
ಹರಿಯಾಣದಿಂದ ಕೇರಳಕ್ಕೆ ಸಾಗಾಟ
ಗೋಕರ್ಣ ಪೊಲೀಸರಿಂದ ದಾಳಿ
ಕುಮಟಾ: ಲಾರಿಯ ಮೂಲಕ ಅಕ್ರಮವಾಗಿ ಸಾಗಿಸುತ್ತಿದ್ದ 37 ಕೋಣದ ಮರಿಗಳನ್ನು ತಾಲೂಕಿನ ಹಿರೇಗುತ್ತಿಯ ಬಳಿ ರಕ್ಷಣೆ ಮಾಡಲಾಗಿದ್ದು, ಐವರು ಆರೋಪಿಗಳನ್ನು ಬಂಧಿಸಲಾಗಿದೆ. ಬಂಧಿತರು ಹರಿಯಾಣ ಮತ್ತು ಉತ್ತರ ಪ್ರದೇಶದವರು ಎಂದು ತಿಳಿದುಬಂದಿದೆ. ಹರಿಯಾಣದಿಂದ ಕೇರಳಕ್ಕೆ ಹಿಂಸಾತ್ಮಕವಾಗಿ ಸಾಗಿಸುತ್ತಿದ್ದರು.
ಗೋಕರ್ಣ ಪೊಲೀಸರು ದಾಳಿ ನಡೆಸಿ, ಆರೋಪಿಗಳನ್ನು ಬಂಧಿಸಿ ವಿಚಾರಣೆ ಕೈಗೊಂಡಿದ್ದಾರೆ. ಇವುಗಳ ಬೆಲೆ ಸುಮಾರು ಮೂರು ಲಕ್ಷ ಎಂದು ಅಂದಾಜಿಸಲಾಗಿದೆ. ಪೊಲೀಸರು ಆರೋಪಿಗಳನ್ನು ಬಂಧಿಸಿದ್ದು, ಹೆಚ್ಚಿನ ಮಾಹಿತಿಯನ್ನು ಕಲೆಹಾಕುತ್ತಿದ್ದಾರೆ.
ವಿಸ್ಮಯ ನ್ಯೂಸ್, ಕುಮಟಾ