ವಿಶ್ವಾಸಕ್ಕೆ ಇನ್ನೊಂದು ಹೆಸರೇ ಅಲಂಕಾರ ಜ್ಯುವೆಲರ್ಸ್ ಬೆಳ್ಳಿ – ಬಂಗಾರ – ವಜ್ರಾಭರಣಗಳ ಬೃಹತ್ತ್ ಶೋರೂಮ್: ಆಗಸ್ಟ್ 24 ರಂದು ನವೀಕೃತ ಮಳಿಗೆ ಶುಭಾರಂಭ

ಅಂಕೋಲಾ : ಬಂಗಾರದ ಆಭರಣ ಉದ್ಯಮದಲ್ಲಿ ವಿಶ್ವಾಸ ಅತ್ಯಂತ ಮುಖ್ಯವಾಗಿದ್ದು ಅಂಕೋಲಾ ತಾಲೂಕಿನ ಗಣಪಯ್ಯ ಕುಡಾಳಕರ್ ಅವರ ಮನೆತನ ನೂರಾರು ವರ್ಷಗಳಿಂದ ತಾಲೂಕು ಹಾಗೂ ಸುತ್ತ ಮುತ್ತಲಿನ ಸಾವಿರಾರು ಜನತೆಯ ವಿಶ್ವಾಸ ಪ ಗೆದ್ದುಕೊಂಡಿದೆ. ಪಟ್ಟಣದ ಬಂಡಿಬಾಜಾರ ಮುಖ್ಯ ರಸ್ತೆಯಂಚಿಗೆ ನವೀಕರಣಗೊಂಡಿರುವ ಅಲಂಕಾರ ಜ್ಯವೆಲರ್ಸ್ ನ ಬೃಹತ್ತ ಶೋರೂಂ ಮಳಿಗೆ ) ಬೆಳ್ಳಿ , ಬಂಗಾರ , ವಜ್ರಾಭರಣ , ಮುತ್ತು , ರತ್ನ , ಹರಳುಗಳ ವಿಶೇಷ ಆಯ್ಕೆಯ ಅವಕಾಶ ಕಲ್ಪಿಸಿ , ಆಧುನಿಕತೆಗೆ ತಕ್ಕಂತೆ ಮತ್ತಷ್ಟು ಹೊಸತನದೊಂದಿಗೆ ಗಣೇಶ ಚತುರ್ಥಿಯ ಶುಭ ಸಂದರ್ಭದಲ್ಲಿ ಅ 24 ರ ರವಿವಾರ ಉದ್ಘಾಟನೆಗೆ ಸಜ್ಜುಗೊಂಡಿದೆ.
- ಅಲಂಕಾರ ಜ್ಯುವೆಲರ್ಸ್‌ನ ವಿಶೇಷತೆಗಳು
- ಒಂದೇ ಸೂರಿನಡಿ ಬೆಳ್ಳಿ – ಬಂಗಾರ – ವಜ್ರಾಭರಣ – ಮುತ್ತು – ರತ್ನ – ಹರಳುಗಳ ವಿಶೇಷ ಆಯ್ಕೆ
- ಪ್ರತಿಷ್ಠಿತ ಕಂಪನಿಗಳ ವಜ್ರಾಭರಣ ಮಾರಾಟದ ಅಧಿಕೃತ ಪರವಾನಿಗೆ
- ವಿಶ್ವಾಸಾರ್ಹತೆ, ಗುಣಮಟ್ಟ ಹಾಗೂ ಆಧುನಿಕತೆಗೆ ತಕ್ಕ ವಿನ್ಯಾಸಗಳ ಆಭರಣ
- ಆರಂಭಿಕ ವಿಶೇಷ ಕೊಡುಗೆ : ಪ್ರತಿ ಗ್ರಾಂ ಚಿನ್ನದ ಆಭರಣದ ಮೇಲೆ ರೂ. 300 ಕಡಿತ
ನಾಡಿನ ಅತ್ಯಂತ ಯಶಸ್ವಿ ಸ್ವರ್ಣೋದ್ಯಮಗಳ ಸಾಲಿನಲ್ಲಿ ಒಂದೆಂಬ ಹೆಗ್ಗಳಿಕೆ ಪಡೆದಿರುವ ಅಲಂಕಾರ ಜ್ಯುವೆಲರ್ಸ , ಪ್ರತಿಷ್ಠಿತ ಕಂಪನಿಗಳ ವಜ್ರಾಭರಣ ಮಾರಾಟದ ಅಧಿಕೃತ ಪರವಾನಿಗೆಯೊಂದಿಗೆ ಆಭರಣ ಪ್ರಿಯರಿಗೆ ಒಂದೇ ಸೂರಿನಡಿ ಬೆಳ್ಳಿ – ಬಂಗಾರ – ವಜ್ರಾಭರಣ ದೊರೆಯುವಂತೆ ವಿಶೇಷ ಹೆಜ್ಜೆ ಇಟ್ಟು ಮುನ್ನಡೆಯುತ್ತಿದೆ.
