Important
Trending
ಕಾಪಾಡಿ ಮಂಜು ನಿಧನ : ಧಾರ್ಮಿಕ ಹಾಗೂ ಕ್ರೀಡಾ ಚಟುವಟಿಕೆಯಲ್ಲೂ ಮುಂದಿದ್ದ ಮಂಜು ನಾಯ್ಕ ಇನ್ನಿಲ್ಲ

ಅಂಕೋಲಾ: ಪಟ್ಟಣ ವ್ಯಾಪ್ತಿಯ ಲಕ್ಷ್ಷೇಶ್ವರ – ಕುಂಬಾರಕೇರಿ ನಿವಾಸಿ ಮಂಜು ಶ್ವೇತರಾಜ ನಾಯ್ಕ (35) ಅನಾರೋಗ್ಯದಿಂದ ನಿಧನನಾಗಿದ್ದಾನೆ. ಪ್ರಸಾದ ಸ್ಟುಡಿಯೋದಲ್ಲಿ ಈ ಮೊದಲು ಕ್ಯಾಮರಾ ಮೆನ್ ಆಗಿದ್ದ ಮಂಜು, ನಂತರ ವಿವಿಧೆಡೆ ಚಿಕ್ಕ ಪುಟ್ಟ ಕೆಲಸ ಮಾಡಿಕೊಂಡಿದ್ದ.
ಕೃಷ್ಣಮೂರ್ತಿ ಉತ್ಸವ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಗಳಲ್ಲಿ ಗುರುತಿಸಿಕೊಂಡು , ಕ್ರಿಕೆಟ್ ಸಂಘಟನೆ ಮತ್ತಿತರ ಆಟಗಳಲ್ಲಿಯೂ ಪರಿಣಿತನಾಗಿದ್ದ ಮಂಜು ತನ್ನ ಆತ್ಮೀಯ ವಲಯದಲ್ಲಿ ಕಾಪಾಡಿ ಮಂಜು ಎಂದೇ ಪರಿಚಿತನಾಗಿದ್ದ. ಇತ್ತೀಚೆಗೆ ಅನಾರೋಗ್ಯಕ್ಕೀಡಾಗಿದ್ದ ಅವನನ್ನು ಹೆಚ್ಚಿನ ಚಿಕಿತ್ಸೆಗಾಗಿ ಕಾರವಾರ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಚಿಕಿತ್ಸೆಗೆ ಸ್ವಂದಿಸದೇ ಆತ ಕೊನೆಯುಸಿರೆಳೆದಿದ್ದಾನೆ.
ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