Focus News
Trending

ಹವಾಮಾನ ವೈಪರೀತ್ಯ: ಆರಂಭಕ್ಕೂ ಮುನ್ನವೇ ಯಾಂತ್ರೀಕೃತ ದೋಣಿಗಳ ಮೀನುಗಾರಿಕೆ ಸ್ಥಗಿತ

ಹೊನ್ನಾವರ: ಹವಾಮಾನ ವೈಪರೀತ್ಯದಿಂದ ಆರಂಭಕ್ಕೂ ಮುನ್ನವೇ ಯಾಂತ್ರೀಕೃತ ದೋಣಿಗಳ ಮೀನುಗಾರಿಕೆ ಸ್ಥಗಿತಗೊಂಡಿದ್ದು, ಮೀನುಗಾರಿಕೆ ಚಟುವಟಿಕೆಯ ಮೇಲೆ ಪ್ರತಿಕೂಲ ಪರಿಣಾಮ ಉಂಟಾಗಿದೆ. ಹೌದು.. ಮುಂಗಾರು ಮಳೆಯ ಬರುವ ಮುನ್ನವೇ ಹೊನ್ನಾವರ ಭಾಗದಲ್ಲಿ ಯಾಂತ್ರೀಕೃತ ಮೀನುಗಾರಿಕೆ ದೋಣಿಗಳು ದಡದಲ್ಲಿ ನಿಂತಿದೆ.

ವಾಯುಭಾರ ಕುಸಿತದ ಪರಿಣಾಮದಿಂದ ಸಮುದ್ರದಲ್ಲಿ ಪ್ರತಿಕೂಲ ಪರಿಣಾಮ ಬಿದ್ದಿದೆ. ಜೂನ್ 1ರಿಂದ ಯಾಂತ್ರೀಕೃತ ಮೀನುಗಾರಿಕೆ ಚಟುವಟಿಕೆ ನಿಷೇಧಗೊಳ್ಳಲಿದ್ದು, ಮೇ ಅಂತ್ಯದವರೆಗೂ ಮೀನುಗಾರಿಕೆ ನಡೆಸುವ ತಯಾರಿಯಲ್ಲಿದ್ದ ಮೀನುಗಾರರಿಗೆ ಹವಾಮಾನ ವೈಪರೀತ್ಯದಿಂದ ಸಮಸ್ಯೆಯಾಗಿದೆ. ಮುಂದಿನ ಮೂರು ದಿನಗಳವರೆಗೆ ಸಮುದ್ರದಲ್ಲಿ ತೆರಳದಂತೆ ಹವಾಮಾನ ಇಲಾಖೆಯು ಮೀನುಗಾರರಿಗೆ ಎಚ್ಚರಿಸಿದೆ.

ಇಲಾಖೆ ಇದರಿಂದ ಮೀನುಗಾರರಿಗೆ ಮುಂಗಾರು ಶುರುವಾಗುವುದಕ್ಕಿಂತ ಎರಡು ವಾರ ಮೊದಲೇ ಮೀನುಗಾರಿಕೆ ಸ್ಥಗಿತಗೊಂಡಿದೆ. ಸಮುದ್ರದಲ್ಲಿ ಪ್ರಕ್ಷುಬ್ಧ ಪರಿಸ್ಥಿತಿ ಇನ್ನೂ ವಾರಗಳ ಕಾಲ ಮುಂದುವರಿಯುವ ಸಾಧ್ಯತೆ ಇದ್ದು ಈಗಿನಿಂದಲೇ ಮೀನುಗಾರಿಕೆ ದೋಣಿಗಳ ಪರಿಕರಗಳನ್ನು ದಡಕ್ಕೆ ತಂದು ದಾಸ್ತಾನು ಮಾಡುವ ಕಾರ್ಯವೂ ಸಾಗಿದೆ.

ವಿಸ್ಮಯ ನ್ಯೂಸ್, ವಿವೇಕ್ ಶೇಟ್, ಹೊನ್ನಾವರ

Back to top button