ಕುಮಟಾ ಗ್ರಾಮದೇವತೆ ಸನ್ನಿಧಿಯಲ್ಲಿ ಹೂವಿನ ಪೂಜೆ: ವಿವಿಧ ಪುಷ್ಪಗಳಿಂದ ಅಲಂಕರಿಸಿದ ಹೂವಿನ ಮಂಟಪದಲ್ಲಿ ಕಂಗೊಳಿಸಿದ ದೇವಿ

ಕುಮಟಾ: ಗ್ರಾಮದೇವತೆಯಾಗಿ ನೆಲೆನಿಂತು ಭಕ್ತರ ಇಷ್ಟಾರ್ಥ ಸಿದ್ದಿಕ್ಷೇತ್ರವಾದ ಶ್ರೀ ಶಾಂತಿಕಾ ಪರಮೇಶ್ವರಿ ದೇವಸ್ಥಾನದಲ್ಲಿ ಕಳೆದ ಅನೇಕ ವರ್ಷಗಳಿಂದ ಆಚರಿಸಿಕೊಂಡು ಬರಲಾಗುತ್ತಿರುವ ಹೂವಿನ ಪೂಜೆ ಕಾರ್ಯಕ್ರಮವು ಈ ವರ್ಷವೂ ಸಹ ಅತ್ಯಂತ ವಿಜ್ರಂಬಣೆಯಿoದ ಸಹಸ್ರಾರು ಭಕ್ತರ ಒಗ್ಗೂಡುವಿಕೆಯಲ್ಲಿ ಸಂಪನ್ನಗೊoಡಿತು.
ಕುಮಟಾದ ಗ್ರಾಮದೇವತೆ ಶ್ರೀ ಶಾಂತಿಕಾ ಪರಮೇಶ್ವರಿ ದೇವಸ್ಥಾನ
ದೇವಸ್ಥಾನಕ್ಕೆ ತಾಲೂಕಿನೆಲ್ಲೆಡೆಯಿಂದ ಸೇರಿದಂತೆ ವಿವಿದ ಭಾಗಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ ಭಕ್ತಾಧಿಗಳು, ವಿವಿದ ಬಗೆಯ ಪುಷ್ಪಗಳಿಂದ ಅಲಂಕರಿಸಿದ ಹೂವಿನ ಮಂಟಪದಲ್ಲಿ ಆಸೀನಳಾದ ಶ್ರೀ ಶಾಂತಿಕಾ ಪರಮೇಶ್ವರಿಯ ದರ್ಶನ ಪಡೆದು ಕೃತಾರ್ಥರಾದರು.
ಕುಮಟಾದ ಗ್ರಾಮದೇವತೆಯಾದ ಶ್ರೀ ಶಾಂತಿಕಾ ಪರಮೇಶ್ವರಿ ದೇವಾಲಯವು ಜಾಗೃತಾ ಪೀಠವಾಗಿ ಪಟ್ಟಣದಲ್ಲಿ ರಾರಾಜಿಸುತ್ತಿದೆ. ವರ್ಷಂಪ್ರತಿಯoತೆ ಆಚರಿಸುವ ಹೂವಿನ ಪೂಜೆ ಕಾರ್ಯಕ್ರಮದಲ್ಲಿ ಸಹಸ್ರಾರು ಸಂಖ್ಯೆಯಲ್ಲಿ ಭಕ್ತಾಧಿಗಳು ಆಗಮಿಸಿ ಕುಂಕುಮಾರ್ಚನೆ, ಉಡಿಸೇವೆ, ಹಣ್ಣುಕಾಯಿ ಸೇವೆ ಸಲ್ಲಿಸಿ ತಾಯಿಯ ಆಶಿರ್ವಾದ ಪಡೆದು ಪುನೀತರಾದರು.
ಪ್ರತಿ ವರ್ಷವು ಸಹ ವಿಭಿನ್ನವಾಗಿ ತಾಯಿಗೆ ವಿಶೇಷ ಹೂವಿನ ಪೂಜೆ ಸಲ್ಲಿಸುವುದು ಶ್ರೀ ಶಾಂತಿಕಾ ಪರಮೇಶ್ವರಿ ದೇವಸ್ಥಾನದ ವಿಶೇಷವಾಗಿದೆ. ಈ ಬಾರಿ ಹೂವಿನ ಅಲಂಕಾರವನ್ನು ದೇವರಹಕ್ಕಲದ ಶ್ರೀ ಶಾಂತಿಕಾ ಡೆಕೋರೇಟರ್ಸ್ ನೇತೃತ್ವದಲ್ಲಿ ಮಾಡಲಾಗಿತ್ತು.
ಈ ಸಂದರ್ಭದಲ್ಲಿ ಶ್ರೀ ಶಾಂತಿಕಾ ಪರಮೇಶ್ವರಿ ದೇವಸ್ಥಾನದ ಆಡಳಿತ ಮಂಡಳಿಯ ಮೊಕ್ತೇಸರರಾದ ಕೃಷ್ಣ ಬಾಬಾ ಪೈ ಅವರು ಮಾತನಾಡಿ, ಪ್ರತಿವರ್ಷ ಭಾದ್ರಪದ ಮಾಸದಂದು ಪುಷ್ಪ ಪೂಜೆಯನ್ನು ಕಳೆದ ಅನೇಕ ವರ್ಷಗಳಿಂದ ಅತ್ಯಂತ ವಿಜ್ರಂಭಣೆಯಿoದ ಆಚರಿಸಿಕೊಂಡು ಬರಲಾಗುತ್ತಿದ್ದು, ಶ್ರೀ ಶಾಂತಿಕಾ ಮಿತ್ರ ಮಂಡಳಿ ಹಾಗೂ ಇತರ ಭಕ್ತ ಜನರು ಈ ಒಂದು ಪುಷ್ಪಪೂಜೆಯನ್ನು ಮಾಡಿಕೊಂಡು ಬಂದಿದ್ದಾರೆ. ಈ ಹೂವಿನ ಪೂಜೆ ಎರಡು ದಿನಗಳ ಕಾಲ ನಡೆಯಲಿದ್ದು ಭಕ್ತಾದಿಗಳು ಇನ್ನು ಹೆಚ್ಚಿನ ಸಂಖ್ಯೆಯಲ್ಲಿ ಬರುವ ನಿರೀಕ್ಷೆ ಇದೆ ಎಂದು ಮಾಹಿತಿ ನೀಡಿದರು.
ಒಟ್ಟಾರೆ ಗ್ರಾಮ ದೇವತೆಯ ಹೂವಿನ ಪೂಜೆ ಕಾರ್ಯಕ್ರಮವು ಅತ್ಯಂತ ವಿಜ್ರಂಭಣೆಯಿoದ ಸಂಪನ್ನಗೊoಡಿದ್ದು ಬೆಳಿಗ್ಗೆಯಿಂದಲೇ ತಾಲೂಕಿನ ವಿವಿಧ ಭಾಗಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ದೇವಸ್ಥಾನಕ್ಕೆ ಆಗಮಿಸಿದ ಭಕ್ತಾದಿಗಳು ತಮ್ಮ ಸೇವೆಗಳನ್ನು ಸಲ್ಲಿಸಿ ತಾಯಿಯ ಕೃಪೆಗೆ ಪಾತ್ರರಾದರು.
ವಿಸ್ಮಯ ನ್ಯೂಸ್, ದೀಪೇಶ ನಾಯ್ಕ, ಕುಮಟಾ