ್ನಾವರ

Back to top button