Important
Trending

ಅಕಾಲಿಕ ಮಳೆ ತಂದ ಅವಾಂತರ: ಭತ್ತದ ಗದ್ದೆಗಳು ಜಲಾವೃತ: ಆತಂಕದಲ್ಲಿ ರೈತರು

ಸಿದ್ದಾಪುರ: ತಾಲೂಕಿನಲ್ಲಿ ಕಳೆದ ಒಂದು ವಾರದಿಂದ ಸುರಿದ ಭಾರಿ ಮಳೆಯಿಂದಾಗಿ ಕಟಾವು ಮಾಡಿದ ಬತ್ತದ ಗದ್ದೆಗಳು ಜಲಾವೃತಗೊಂಡು ಬತ್ತವು ಮೊಳಕೆ ಯೋಡೆಯಲಾರಂಭಿಸಿ ರೈತರಿಗೆ ನಷ್ಟ ಉಂಟಾಗಿದೆ. ಸರಕಾರ ಹಾಗೂ ಸಂಬoಧಪಟ್ಟ ಇಲಾಖೆ ಅಧಿಕಾರಿಗಳು ಜನಪ್ರತಿನಿಧಿಗಳು ರೈತರಿಗೆ ಉಂಟಾದ ನಷ್ಟಕ್ಜೆ ಪರಿಹಾರ ಒದಗಿಸಿಕೊಡಬೇಕು ಎಂದು ಮಾಜಿ ತಾಲೂಕು ಪಂಚಾಯತ್ ಸದಸ್ಯ ನಾಸಿರ್ ವಲ್ಲಿ ಖಾನ್ ಹಾಗೂ ನೆಜ್ಜುರ್ ಭಾಗದ ರೈತರು ಒತ್ತಾಯ ಮಾಡಿದ್ದಾರೆ.

ಪೆಂಗಲ್ ಚಂಡಮಾರುತದ ಪರಿಣಾಮವಾಗಿ ತಾಲೂಕಿನ ಕವಂಚೂರ್, ಅರೆಂದೂರು,ನೆಜ್ಜುರ್, ಅಕ್ಕುಂಜಿ, ಗೋಳಗೊಡ ಮುಂತಾದ ಭಾಗದಲ್ಲಿ ಸುರಿದ ಭಾರಿ ಮಳೆಯಿಂದ ಕಟಾವು ಮಾಡಿದ ಗದ್ದೆಗೆ ನೀರು ತುಂಬಿ ಗದ್ದೆಗಳು ಸಂಪೂರ್ಣ ಜಲಾವ್ರತಗೊಂಡು ಭತ್ತದ ತೆನೆ ನೀರಿನಲ್ಲಿ ನೆನೆದು ಮೊಳಕೆ ಒಡೆಯಲು ಆರಂಭಿಸಿವೆ, ಬತ್ತದ ತೆನೆಗಳನ್ನು ಗದ್ದೆಯಿಂದ ಎತ್ತಿ ಒಣಗಿಸಲು ಇಟ್ಟರೂ ಸಹ ಬಿಸಿಲು ಇಲ್ಲದ ಕಾರಣ ಹುಲ್ಲು ಸಹ ಕೊಳೆಯಲು ಆರಂಭಿಸಿದೆ ಇದರಿಂದ ಬತ್ತದ ಜೊತೆಗೆ ಹುಲ್ಲು ಸಹ ನಾಶವಾಗುತ್ತಿದೆ ರೈತರು ತಮ್ಮ ಸಂಕಷ್ಟ ಹಂಚಿಕೊoಡಿದ್ದಾರೆ. ವರ್ಷದ ಆದಾಯವು ಮಳೆ ನೀರಿನಲ್ಲಿ ಕೊಚ್ಚಿ ಹೋಗಿದೆ ಕೂಡಲೇ ಸರಕಾರ ಪರಿಹಾರ ಒದಗಿಸಿ ಕೊಡಬೇಕು ಎಂದು ರೈತರು ಆಗ್ರಹಿಸಿದ್ದಾರೆ.

ವಿಸ್ಮಯ ನ್ಯೂಸ್ ದಿವಾಕರ್ ಸಂಪಖoಡ ಸಿದ್ದಾಪುರ.

Back to top button