Follow Us On

WhatsApp Group
Important
Trending

ಶಿರೂರು ಗುಡ್ಡ ಕುಸಿತ ಪ್ರದೇಶದಲ್ಲಿ ನಿಂತು ಹೋದ ಯಂತ್ರಗಳ ಸದ್ದು ! ಅರ್ಜುನನ ತೆಗೆದೊಡನೆ ನಿರ್ಜನವಾಯಿತೇ ಪ್ರದೇಶ ?

ನೊಂದ ಕುಟುಂಬಗಳಿಗೆ ಭವಿಷ್ಯದ ಹೊಸ ಬದುಕು ಕಟ್ಟಿಕೊಡುವವರಾರು?

ಅಂಕೋಲಾ: ಶಿರೂರು ಗುಡ್ಡ ಕುಸಿತ ದುರಂತದ ಬಳಿಕ ನಡೆಯುತ್ತಿದ್ದ 3 ನೇ ಹಂತದ ಶೋಧ ಕಾರ್ಯಾಚರಣೆಗೆ ಪೂರ್ತಿ ಬ್ರೇಕ್ ಬಿದ್ದಿದ್ದು , ಯಾವುದೇ ಯಂತ್ರ ಮತ್ತಿತರ ಸದ್ದುಗಳಿಲ್ಲದಿರುವುದು ಘಟನಾ ಸ್ಥಳದ ಸುತ್ತಮುತ್ತಲ ಪ್ರದೇಶದಲ್ಲಿ ನೀರವ ಮೌನ ಆವರಿಸಿದಂತಿದೆ. ಹೆದ್ದಾರಿ ಮಾರ್ಗವಾಗಿ ಸಂಚರಿಸುವ ಕೆಲ ಯಾತ್ರಾರ್ಥಿಗಳು ಮತ್ತಿತರರು ಘಟನಾ ಸ್ಥಳದ ಬಳಿ ನಿಂತು ವೀಕ್ಷಿಸುವುದು ಇಲ್ಲವೇ ಅವರಲ್ಲಿಯೇ ಕೆಲವರು ಫೋಟೋ ಕ್ಲಿಕ್ಕಿಸಿಕೊಳ್ಳುವುದನ್ನು ಹೊರತುಪಡಿಸಿದರೆ, ಅರ್ಜುನ್ ಶೋಧ ಕಾರ್ಯಾಚರಣೆ ವೇಳೆ ಕಂಡು ಬರುತ್ತಿದ್ದ ಜನಜಂಗುಳಿಯಾಗಲೀ , ಕಾರ್ಯಾಚರಣೆ ವೇಳೆ ಹಾಜರಿರುತ್ತಿದ್ದ ಪೊಲೀಸ್ ಮತ್ತಿತರ ಸಿಬ್ಬಂದಿಗಳಾಗಲೀ ,ಸ್ಥಳೀಯರಾಗಲೀ ಇವರೇ ಸಾರ್ವಜನಿಕರು ಮತ್ತಿತರರು ಎಂದಿನoತೆ ಕಂಡು ಬರದೇ ಈ ಸ್ಥಳ ನಿರ್ಜನ ಪ್ರದೇಶದಂತೆ ಕಂಡುಬರುತ್ತಿದೆ.

ನೇಮಕಾತಿ: ನಬಾರ್ಡ್ ನಲ್ಲಿ 108 ಉದ್ಯೋಗಾವಕಾಶ: SSLC ಆದವರು ಅರ್ಜಿ ಸಲ್ಲಿಸಬಹುದು

ಹವಾಮಾನ ವೈಪರಿತ್ಯ ಮತ್ತು ಸುಡು ಬಿಸಿಲು ಮತ್ತಿತರ ಕಾರಣಗಳು ಹಾಗೂ ಹಬ್ಬದಲ್ಲಿ ತಮ್ಮನ್ನು ತೊಡಗಿಸಿಕೊಳ್ಳುತ್ತಿರುವ ಇತರೆ ಕೆಲ ಜನರು ಹೆಚ್ಚಾಗಿ ಶಿರೂರು ಗುಡ್ಡ ಕುಸಿತ ಪ್ರದೇಶದತ್ತ ಮುಖ ಮಾಡಲು ಸಾಧ್ಯವಾಗಿರಲಿಕ್ಕಿಲ್ಲ ಎನ್ನುವದೂ ಸಾಂದರ್ಭಿಕ ಸತ್ಯದಂತಿದೆ.
ಗುಡ್ಡ ಕುಸಿತ ದುರ್ಘಟನೆಯಲ್ಲಿ ನಾಪತ್ತೆಯಾಗಿದ್ದ ಜಗನ್ನಾಥ್ ನಾಯ್ಕ ಮತ್ತು ಲೋಕೇಶ್ ನಾಯ್ಕ ಈವರೆಗೂ ಪತ್ತೆಯಾಗದಿರುವುದು ಮಾತ್ರ ಆಯಾ ಕುಟುಂಬಸ್ಥರ ಚಿಂತೆಗೆ ಕಾರಣವಾದಂತಿದೆ.

