ಪುರಸಭೆಗೆ ಗೆದ್ದು ಬಂದ ನಾಗಪ್ಪ : ಹುಲಿ ದೇವರವಾಡಾ – ಆನಂದಗಿರಿ ಕ್ಷೇತ್ರದಲ್ಲಿ ಮೇಲುಗೈ
ಗೆದ್ದೆ ಗೆಲ್ಲುತ್ತೇವೆ ಎಂದುಕೊಂಡಿದ್ದ ಕಮಲ ಪಾಳಯದಲ್ಲಿ ನಿರಾಶೆ
ಅಂಕೋಲಾ: ಪುರಸಭೆಯ ವಾರ್ಡ್ ನಂ 14 ರಲ್ಲಿ ಈ ಹಿಂದಿನ ಸದಸ್ಯರಾಗಿದ್ದ ಜಗದೀಶ ನಾಯಕ ಅವರು ಅನಾರೋಗ್ಯದಿಂದ ಕಳೆದ ಕೆಲವು ತಿಂಗಳ ಹಿಂದೆ ಅಕಾಲಿಕ ಮರಣ ಹೊಂದಿದ್ದು , ಇದರಿಂದ ತೆರವಾಗಿದ್ದ ಸದಸ್ಯ ಸ್ಥಾನಕ್ಕೆ ಸಂಬಂಧಿಸಿದಂತೆ ನವೆಂಬರ್ 23 ರಂದು ನಡೆದಿದ್ದ ಉಪಚುನಾವಣೆಯ ಮತ ಎಣಿಕೆ ನ. 26 ರ ಮಂಗಳವಾರ ತಹಶೀಲ್ದಾರ್ ಕಚೇರಿ ಸಭಾಭವನದ ಮತ ಎಣಿಕೆ ಕೇಂದ್ರದಲ್ಲಿ ನಡೆದು ಫಲಿತಾಂಶ ಘೋಷಿಸಲಾಗಿದೆ. ಕೈ- ಕಮಲ ಅಭ್ಯರ್ಥಿಗಳ ಭಾರೀ ಪೈಪೋಟಿಯ ನಡುವೆಯೂ ನಿರೀಕ್ಷೆಯಂತೆ ಕಾಂಗ್ರೆಸ್ ನ ನಾಗಪ್ಪ ಗೌಡ ಗೆಲುವಿನ ನಗೆ ಬೀರಿದ್ದಾರೆ.
ಇವರು ತಮ್ಮ ಎದುರಾಳಿ ಬಿಜೆಪಿಯ ಮಂಗೇಶ ಗೌಡ ಅವರನ್ನು ಚುನಾವಣಾ ಅಖಾಡದಲ್ಲಿ ಸೋಲಿಸುವ ಮೂಲಕ ಹುಲಿದೇವರ ವಾಡಾ ಆನಂದಗಿರಿ ಕ್ಷೇತ್ರದಿಂದ ನೂತನ ಸದಸ್ಯರಾಗಿ ಪುರಸಭೆಗೆ ಆಯ್ಕೆಯಾಗಿದ್ದಾರೆ.ಹಾಲಿ ಚಾಲ್ತಿಯಲ್ಲಿರುವ ವಿಧಾನಸಭಾ ಮತದಾರರ ಪಟ್ಟಿಯನ್ವಯ ಚುನಾವಣೆ ನಡೆಸಲಾಗಿದ್ದು 333 ಗಂಡು ಮತ್ತು 355 ಹೆಣ್ಣು ಸೇರಿ ಒಟ್ಟೂ 688 ಮತದಾರರಿದ್ದರು . ಚಲಾವಣೆಯಾದ ಒಟ್ಟೂ 521 ಮತಗಳಲ್ಲಿ ಕಾಂಗ್ರೆಸ್ ( 286 ), ಬಿಜೆಪಿ ( 236 ) ನೋಟಾ (5 ) ಮತಗಳಿದ್ದು ನಾಗಪ್ಪ ಗೌಡ ವಿಜಯ ಸಾಧಿಸಿದ್ದಾರೆ. ಅವರಲ್ಲಿ ಗಂಡು ಮತ್ತು ಹೆಣ್ಣು ಸೇರಿ ಒಟ್ಟೂ ಮತದಾರರು ತಮ್ಮ ಹಕ್ಕು ಚಲಾಯಿಸಿದ್ದರು.ಚಲಾವಣೆಯಾದ ಒಟ್ಟು ಮತಗಳಲ್ಲಿ ಕಾಂಗ್ರೆಸ್ಸಿನ ನಾಗಪ್ಪ ರಾಕು ಗೌಡ ಮತ್ತು ಬಿಜೆಪಿಯಿಂದ ಮಂಗೇಶ ಸೋಮು ಗೌಡ ಮತಗಳನ್ನು ಪಡೆದಿದ್ದಾರೆ.
