
ಭಟ್ಕಳ: ತಾಲೂಕಿನ ಭಾರತೀಯ ಸ್ಟೇಟ್ ಬ್ಯಾಂಕಿನ ಬಜಾರ ಶಾಖೆಯನ್ನು ಮುಖ್ಯ ಶಾಖೆಯೊಂದಿಗೆ ವಿಲೀನ ಮಾಡದಂತೆ ಆಗ್ರಹಿಸಿ ಶ್ರೀ ಭುವನೇಶ್ವರಿ ಕನ್ನಡ ಸಂಘ ಹಾಗೂ ಡಬ್ಲೂ ಎಚ್.ಆರ್.ಕೆ.ಆರ್.ಕೆ. ಪೌಂಡೇಶನ ಭಟ್ಕಳ, ವಿಶ್ವ ಮಾನ ಹಕ್ಕು ಭಟ್ಕಳ,ಇತರ ಸಂಘ ಸಂಸ್ಥೆಗಳ ವತಿಯಿಂದ ಸ್ಟೇಟ್ ಬ್ಯಾಂಕಿನ ಪ್ರಾಧೇಶಿಕ ವ್ಯವಹಾರ ಕಚೇರಿಯ ಮುಖ್ಯಸ್ಥರಿಗೆ ಹಾಗೂ ಜಿಲ್ಲಾಧಿಕಾರಿಗಳಿಗೆ ಮನವಿಯನ್ನು ನೀಡಲಾಯಿತು.
ಭಟ್ಕಳ ಸ್ಟೇಟ್ ಬ್ಯಾಂಕ್ ಬಜಾರ ಶಾಖೆಯಲ್ಲಿ ತುಂಬಾ ವರ್ಷಗಳಿಂದ ಬ್ಯಾಂಕ ಖಾತೆಯನ್ನು ಸಾರ್ವಜನಿಕರು ಹಾಗೂ ಅನೇಕ ಸಂಘ ಸಂಸ್ಥೆಗಳು ಹೊಂದಿದೆ. ಆದರೆ ಭಟ್ಕಳ ಬಜಾರ ಶಾಖೆಯನ್ನು ಭಟ್ಕಳ ಮುಖ್ಯ ಶಾಖೆಯೊಂದಿಗೆ ವಿಲೀನಗೊಳ್ಳೂತ್ತದೆ ಎಂಬ ಸುದ್ದಿ ನಮ್ಮ ಗಮನಕ್ಕೆ ಬಂದಿದ್ದು ಇರುತ್ತದೆ. ಭಟ್ಕಳ ಬಜಾರ ಶಾಖೆಯನ್ನು ಭಟ್ಕಳ ಮುಖ್ಯ ಶಾಖೆಗೆ ವಿಲೀನಗೊಳಿಸಲು ನಮ್ಮೆಲ್ಲ ಖಾತೆದಾರರ ವಿರೋಧವಿದೆ.
ಭಟ್ಕಳದ ಎಲ್ಲಾ ಖಾತೆದಾರರ ಮತ್ತು ಗ್ರಾಮೀಣ ಭಾಗದ ಹಾಗೂ ಸಾರ್ವಜನಿಕರ ವಿನಂತಿಸಿಕೊಳ್ಳುವುದೇನೆoದರೆ., ಈ ವಿಲೀನಗೊಳ್ಳುವ ಪ್ರಕ್ರೀಯೆ ವಿಚಾರವನ್ನು ಕೈಬಿಡಬೇಕೆಂದು ಕೇಳಿಕೊಳ್ಳುತ್ತೇವೆ. ಮುಖ್ಯ ಶಾಖೆಗೆ ಬಜಾರ ಶಾಖೆಯು ವಿಲೀನಗೊಡಲ್ಲಿ ಹಲವಾರು ಸಮಸ್ಯೆಗಳೂ ಎದುರಾಗುತ್ತಿದೆ. ಮುಖ್ಯ ಶಾಖೆಯಲ್ಲಿ ಬ್ಯಾಂಕನ ಖಾತೆದಾರರ ಜನಸಂದಣಿ ಹೆಚ್ಚಾಗುತ್ತಿರುವುದರಿಂದ ಗ್ರಾಹಕರು ಗಂಟೆಗಟ್ಟಲೆ ಕಾಯಬೇಕಾದ ಪರಿಸ್ಥಿತಿ ಬರಬಹುದು. ಹಾಗೂ ಮುಖ್ಯ ಶಾಖೆಯ ಹತ್ತಿರು ಸೂಕ್ತ ಪಾರ್ಕಿಂಗ್ ವ್ಯವಸ್ಥೆ ಇಲ್ಲದಿರುವದರಿಂದ , ಖಾತೆ ಹೊಂದಿದ್ದ ವೃದ್ದರು, ಮಹಿಳೆಯರಿಗೆ ವಾಹನದಲ್ಲಿ ಬರಲು ತೊಂದರೆಯಾಗುತ್ತದೆ ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ.
ಒಂದು ವೇಳೆ ನಮ್ಮ ಮನವಿಯನ್ನು ಮೀರಿ ವಿಲೀನಗೊಳಿಸದ್ದೇ ಆದರಲ್ಲಿ ಮುಂದಿನ ದಿನ ನಮ್ಮೆಲ್ಲರ ಗ್ರಾಹಕರೊಂದಿಗೆ ಹಾಗೂ ಸಂಘ ಸಂಸ್ಥೆಗಳೊoದಿಗೆ ಕೂಡಿ ಬ್ಯಾಂಕಿನ ಎದುರು ದರಣಿ ಕುಳಿತು ಹೋರಾಟ ಮಾಡಲಿದ್ದೇವೆ ಎಂದು ಮನವಿಯಲ್ಲಿ ತಿಳಿಸಲಾಗಿದೆ. ಈ ಸಂದರ್ಭದಲ್ಲಿ ಸ್ಟೇಟ್ ಬ್ಯಾಂಕಿನ ಬಜಾರ ಶಾಖೆಯ ವ್ಯವಸ್ಥಾಪಕರಾದ ಕೆ.ಎಂ.ಮಲಿಕಾರ್ಜುನಯ್ಯ ರವರಿಗೆ ಮನವಿ ನೀಡಲಾಯಿತು. ಭುವನೇಶ್ವರಿ ಕನ್ನಡ ಸಂಘದ ಅದ್ಯಕ್ಷರಾದ ಅಣ್ಣಪ್ಪ ನಾಯ್ಕ, ಎಚ್.ಆರ್.ಕೆ.ಆರ್.ಕೆ. ಪೌಂಡೇಶನ ಭಟ್ಕಳ, ವಿಶ್ವ ಮಾನ ಹಕ್ಕು ಭಟ್ಕಳ ಘಟಕದ ಅಧ್ಯಕ್ಷರಾದ ಶ್ರೀಧರ ನಾಯ್ಕ, ಪ್ರಮುಖರಾದ ಈಶ್ವರ ನಾಯ್ಕ, ಚಂದ್ರು ನಾಯ್ಕ, ಜಯಶಂಕರ ನಾಯ್ಕ, ದೀಲೀಪ ನಾಯ್ಕ,ಮೋಹನ ನಾಯ್ಕ, ಹಾಗೂ ಇತರರು ಇದ್ದರು.
ವಿಸ್ಮಯ ನ್ಯೂಸ್, ಈಶ್ವರ್ ನಾಯ್ಕ, ಭಟ್ಕಳ