ಗಣಪಯ್ಯ ಕುಡಾಳಕರ್ ಅವರ ಪರಿಶ್ರಮದ ಪಯಣ
ಗಣಪಯ್ಯ ಕುಡಾಳಕರ್ ಅವರು ಸತತ ಪರಿಶ್ರಮದೊಂದಿಗೆ ಕಟ್ಟಿ ಬೆಳಸಿದ ಅಲಂಕಾರದ ಕಿರೀಟಕ್ಕೆ, ಮೂರು ರತ್ನಗಳಂತೆ , ಗಣಪಯ್ಯ ಅವರ ಮಕ್ಕಳಾದ ಉದಯ, ಪ್ರಕಾಶ , ಮಧು ಕುಡಾಲಕರ ಸಹೋದರರು, ಗ್ರಾಹಕರ ಪ್ರೀತಿ ವಿಶ್ವಾಸವನ್ನು ಉಳಿಸಿ ಬೆಳೆಸಿಕೊಂಡು ಹೋಗುತ್ತಿದ್ದು ದಿನದಿಂದ ದಿನಕ್ಕೆ ಅಲಂಕಾರ ಜ್ಯುವೆಲರ್ಸ್ ಹೊಸ ಹೊಸ ಗ್ರಾಹಕರ ಮನ ಸೂರೆಗೊಳ್ಳುತ್ತಾ ಎಲ್ಲಡೆಯೂ ಮನೆಮಾತಾಗುತ್ತಿದೆ. ಗಣಪಯ್ಯ ಕುಡಾಳಕರ ಅವರು ತಮ್ಮ 11 ನೇ ವಯಸ್ಸಿನಲ್ಲೇ ಬಂಗಾರದ ಕೆಲಸವನ್ನು ಶೃದ್ಧೆಯಿಂದ ಕಲಿತು ಕರಗತ ಮಾಡಿಕೊಂಡರಲ್ಲದೇ,
ಮನೆಯಲ್ಲೇ ಬಂಗಾರದ ಆಭರಣ ತಯಾರಿಕೆ ಕೆಲಸ ನಡೆಸಿ ಕಷ್ಟಕರವಾದ ಬದುಕಿನಲ್ಲಿ ಪರಿಶ್ರಮದಿಂದ ಹಂತ ಹಂತವಾಗಿ ಮೇಲಕ್ಕೆ ಏರಿದವರು.
- 11ನೇ ವಯಸ್ಸಿನಲ್ಲಿ ಬಂಗಾರದ ಕೆಲಸ ಕಲಿತು ಪರಿಣತಿ ಪಡೆದರು
- ಮನೆಯಲ್ಲೇ ಆಭರಣ ತಯಾರಿಕೆ ಆರಂಭಿಸಿ ಹಂತ ಹಂತವಾಗಿ ಮೇಲಕ್ಕೆ ಏರಿದರು
- 1995ರಲ್ಲಿ ಅಂಕೋಲಾದ ಬಂಡಿಬಾಜಾರದಲ್ಲಿ ಅಲಂಕಾರ ಜ್ಯುವೆಲರ್ಸ್ ಅಂಗಡಿ ಆರಂಭಿಸಿದರು
- ತಮ್ಮ ಮೂವರು ಮಕ್ಕಳಾದ ಉದಯ, ಪ್ರಕಾಶ, ಮಧು ಕುಡಾಳಕರ್ ಅವರೊಂದಿಗೆ ಉದ್ಯಮವನ್ನು ವಿಸ್ತರಿಸಿದರು

ಆಭರಣ ತಯಾರಿಕೆಯಲ್ಲಿ ಇರುವ ನೈಪುಣ್ಯತೆ, ಗ್ರಾಹಕರೊಂದಿಗಿನ ಉತ್ತಮ ಭಾಂದವ್ಯ ಹಾಗೂ ಪ್ರೀತಿ ಮತ್ತು ಗ್ರಾಹಕರು ಅವರ ಮೇಲೆ ಇಟ್ಟ ನಿರಂತರ ವಿಶ್ವಾಸ ಅಂಕೋಲಾ ಸುತ್ತ ಮುತ್ತಲಿನ ಪರಿಸರದಲ್ಲಿ ಈ ಕುಟುಂಬಕ್ಕೆ ತನ್ನದೇ ಆದ ಹಿರಿತನ ಹಾಗೂ ಒಳ್ಳೆಯ ಹೆಸರನ್ನು ತಂದು ಕೊಟ್ಟಿದೆ. ಮನೆಯಲ್ಲೇ ಬಂಗಾರದ ಆಭರಣ ತಯಾರಿಕೆ ಕೆಲಸ ಮಾಡುತ್ತಿದ್ದ ಗಣಪಯ್ಯ ಕುಡಾಳಕರ್ ಅವರು 1995 ರಲ್ಲಿ ಅಧಿಕೃತವಾಗಿ ಅಂಕೋಲಾದ ಬಂಡಿ ಬಾಜಾರದಲ್ಲಿ ಅಲಂಕಾರ ಜ್ಯುವೆಲರ್ಸ್ ಎಂಬ ಬಂಗಾರದ ಆಭರಣಗಳ ಅಂಗಡಿಯನ್ನು ಆರಂಭಿಸಿದ್ದರು.
