Join Our

WhatsApp Group
Important
Trending

ಕರಾವಳಿ ಪೊಲೀಸ್ ಠಾಣೆಯಲ್ಲಿ ಕರ್ತವ್ಯದಲ್ಲಿದ್ದ ಸಿಬ್ಬಂದಿ ಸಾವು

ಹೊನ್ನಾವರ: ಕರ್ತವ್ಯದಲ್ಲಿದ್ದ ಸಿಬ್ಬಂದಿ ಮದ್ಯರಾತ್ರಿ ಸುಮಾರಿಗೆ ಶೌಚಾಲಯದಲ್ಲಿ ಮೃತಪಟ್ಟಿರುವ ಘಟನೆ ನಡೆದಿದ್ದು, ತಾಲೂಕಿನ ಮಂಕಿ ಮಡಿಯ ರಾಜೇಶ್ ಖಾರ್ವಿ ಮೃತ ಪಟ್ಟ ವ್ಯಕ್ತಿ.

ಕಳೆದ ಏಳು ವರ್ಷದಿಂದ ಕರಾವಳಿ ನಿಗ್ರಹದಳದ ಕೆ. ಎನ್.ಡಿ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಠಾಣೆಯ ಸಿಬ್ಬಂದಿ ಒಬ್ಬರು ಬೆಳಿಗ್ಗೆ 5.30 ರ ಸುಮಾರಿಗೆ ಶೌಚಾಲಯಕ್ಕೆ ಹೋದಾಗ ಘಟನೆ ಬೆಳಕಿಗೆ ಬಂದಿದೆ. ಮೃತ ರಾಜೇಶ್ ಖಾರ್ವಿ ಮದುವೆ ಆಗಿ ಕೇವಲ ಒಂದೂವರೆ ವರ್ಷ ಆಗಿದ್ದು, 3 ತಿಂಗಳ ಮಗುವಿದೆ..

ಹೃದಯಾಘಾತ ಎಂದು ಹೇಳಲಾಗುತ್ತಿದ್ದು, ವೈದ್ಯಕೀಯ ಪರೀಕ್ಷೆಯಿಂದ ಸಾವಿನ ಹೆಚ್ಚಿನ ಮಾಹಿತಿ ತಿಳಿದು ಬರಬೇಕಿದೆ.

ವಿಸ್ಮಯ ನ್ಯೂಸ್ ವಿವೇಕ್ ಶೇಟ್, ಹೊನ್ನಾವರ

Back to top button