Join Our

WhatsApp Group
Important
Trending

ಶರವಾತಿ ಪಂಪ್ಡ್ ಸ್ಟೋರೇಜ್ ಯೋಜನೆಗೆ ವಿರೋಧ: ಹೊನ್ನಾವರದಲ್ಲಿ ಬೃಹತ್ ಪ್ರತಿಭಟನೆ

ಹೊನ್ನಾವರ: ಶರಾವತಿ ಪಂಪ್ಡ್ ಸ್ಟೋರೇಜ್ ವಿದ್ಯುತ್ ಯೋಜನೆಯನ್ನು ಕೈಬಿಡುವಂತೆ ವಿವಿಧ ಸಂಘಟನೆಯವರು ಬೃಹತ್ ಪ್ರತಿಭಟನೆ ನಡೆಸಿದರು. ಉತ್ತರ ಕನ್ನಡ ಮತ್ತು ಶಿವಮೊಗ್ಗ ಜಿಲ್ಲೆಯ ಶರಾವತಿ ಸಿಂಗಳಿಕ ಅಭಯಾರಣ್ಯದ ಕೇಂದ್ರ ಭಾಗದಲ್ಲಿ ಅನುಷ್ಠಾನ ಮಾಡಲು ಹೊರಟಿರುವ ಉದ್ದೇಶಿತ ಶರಾವತಿ ಪಂಪ್ಡ್ ಸ್ಟೋರೇಜ್ ಭೂಗತ ಜಲ-ವಿದ್ಯುತ್ ಹೆಸರಿನ ಯೋಜನೆಯನ್ನು ಸರಕಾರವು ಕೈಬಿಡಬೇಕೆಂದು ಆಗ್ರಹಿಸಿ, ಬೃಹತ್ ಪ್ರತಿಭಟನೆ ಪಟ್ಟಣದ ಶರಾವತಿ ಸರ್ಕಲ್ ನಿಂದ ಪ್ರಾರಂಭವಾಗಿ ತಹಶೀಲ್ದಾರ ಕಚೇರಿಯವರೆಗೆ ಸಾಗಿತು.

ಈ ಸಂದರ್ಭದಲ್ಲಿ ಹೋರಾಟಗಾರ ಸಾಗರದ ಅಖೀಲೇಶ ಚಿಪಳಿ ಮಾತನಾಡಿ ಶರಾವತಿ ನದಿಗೆ 6 ಅಣೆಕಟ್ಟುಗಳನ್ನು ಕಟ್ಟಿದ್ದು, ಸಾವಿರಾರು ಜನರನ್ನು ಓಕ್ಕಲೆಬ್ಬಿಸಿದ್ದು, ಮೂಲಭೂತ ಸೌಕರ್ಯ ನೀಡದಿರುವುದು ವಿಪರ್ಯಾಸವಾಗಿದೆ. ಈಗ ಶರಾವತಿ ಪಂಪ್ ಸ್ಟೋರೇಜ್ ಭೂಗತ ಜಲ-ವಿದ್ಯುತ್ ಹೆಸರಿನ ಯೋಜನೆಯನ್ನು ತಂದು ಇಲ್ಲಿನ ಪರಿಸರವನ್ನು ಹಾಳು ಮಾಡುತ್ತಿದೆ. ಇದನ್ನು ಸರಕಾರ ಕೈಬಿಡಬೇಕೆಂದು ಒತ್ತಾಯಿಸಿದರು.
ಶಾಸಕರಾದ ದಿನಕರ ಶೆಟ್ಟಿ ಮಾತನಾಡಿ ಸರ್ಕಾರದ ಸಾವಿರಾರು ಎಕರೆ ಅರಣ್ಯ ಭೂಮಿಯನ್ನು ನಾಶಪಡಿಸುತ್ತಿದೆ.

