
ಕುಮಟಾ : ಕುಮಟಾ ತಹಶೀಲ್ದಾರ್ ಶ್ರೀಕೃಷ್ಣ ಕಾಮಕರ್ ರವರು ಒಬ್ಬ ಜನಸ್ನೇಹಿ ತಹಶೀಲ್ದಾರ್ ಎಂದು ಬಿಜೆಪಿ ಮಾಜಿ ಅಧ್ಯಕ್ಷ ಕುಮಾರ ಮಾರ್ಕಾಂಡೆ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.. ಸೋಶಿಯಲ್ ಮೀಡಿಯಾ ದಲ್ಲಿ ಜನಸಾಮಾನ್ಯರ ಸಮಾಜ ಕಲ್ಯಾಣ ಕೇಂದ್ರದ ಅಧ್ಯಕ್ಷರು ಕೆಲಸ ಮಾಡದ ತಹಶೀಲ್ದಾರ್ ವರ್ಗಾವಣೆಗೆ ಆಗ್ರಹ ಎಂದು ಸುದ್ದಿ ಹರಿದಾಡುತ್ತಿರುವುದಕ್ಕೆ ಬೇಸರ ವ್ಯಕ್ತಪಡಿಸಿರುವ ಮಾರ್ಕಾಂಡೆ ಕಾಮಕರ್ ರವರು ಒಬ್ಬ ಒಳ್ಳೆಯ ಅಧಿಕಾರಿ ಯಾರ ಮುಲಾಜಿಗೂ ಒಳಗಾಗದೇ ಪ್ರಾಮಾಣಿಕವಾಗಿ ಕೆಲಸ ಮಾಡುವಂಥವರು ಅವರು ಕುಮಟಾಕ್ಕೆ ಬಂದ ನಂತರ ತಹಶೀಲ್ದಾರ್ ಕಛೇರಿಯ ಆಡಳಿತದಲ್ಲಿ ಉತ್ತಮ ಸುಧಾರಣೆ ಕಂಡಿದೆ.
ಮಧ್ಯವರ್ತಿ ಗಳ ಹಾವಳಿಗೆ ಆದಷ್ಟು ಕಡಿವಾಣ ಹಾಕಿ ಜನರು ಏನೇ ಕೆಲಸ ಇದ್ದರೂ ನೇರವಾಗಿ ಸಂಬಂಧಪಟ್ಟ ಅಧಿಕಾರಿಗಳ ಬಳಿ ತೆರಳಿ ನೇರವಾಗಿ ಕೆಲಸ ಮಾಡಿಸಿಕೊಳ್ಳುವ ಶಿಸ್ತು ತರಲು ಪ್ರಯತ್ನ ನಡೆಸುತ್ತಿದ್ದಾರೆ.. ಹಳೆಯ ಕಡತಗಳನ್ನು ಇದ್ದಲ್ಲಿ ಪ್ರತಿದಿನ ಸಿಬ್ಬಂದಿಗಳು ಅದನ್ನು ಕ್ಲಿಯರ್ ಮಾಡುವಂತೆ ಸೂಚಿಸಿದ್ದಾರೆ.
ಯಾವುದೇ ವ್ಯಕ್ತಿ ಯು ತನ್ನ ಕೆಲಸ ಆಗಬೇಕಾದರೆ ಆ ಕೆಲಸಕ್ಕೆ ಸಂಬಂಧಪಟ್ಟ ದಾಖಲೆಗಳನ್ನು ನೀಡುವುದು ಸರ್ಕಾರದ ನಿಯಮ ಮತ್ತು ಆಯಾ ಯೋಜನೆ ಗಳಿಗೆ ಅದರದ್ದೇ ಆದ ನಿಯಮಗಳಿವೆ .ಅದನ್ನು ಬಿಟ್ಟು ಕಾಗದ ಪತ್ರಗಳನ್ನು ಸಮಯಕ್ಕೆ ಸರಿಯಾಗಿ ನೀಡದೇ ಅಥವಾ ನಿಯಮಗಳನ್ನು ಪಾಲಿಸದೇ ಇದ್ದಲ್ಲಿ ಆ ಅರ್ಜಿಗಳು ಹಿಂಬರದೊಂದಿಗೆ ರದ್ದಾಗುವುದು ಸಹಜ ಪ್ರಕ್ರಿಯೆ ಅದನ್ನು ಸರಿಯಾಗಿ ತಿಳಿದುಕೊಳ್ಳದೇ ಅಥವಾ ಅಧಿಕಾರಿಗಳೊಂದಿಗೆ ಸೌಹಾರ್ದ ಮಾತುಕತೆ ನಡೆಸದೇ ಏಕಾಏಕಿ ಅವರು ಕೆಲಸ ಮಾಡಿದವರು ಅವರನ್ನು ವರ್ಗಾವಣೆ ಮಾಡಿ ಎಂದು ಆಗ್ರಹಿಸಿ ಸೋಶಿಯಲ್ ಮೀಡಿಯಾ ದಲ್ಲಿ ಹರಿಬಿಟ್ಟು ಅಧಿಕಾರಿಗಳ ಮನೋಸ್ಥೈರ್ಯ ಕುಗ್ಗಿಸಲು ಪ್ರಯತ್ನಿಸುವುದು ಒಳ್ಳೆಯ ಬೆಳವಣಿಗೆ ಅಲ್ಲ ಅದನ್ನು ನಾವು ಖಂಡಿಸುತ್ತೇವೆ ಎಂದು ಕುಮಾರ ಮಾರ್ಕಾಂಡೆ ಹಾಗೂ ಕೆಲವು ಸಾರ್ವಜನಿಕರು ಮಾಧ್ಯಮಕ್ಕೆ ತಿಳಿಸಿದ್ದಾರೆ..
ವಿಸ್ಮಯ ನ್ಯೂಸ್, ಕುಮಟಾ