ಪುರ ಸಭೆಯಲ್ಲಿ ಆಡಳಿತ ರೂಢ ಬಿಜೆಪಿ ಈಗಿರುವ ತನ್ನ ಸದಸ್ಯತ್ವ ಬಲವನ್ನು ಹೆಚ್ಚಿಸಿಕೊಳ್ಳಲು ಹೆಚ್ಚಿನ ಪ್ರಯತ್ನ ಮತ್ತು ಮತದಾನಪೂರ್ವ ಕೊನೆಯ ಹಂತದಲ್ಲಿ ನಾನಾ ರೀತಿಯ ಕಸರತ್ತು ನಡೆಸಿತ್ತು ಎನ್ನಲಾಗಿದ್ದರೂ ,ಮತದಾರ ಪ್ರಭುಗಳು ನಾಗಪ್ಪನ ಕೈ ಹಿಡಿಯುವ ಮೂಲಕ ಎದುರಾಳಿಗಳಿಗೆ ಶಾಕ್ ನೀಡಿದ್ದಾರೆ. ಸ್ಥಳೀಯ ಯುವ ಮುಖಂಡ ನಾಗಪ್ಪ ಗೌಡ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿ ಗೆಲುವು ಸಾಧಿಸುವ ಮೂಲಕ 23 ಸದಸ್ಯ ಬಲದ ಅಂಕೋಲಾ ಪುರಸಭೆಯಲ್ಲಿ ಕಾಂಗ್ರೆಸ್ (10 ), ಬಿಜೆಪಿ (9) ಮತ್ತು ಪಕ್ಷೇತರರು (4 ) ಸ್ಥಾನ ಹೊಂದಿದಂತಾಗಿದೆ.
ತಮ್ಮ ಪಕ್ಷದ ಅಭ್ಯರ್ಥಿಯೇ ಗೆಲ್ಲಬಹುದೆಂಬ ನಿರೀಕ್ಷೆಯಲ್ಲಿ ಬೆಳಿಗ್ಗೆ ಮತದಾನದ ಕೇಂದ್ರದ ಎದುರು ಹಾಜರಿದ್ದ ಕೆಲ ಬಿಜೆಪಿ ಮುಖಂಡರು ನಿರಾಶೆಯಿಂದ ವಾಪಸ್ಸಾದರೆ ,ಕಾಂಗ್ರೆಸ್ ನ ಸ್ಥಳೀಯ ನಾಗಪ್ಪ ಗೌಡ ಆಪ್ತರು ಮಿತ್ರರು , ಪ್ರಕಾಶ ಗೌಡ ಮತ್ತಿತರರು ಬಂದರಾದರೂ ಇತರೆ ನಾಯಕರು ಗೆದ್ದ ಮೇಲೆ ಬಂದು ಕೈಕುಲುಕುವವರೇ ಜಾಸ್ತಿ ಎನ್ನುವ ಮಾತು ಕೇಳಿ ಬಂದಿದೆ. ಆ ಮೂಲಕ ಕಾಂಗ್ರೆಸ್ಸಿನ ಕಮಲದ ಕೆಸರು ಅಂಟಿಸಿಕೊಂಡು ಅಧಿಕೃತ ಅಭ್ಯರ್ಥಿ ವಿರುದ್ಧ ಕೈ ಕೊಟ್ಟಿದ್ದರು ಎನ್ನಲಾದರೂ , ನಾರಿಯರ ಮನ ಓಲಿಸುವ ಬಿಜೆಪಿಯ ಯತ್ನವೂ ನಾಗಪ್ಪನ ಸಾಮಾಜಿಕ ಕಾರ್ಯ ಮತ್ತು ಸಾಮರ್ಥ್ಯದ ಎದುರು ಫಲ ನೀಡಲಿಲ್ಲ ಎನ್ನಲಾಗಿದೆ. ಇದೇ ವೇಳೆ ನಾಗಪ್ಪನ ಹೆಗಲಿಗೆ ಹೆಗಲು ಕೊಟ್ಟು ಪ್ರೀತಿ ವಿಶ್ವಾಸದಿಂದ ದುಡಿದ ಸ್ಥಳೀಯ ನಾಯಕರು ಮತ್ತು ಕಾರ್ಯಕರ್ತರು ಗೆದ್ದು ತಮ್ಮ ಬಲ ತೋರಿಸಿದ್ದಾರೆ.
ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