ಶರಾವತಿ ಸಿಂಗಳಿಕ ಅಭಯಾರಣ್ಯದ ಪರಿಸರ ಸೂಕ್ಷ್ಮ ಪಶ್ಚಿಮ ಘಟ್ಟದ ಕೇಂದ್ರ ಭಾಗದಲ್ಲಿ ಸುರಂಗ ಕೊರೆದು ಜಲವಿದ್ಯುತ್ ಯೋಜನೆಯ ಅನುಷ್ಠಾನ ಮಾಡುವುದರಿಂದ ಭೂಸಡಿಲಿಕೆಯಾಗುವ ಹಾಗೂ ಅರಣ್ಯ ಮತ್ತು ಪರಿಸರದ ನಾಶಕ್ಕೆ ಕಾರಣವಾಗಲಿದೆ . ಶರಾವತಿ ನದಿಗೆ ಬೇಸಿಗೆಯಲ್ಲಿ ನೀರಿನ ಕೊರತೆ ಉಂಟಾಗಿ ಸಮುದ್ರದ ಉಪ್ಪು ನೀರು ನದಿ ನೀರಿಗೆ ಸೇರಿ ನದಿ ಪಾತ್ರದ ಸಾವಿರಾರು ಹೆಕ್ಟೇರ್ ಕೃಷಿ ಜಮೀನು ನಿರಪಯುಕ್ತವಾಗುವ ಹಾಗೂ ಇಡಗುಂಜಿ, ಮುರ್ಡೇಶ್ವರದಂತಹ ಯಾತ್ರಾ ಸ್ಥಳ ಸಹಿತ ಪ್ರಮುಖ ಮೂರು ತಾಲೂಕಿನ ಕುಡಿಯುವ ನೀರಿನ ಅಗತ್ಯ ಸೇವೆಗಳಿಗೆ ಆತಂಕ ಉಂಟಾಗುತ್ತದೆ. ಯೋಜನೆಯ ಅನುಷ್ಠಾನದಿಂದ ನೂರಾರು ಜನರು ತಲತಲಾಂತರದಿoದ ಇರುವ ತಮ್ಮ ಮನೆ ಹಾಗೂ ಕೃಷಿ ಭೂಮಿಯನ್ನು ಕಳೆದುಕೊಳ್ಳಬೇಕಾಗುತ್ತದೆ ಎಂದು ಹಲವು ತಜ್ಞರು ಈಗಾಗಲೇ ಎಚ್ಚರಿಸಿದ್ದಾರೆ ಎಂದರು.

ಸಹಾಯಕ ಆಯುಕ್ತರಾದ ಕಾವ್ಯಾರಾಣಿ ಮಾತನಾಡಿ ಇದನ್ನು ಸರಕಾರಕ್ಕೆ ಮನವಿ ಸಲ್ಲಿಸಿ ಇದಕ್ಕೆ ವಿರೋಧವಿದೆ ಎಂದು ಕಳಿಸ್ತೀವಿ. ಭೂಸ್ವಾಧೀನ ಪಕ್ರಿಯೆಯನ್ನು ಮುಂದೂಡಲಾಗುವುದು ಎಂದರು. ಈ ಸಂದರ್ಭದಲ್ಲಿ ಅಧಿಕಾರಿ ವರ್ಗದವರು ಹಾಗೂ ಶಾಸಕರ ಜೊತೆ ವಾಗ್ವಾದ ನಡೆಯಿತು.

ಈ ಸಂದರ್ಭದಲ್ಲಿ ಜೆ.ಟಿ.ಪೈ,ಅಧ್ಯಕ್ಷ ವೆಂಕಟರಮಣ ಹೆಗಡೆ ಕವಲಕ್ಕಿ ,ಶರಾವತಿನದಿ ಉಳಿಸಿ ಹೋರಾಟ ಸಮಿತಿ ಅಧ್ಯಕ್ಷ ಚಂದ್ರಕಾoತ ಕೊಚರೇಕರ,ಸಂಚಾಲಕರಾದ ಕೇಶವ ನಾಯ್ಕ ಬಳ್ಕೂರ ಮತ್ತು ವಿವಿಧ ಸಂಘಟನೆಗಳ ಪ್ರಮುಖರು, ವಿವಿಧ ಫಕ್ಷಗಳ ಪ್ರಮುಖರು ಹಾಜರಿದ್ದರು.

ವಿಸ್ಮಯ ನ್ಯೂಸ್, ವಿವೇಕ್ ಶೇಟ್, ಹೊನ್ನಾವರ

Back to top button