
ಅಂಕೋಲಾ : ಹತ್ತಾರು ವಿದಾಯಕ ಕಾರ್ಯಕ್ರಮಗಳ ಮೂಲಕ ಗುರುತಿಸಿಕೊಂಡಿರುವ ತಾಲೂಕಿನ ರೋಟರಿ ಕ್ಲಬ್ ಅಂಕೋಲಾ ರೂರಲ್ ಇದರ 2025 – 26 ನೆ ಸಾಲಿಗೆ ನೂತನ ಅಧ್ಯಕ್ಷರಾಗಿ ಶ್ರೀಮತಿ ಪುಷ್ಪಲತಾ ಆರ್. ನಾಯಕ ಹಾಗೂ ಕಾರ್ಯದರ್ಶಿಯಾಗಿ ಸದಾನಂದ ನಾಯಕ ಮತ್ತು ಖಜಾಂಚಿಯಾಗಿ ನಾಗರಾಜ ನಾಯಕ ಆಯ್ಕೆಯಾಗಿದ್ದಾರೆ.
ಶ್ರೀಮತಿ ಪುಷ್ಪಲತಾ ನಾಯಕ ಇವರು ಈ ಹಿಂದೆ ವಂದಿಗೆ ಗ್ರಾಮ ಪಂಚಾಯತದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ ಇವರ ಪತಿ ಆರ್.ಜಿ.ನಾಯಕ ಇವರು ಜಿಲ್ಲಾ ಪಂಚಾಯತ ನಲ್ಲಿ ಉಪ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದವರು. ಕಾರ್ಯದರ್ಶಿಯಾಗಿ ಆಯ್ಕೆಯಾದ ಸದಾನಂದ ನಾಯಕ ಸಹ ಸುಂಕಸಾಳ ಗ್ರಾಮ ಪಂಚಾಯತ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದವರು.
ಖಜಾಂಚಿ ನಾಗರಾಜ್ ನಾಯಕ ಪ್ರಸ್ತುತ ವಂದಿಗೆ ಗ್ರಾಮ ಪಂಚಾಯತ ಸದಸ್ಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ.ಇತರ ಹಿರಿ ಕಿರಿಯ ಸದಸ್ಯರನ್ನೊಳಗೊಂಡ ನೂತನ ಆಡಳಿತ ಮಂಡಳಿ ಸದ್ಯದಲ್ಲಿಯೇ ಪದಗ್ರಹಣ ಮಾಡಲಿದೆ.
ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