Follow Us On

WhatsApp Group
Trending

ಜಿಲ್ಲೆಗೆ ಬಂದು ತಲುಪಿದ ಕೋವಿಡ್ ಲಸಿಕೆ: ಮೊದಲ ಹಂತದಲ್ಲಿ ಎಷ್ಟು ಲಸಿಕೆ ಬಂತು?

ಜನವರಿ 16ರಂದೇ ಲಸಿಕಾ ಅಭಿಯಾನಕ್ಕೆ ಚಾಲನೆ
ಮೊದಲ ಯಾರಿಗೆ ಲಸಿಕೆ ಯಾರಿಗೆ?
ಹೇಗಿದೆ ಲಸಿಕೆ ವಿತರಣೆ ತಯಾರಿ

ಕಾರವಾರ: ಉತ್ತರಕನ್ನಡ ಜಿಲ್ಲೆಯಲ್ಲೂ ಕೋವಿಡ್ ವ್ಯಾಕ್ಸಿನ್ ವಿತರಣೆಗೆ ಕ್ಷಣಗಣನೆ ಆರಂಭವಾಗಿದ್ದು ಜಿಲ್ಲಾಡಳಿತ ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದ್ದಾಗಿ ಜಿಲ್ಲಾ ಪಂಚಾಯತ್ ಸಿಇಓ ಎಂ.ಪ್ರಿಯಾAಗಾ ತಿಳಿಸಿದ್ದಾರೆ. ಜನವರಿ 16ರಂದು ಪ್ರಧಾನಿ ನರೇಂದ್ರ ಮೋದಿ ವರ್ಚುವಲ್ ವೇದಿಕೆಯ ಮೂಲಕ ಲಸಿಕಾ ಅಭಿಯಾನಕ್ಕೆ ಚಾಲನೆ ನೀಡಲಿದ್ದು ಅದೇ ದಿನ ಜಿಲ್ಲೆಯ ನಿಗಧಿತ ಕೇಂದ್ರಗಳಲ್ಲಿ ವ್ಯಾಕ್ಸಿನೇಷನ್ ಪ್ರಕ್ರಿಯೆ ಆರಂಭವಾಗಲಿದೆ.

ಈಗಾಗಲೇ ಜಿಲ್ಲೆಗೆ 15 ಸಾವಿರ ಡೋಸ್ ಲಸಿಕೆ ಹಂಚಿಕೆ ಮಾಡಲಾಗಿದ್ದು ಈ ಪೈಕಿ ಮೊದಲ ಹಂತದಲ್ಲಿ ಕೋವಿಶೀಲ್ಡ್ ನ ಸುಮಾರು 7,000 ಡೋಸ್ ಬುಧವಾರ ರಾತ್ರಿ ಬೆಳಗಾವಿ ವಿಭಾಗದಿಂದ ಲಸಿಕಾ ವ್ಯಾನ್‌ಗಳ ಮೂಲಕ ಜಿಲ್ಲೆಗೆ ಬಂದು ತಲುಪಿದೆ. ಈ ಲಸಿಕೆಯಲ್ಲಿ 190 ಕೇಂದ್ರೀಯ ಆರೋಗ್ಯ ಕಾರ್ಯಕರ್ತರು, 14660 ರಾಜ್ಯ ಆರೋಗ್ಯ ಕಾರ್ಯಕರ್ತರು, 240 ಸಶಸ್ತ್ರ ಪಡೆಗಳ ವೈದ್ಯಕೀಯ ಸೇವಾಕರ್ತರಿಗೆ ಲಸಿಕೆ ನೀಡಲು ಸೂಚಿಸಲಾಗಿದೆ.

ಜಿಲ್ಲೆಯಲ್ಲಿ ಆರೋಗ್ಯ ಇಲಾಖೆ ಸಿಬ್ಬಂದಿ, ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತರು ಸೇರಿ ಸುಮಾರು 14 ಸಾವಿರ ಮಂದಿಯ ಪಟ್ಟಿ ಸಿದ್ಧಪಡಿಸಲಾಗಿದೆ. ಸದ್ಯ ಮೊದಲ ಹಂತದಲ್ಲಿ 11 ಲಸಿಕಾ ಕೇಂದ್ರಗಳನ್ನ ಜಿಲ್ಲೆಯಾದ್ಯಂತ ತೆರೆಯಲಾಗಿದ್ದು ಅಲ್ಲಿ ಪ್ರತಿದಿನ ಒಂದು ಕೇಂದ್ರದಲ್ಲಿ ನೂರರಂತೆ 1,100 ಮಂದಿಗೆ ಪ್ರತಿದಿನ ಲಸಿಕೆ ನೀಡಲಾಗುತ್ತದೆ ಎಂದು ಮಾಹಿತಿ ನೀಡಿದರು.

ವಿಸ್ಮಯ ನ್ಯೂಸ್, ಕಾರವಾರ

Back to top button