ಹೀಗಾಗಿ ನೊಂದ ಕುಟುಂಬಸ್ಥರು ಮಾತ್ರ ತಮ್ಮವರ ಅಗಲುವಿಕೆಯ ದುಃಖದ ನಡುವೆಯೂ ನೆಮ್ಮದಿ ಹಾಗೂ ಸಮಾಧಾನಕರ ಫಲಿತಾಂಶ ಬರಬಹುದೇ ಎಂದು ಕಾದು ಕುಳಿತುಕೊಳ್ಳುವಂತಾಗಿದೆ ಶಾಸಕ ಸೈಲ್ ನಿರಂತರ ಪ್ರಯತ್ನ ಹಾಗೂ ವಿಶೇಷ ಕಳಕಳಿ ಹಾಗೂ ನೇತೃತ್ವದಲ್ಲಿ ಶೋಧ ಕಾರ್ಯಾಚರಣೆ ಬಹುತೇಕ ಯಶಸ್ವಿಯಾಗಿದ್ದರೂ , ಜಗನ್ನಾಥ್ ನಾಯ್ಕ ಮತ್ತು ಲೋಕೇಶ್ ನಾಯ್ಕ ಮೃತ ಪಟ್ಟಿರುವ ಕುರುಹು ಅಧಿಕೃತವಾಗಿ ದೃಢಪಡುವವರೆಗೆ ಹಾಗೂ ಗುಡ್ಡದಿಂದ ಜರಿದು ನದಿಯೊಡಲು ಸೇರಿರುವ ಭಾರೀ ಪ್ರಮಾಣದ ಕಲ್ಲು ಬಂಡೆಗಳು ಮತ್ತು ಮಣ್ಣು ತೆರವು ಕಾರ್ಯಾಚರಣೆಯನ್ನು ಪೂರ್ಣಗೊಳಿಸುವವರೆಗೆ ,ಜಿಲ್ಲಾಡಳಿತ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರ ಮೇಲೆ ಹಾಗೂ ಸಂಬAಧಿತ ಇತರರೆಲ್ಲರ ಮೇಲೆ ಗುರುತರ ಜವಾಬ್ದಾರಿ ಇದ್ದು ,ಈ ಕುರಿತು ಸಂಬoಧಿಸಿದವರು ಸೂಕ್ತ ಕ್ರಮ ಕೈಗೊಳ್ಳುವರೆಂಬ ಆಶಾಭಾವನೆ ಹಲವರಲ್ಲಿದೆ.

ನೊಂದ ಕುಟುಂಬಸ್ಥರು ಮತ್ತು ಸ್ಥಳೀಯರು ಹಾಗೂ ಗಂಗಾವಳಿ ನದಿ ತೀರದ ಅಕ್ಕಪಕ್ಕದ ಜನರು ಭವಿಷ್ಯದ ನೆಮ್ಮದಿಗಾಗಿ ಚಿಂತಿಸುತ್ತ ಕುಳಿತುಕೊಳ್ಳುವಂತಾಗಿದೆ.ಅದೇ ರೀತಿ ಉಳುವರೆಯಲ್ಲಿ ಮನೆ ಕಳೆದುಕೊಂಡ ಹಾಗೂ ಇತರೆ ಸಂತ್ರಸ್ತರಿಗೆ ಹೊಸ ಬದುಕು ಕಟ್ಟಿಕೊಡುವದು ಅತಿ ಅವಶ್ಯವಿದೆ. ಹಲವು ಸಂಕಷ್ಟಗಳ ನಡುವೆಯೂ ಸ್ಥಳೀಯ ಶಾಸಕರಾದ ಸತೀಶ ಸೈಲ್ ,ಜಿಲ್ಲಾಧಿಕಾರಿಗಳು ,ಪೋಲಿಸ್ ವರಿಷ್ಠರು ಶೋಧ ಕಾರ್ಯಾಚರಣೆಗೆ ವಿಶೇಷ ಒತ್ತು ನೀಡಿದ್ದು ಅಭಿನಂದನೀಯ.

ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಮತ್ತು ವಿವಿಧ ಹಾಲಿ ಹಾಗೂ ಮಾಜಿ ಜನಪ್ರತಿನಿಧಿಗಳು , ಸಂಬAಧಿತರೆಲ್ಲರೂ ಗುಡ್ಡ ಕುಸಿತ ದುರಂತದಿoದ ನೊಂದವರ ಕಷ್ಟಕ್ಕೆ ಸ್ವಂದಿಸಲು ಬಂದಿದ್ದು ಸಮಾಧಾನದ ವಿಷಯ. ಆಡಳಿತ ವರ್ಗ ಮತ್ತಷ್ಟು ಚುರುಕಾಗಿ ಕ್ರಮ ಗಂಗಾವಳಿ ನದಿಯಲ್ಲಿ ರಾಶಿ ಬಿದ್ದಿರುವ ಕಲ್ಲು ಮಣ್ಣು ಮತ್ತಿತರ ಅವಶೇಷಗಳ ತೆರವಿಗೆ ಸೂಕ್ತ ಕ್ರಮ ತೆಗೆದುಕೊಳ್ಳಬೇಕಿದೆ ಮತ್ತು ಉಳುವರೆ ಸಂತ್ರಸ್ತರಿಗೆ ವಿಶೇಷ ನೆರವು ಪರಿಹಾರ ನೀಡಬೇಕಿದೆ ಎಂದು ಜಿಲ್ಲಾ ಹಾಲಕ್ಕಿ ಒಕ್ಕಲಿಗರ ಸಂಘದ ಅಧ್ಯಕ್ಷ ಹನುಮಂತ ಬೊಮ್ಮಗೌಡ ಇವರು ಆಗ್ರಹಪೂರ್ವಕವಾಗಿ ವಿನಂತಿಸಿದ್ದಾರೆ.

ವಿಸ್ಮಯ ನ್ಯೂಸ್, ವಿಲಾಸ ನಾಯಕ ಅಂಕೋಲಾ

Back to top button