ನಗು ಮುಖದ ಸೇವೆ
ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣವನ್ನು ಕೊಡಿಸಿದರೂ ಕುಲ ಕಸುಬಿನಲ್ಲಿ ತಂದೆಯೊಂದಿಗೆ ಕೈಜೋಡಿಸಿದ ಮೂವರೂ ಮಕ್ಕಳು ತಂದೆ ಕಾಲವಾದ ನಂತರ ಅವರು ಕಟ್ಟಿದ ಉದ್ಯಮದಲ್ಲೇ ಮುಂದುವರಿಯುವ ಮೂಲಕ ತಮ್ಮ ನಗು ಮುಖದ ಸೇವೆ ಮೂಲಕ ಇಂದು ಕೇವಲ ಅಂಕೋಲಾ ಅಷ್ಟೇ ಅಲ್ಲದೇ ದೇಶ ವಿದೇಶಗಳ ಕೆಲ ಗ್ರಾಹಕರನ್ನೂ ತನ್ನತ್ತ ಸೆಳೆದು ಯಶಸ್ವಿ ಸ್ವರ್ಣೋದ್ಯಮಿಗಳಾಗಿ ಗುರುತಿಸಿಕೊಂಡಿದ್ದಾರೆ.
ಗ್ರಾಹಕರು ಮತ್ತು ಹಿತೈಷಿಗಳಿಗೆ ತುಂಬು ಹೃದಯದ ಸ್ವಾಗತ
ವಿಶ್ವಾಸಕ್ಕೆ ಇನ್ನೊಂದು ಹೆಸರೇ ಅಲಂಕಾರ ಜ್ಯುವೆಲರ್ಸ್ ಎಂಬಷ್ಟರ ಮಟ್ಟಿಗೆ ಪ್ರಸಿದ್ಧಿ ಪಡೆದಿದೆ. ಈ ಉದ್ಯಮದ ಯಶಸ್ಸಿನ ಹಿಂದೆ ತಮ್ಮ ತಂದೆ ಗಣಪಯ್ಯ ಕುಡಾಲಕರ್ ಅವರ ಪರಿಶ್ರಮ ಮತ್ತು ಗ್ರಾಹಕರ ಪ್ರೀತಿ ವಿಶ್ವಾಸ , ಕುಟುಂಬ ವರ್ಗ ಸೇರಿದಂತೆ ಸರ್ವರ ಸಹಕಾರ ಮತ್ತು ದೈವ ಕೃಪೆಯೇ ಮೂಲ ಕಾರಣ ಎಂದು ಧನ್ಯತೆಯಿಂದ ಸ್ಮರಿಸಿಕೊಳ್ಳುವ ಅಲಂಕಾರ ಜ್ಯುವೆಲರ್ಸ್ ನ ಪಾಲುದಾರರಾಗಿರುವ ಮೂವರೂ ಸಹೋದರರು , ಭವಿಷ್ಯದಲ್ಲಿ ತಮ್ಮ ಉದ್ಯಮವನ್ನು ಮತ್ತಷ್ಟು ಬೆಳೆಸಲು ಸರ್ವರ ಸಹಕಾರ ಕೋರುತ್ತಿದ್ದಾರೆ.
ಅಲಂಕಾರ ಜ್ಯುವೆಲರ್ಸ್ ನ ವಿಶೇಷತೆ, ವಿಶ್ವಾಸಾರ್ಹ ಸೇವೆ ನಿಮ್ಮದಾಗಿಸಿಕೊಳ್ಳಲು ತಪ್ಪದೇ ಭೇಟಿ ನೀಡಿ, ಖಾತರಿ ಪಡಿಸಿಕೊಳ್ಳಬಹುದಾಗಿದೆ. ತಮ್ಮ ನವೀಕೃತ ಮಳಿಗೆಯ ಉದ್ಘಾಟನೆಯ ಶುಭ ಸಂದರ್ಭದಲ್ಲಿ ಕುಡಾಳಕರ ಕುಟುಂಬವು ,ತಮ್ಮೆಲ್ಲ ಗ್ರಾಹಕರು ಮತ್ತು ಹಿತೈಷಿಗಳಿಗೆ ತುಂಬು ಹೃದಯದ ಸ್ವಾಗತ ನೀಡುತ್ತಿದೆ. ಆರಂಭಿಕ ವಿಶೇಷ ಕೊಡುಗೆಯಾಗಿ ಪ್ರತಿ ಗ್ರಾಂ ಚಿನ್ನದ ಆಧಾರಣದ ಮೇಲೆ ರೂ 300 ಕಡಿತ ಇದೆ.
ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