ಹೊನ್ನಾವರ: ಜಲವಳ್ಳಿಯ ಲೋಕೇಶ ಗೌಡ ಎಂಬಾತನು ಜೂನ್ 26ರಂದು ಬೆಂಗಳೂರಿಗೆ ಹೊಟೇಲ್ ಕೆಲಸಕ್ಕೆ ಹೋಗುತ್ತೇನೆ ಎಂದು ಹೇಳಿ ಹೋದವನು, ನಾಪತ್ತೆಯಾಗಿದ್ದಾನೆ. ಕಣ್ಮರೆಯಾಗಿದ್ದ ಲೋಕೇಶ ಆರಂಭದಲ್ಲಿ ತಾನು ಎಲ್ಲಿದ್ದೇನೆ ಎಂದು ಸರಿಯಾಗಿ ಹೇಳದೆ ಮೊಬೈಲ್ ಫೋನ್ನಲ್ಲಿ ಸಂಪರ್ಕದಲ್ಲಿದ್ದ. ಆದರೆ, ಕಳೆದ ಆಗಸ್ಟ ತಿಂಗಳಿನಿoದ ಮೊಬೈಲ್ ಸಂಪರ್ಕಕ್ಕೆ ಸಿಗದೇ, ಮನೆಗೂ ಮರಳಿ ಬರದೇ ಎಲ್ಲಿಯೋ ಹೋಗಿ ಕಾಣೆಯಾಗಿದ್ದಾನೆ.
28 ವರ್ಷದ ಲೋಕೇಶ್ ದುಂಡುಮುಖ, ಗೋಧಿ ಮೈಬಣ್ಣ, ಸಧೃಡ ಮೈಕಟ್ಟನ್ನು ಹೊಂದಿದ್ದು, ಕನ್ನಡ ಭಾಷೆ ಮಾತನಾಡುತ್ತಾನೆ. ಆತನನ್ನು ಹುಡುಕಿಕೊಡುವಂತೆ ತಂದೆ ವೆಂಕಟೇಶ ಗೌಡ ಅವರು ಹೊನ್ನಾವರ ಪೊಲೀಸ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಕೊಂಡ ಪೊಲೀಸರು ಈತನನ್ನು ಯಾರಾದರೂ ಕಂಡರೆ ಹೊನ್ನಾವರ ಪೊಲೀಸ್ ಠಾಣೆಗೆ ತಿಳಿಸಲು ಕೋರಿದ್ದಾರೆ.
ವಿಸ್ಮಯ ನ್ಯೂಸ್, ವಿವೇಕ್ ಶೇಟ್, ಹೊನ್ನಾವರ