Important
Trending

ಚಿಣ್ಣರಿಂದ ಛದ್ಮವೇಷ ಮತ್ತು ನೃತ್ಯ ಸ್ಪರ್ಧೆ: ಗಮನ ಸೆಳೆದ ತುಳಸಜ್ಜಿ ಪಾತ್ರಧಾರಿ

ಅಂಕೋಲಾ : ಕೆಎಲ್ಇ ಶಿಕ್ಷಣ ಸಂಸ್ಥೆಯ ಪ್ರಾಯೋಗಿಕ ಪ್ರಾಥಮಿಕ ಶಾಲೆಯಲ್ಲಿ (ಪಿ. ಪಿ ಎಸ್ ) ಚಿಣ್ಣರಿಗಾಗಿ ನಡೆಸಿದ ಛದ್ಮವೇಷ ಮತ್ತು ನೃತ್ಯ ಸ್ಪರ್ಧೆಯು ಜನಮನ ರಂಜಿಸಿತು. ಛದ್ಮವೇಷ ಸ್ಪರ್ಧೆಯ ಎಲ್ ಕೆ ಜಿ ವಿಭಾಗದಲ್ಲಿ ಅದ್ವಿತಿ ಎನ್ ಮುರ್ಡೇಶ್ವರ ಪ್ರಥಮ, ಆರಾಧನಾ ಆರ್ ವಂದಿಗೆ ದ್ವಿತೀಯ, ಕೌಶಿಕ ಎಫ್ ಪೂಜಾರ ತೃತೀಯ, ಯುಕೆಜಿ ವಿಭಾಗದಲ್ಲಿ ತನ್ವಿ ವಿ ಗೌಡ ಪ್ರಥಮ, ಆಯುಷ್ ಆರ್ ನಾಯ್ಕ ದ್ವಿತೀಯ, ಚಿತ್ರಾಲಿ ಎಸ್ ಬಂಟ ತೃತೀಯ ಸ್ಥಾನ ಪಡೆದರು. ಕಿರಿಯರ ವಿಭಾಗದಲ್ಲಿ ಸನ್ನಿಧಿ ಎನ್ ನಾಯ್ಕ ಪ್ರಥಮ, ನಾಗಶ್ರೀ ಎಸ್ ನಾಯ್ಕ ದ್ವಿತೀಯ, ಅಭಿಶ್ರೀ ಆರ್ ನಾಯ್ಕ ತೃತೀಯ, ಹಿರಿಯರ ವಿಭಾಗದಲ್ಲಿ ಕಿಶನ್ ಎಂ ಅಂಕೋಲಾ ಪ್ರಥಮ, ಶ್ರಾವಣ್ಯ ಎಸ್ ಆಗೇರ ದ್ವಿತೀಯ, ಶ್ರೇಯಾ ಎಸ್ ಹರಿಕಂತ್ರ ತೃತೀಯ ಸ್ಥಾನ ಪಡೆದರು.

ನೃತ್ಯ ಸ್ಪರ್ಧೆಯ ಕಿರಿಯರ ವಿಭಾಗದಲ್ಲಿ ಅನಮನಾಜ್ ರಫೀಕ ಶೇಖ ಮತ್ತು ಸನ್ನಿಧಿ ಎನ್ ನಾಯ್ಕ ಪ್ರಥಮ, ಮೇಘನಾ ಜಿ ಆಗೇರ ಮತ್ತು ಅಗಸ್ತ್ಯ ಎ ಆಗೇರ ದ್ವಿತೀಯ, ಬಿಂದು ಪಿ ನಾಯ್ಕ ಮತ್ತು ವೈಭವ ಎನ್ ಗೌಡ ತೃತೀಯ ಸ್ಥಾನ ಪಡೆದರು. ಹಿರಿಯರ ವಿಭಾಗದಲ್ಲಿ ಅರ್ಮಾನ್ ಎಮ್ ಪೀರಾ ಮತ್ತು ಚಿನ್ಮಯ ಎಸ್ ಬಂಟ ಪ್ರಥಮ, ರಶ್ಮಿ ಕೆ ನಾಯ್ಕ ಮತ್ತು ಹರ್ಷಿಣಿ ಎಮ್ ನಾಯ್ಕ ದ್ವಿತೀಯ, ವಾರುಣಿ ಡಿ ಅಲಗೇರಿ ಮತ್ತು ವೇದಾ ಎಸ್ ಹುಲಸ್ವಾರ ತೃತೀಯ ಸ್ಥಾನ ಪಡೆದರು.

ಪ್ರಾಯೋಗಿಕ ಪ್ರಾಥಮಿಕ ಶಾಲೆಯ ಶಿಕ್ಷಕಿ ಕಾವ್ಯಾ ಗುನಗಾ ಕಾರ್ಯಕ್ರಮ ನಿರ್ವಹಿಸಿದರು. ಬಿಂದು ನಾಯರ, ವಂದಿಸಿದರು. ಈ ಸಂದರ್ಭದಲ್ಲಿ ಕಿಂಡರ ಗಾರ್ಟನ್ ಮುಖ್ಯಾಧ್ಯಾಪಕಿ ಶ್ರೀದೇವಿ ಆಚಾರಿ, ಶಿಕ್ಷಕಿಯರಾದ ಬಿಂದು ನಾಯ್ಕ, ವಿದ್ಯಾ ನಾಯ್ಕ, ರೇಖಾ ಕಾಂಬಳೆ, ಪಿಪಿಎಸ್ ಮುಖ್ಯಾಧ್ಯಾಪಕರಾದ ನಾಗರಾಜ ಸರೂರ, ಶಿಕ್ಷಕ ಬಿ ಮುಶ್ರಾಫ್, ಆದೀಶ, ಮುದ್ದಣ್ಣ, ಪ್ರಶಾಂತ ಪೆಡ್ನೇಕರ ಉಪಸ್ಥಿತರಿದ್ದರು. ಡಿ ಎಡ್ ಉಪನ್ಯಾಸಕ ಎನ್ ಟಿ ನಾಯ್ಕ, ಕಲಾವಿದ ನಾಗರಾಜ ಜಾಂಬಳೇಕರ ಹಾಗೂ ಪ್ರೌಢಶಾಲಾ ಶಿಕ್ಷಕಿ ಗಿರಿಜಾ ನಿರ್ಣಾಯಕರಾಗಿ ಕಾರ್ಯನಿರ್ವಹಿಸಿದರು. ಪದ್ಮಶ್ರೀ ಪುರಸ್ಕೃತ ತುಳಸಿ ಗೌಡ ಪಾತ್ರದಲ್ಲಿ ಪುಟಾಣಿ ಒಬ್ಬಳು ಗಮನ ಸೆಳೆದಳು.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Back to top button