Big News
Trending

ಸದ್ಗುರು ಶ್ರೀಧರ ಸ್ವಾಮಿಗಳ ಬಾಲ್ಯದ ಜೀವನ ಹೇಗಿತ್ತು?ಕಣ್ಣಲ್ಲಿ ನೀರು ತರಿಸುತ್ತೆ- ತಾಯಿ ಮಗನ ಸಂಭಾಷಣೆ

ಶ್ರೀಧರ ಸ್ವಾಮಿಗಳ ಬಾಲ್ಯದ ಜೀವನ ಹೇಗಿತ್ತು?
ಶಾಲೆಯಲ್ಲಿ ಶ್ರೀಧರರು ಏನು ಮಾಡುತ್ತಿದ್ದರು?
ಅಳುತ್ತಿದ್ದ ತಾಯಿಗೆ ಶ್ರೀಧರರು ಮಾಡಿದ ಸಮಾಧಾನವೇನು?
ತುಂಬಾ ಅಪರೂಪದ ಮಾಹಿತಿ ಈ ವಿಡಿಯೋದಲ್ಲಿದೆ

ಸದ್ಗುರು ಶ್ರೀಧರ ಸ್ವಾಮಿಗಳು, ದತ್ತಾತ್ರೇಯ ಅವತಾರವೆಂದು ಪರಿಗಣಿಸಲ್ಪಟ್ಟ ಮಹನೀಯರು. ಸ್ವಾಮಿ ಸದ್ಗುರು ಶ್ರೀಧರ ಸ್ವಾಮಿಗಳ ಬಗ್ಗೆ ಅನೇಕ ಕಡೆ ಹತ್ತಾರು ಪವಾಡದ ಕಥೆಗಳು ಕೇಳಿಬರುತ್ತದೆ. ನಂಬಿದವನ್ನೂ ಎಂದಿಗೂ ಶ್ರೀಧರ ಸ್ವಾಮಿಗಳು ಕೈಬಿಡುವುದಿಲ್ಲ ಎಂಬುದು ಭಕ್ತರ ಅಚಲವಾದ ನಂಬಿಕೆ. ದತ್ತಾತ್ರೇಯ ಸ್ವರೂಪಿಯೆಂದೇ ಭಕ್ತರಿಂದ ಆರಾಧಿಸಲ್ಪಡುವ ಶ್ರೀಧರ ಸ್ವಾಮಿಗಳು ಮಹಾರಾಷ್ಟ್ರದ ಸಜ್ಜನಗಡದಲ್ಲಿ ಜನಿಸಿದರೂ, ಕರ್ನಾಟಕದ ವರದಹಳ್ಳಿಯನ್ನು ತಮ್ಮ ತಪೋಭೂಮಿಯನ್ನಾಗಿಸಿಕೊಂಡು, ಇಲ್ಲೆ ನೆಲೆನಿಂತು ಭಕ್ತರ ಸಂಕಷ್ಟಗಳನ್ನು ನಿವಾರಿಸಿದ ಪುಣ್ಯಾತ್ಮರು.

ಮಹಾರಾಷ್ಟ್ರ ರಾಜ್ಯದ ನಾಂದೇಡ್ ಜಿಲ್ಲೆಯಲ್ಲಿ ಶ್ರೀನಾರಾಯಣ ರಾಯರು ಮತ್ತು ಕಮಲಾಬಾಯಿ ಎಂಬ ಆದರ್ಶ ದಂಪತಿಗಳಿದ್ದರು. ಇವರೇ ಶ್ರೀ ಶ್ರೀಧರ ಸ್ವಾಮಿಗಳವರನ್ನು ಪುತ್ರ ರೂಪದಿಂದ ಪಡೆದ ಭಾಗ್ಯಶಾಲಿಗಳು. ಇವರಿಗೆ 2 ಗಂಡು, 1 ಹೆಣ್ಣು ಮಕ್ಕಳಿದ್ದರೂ ‘ಇವರೆಲ್ಲಾ ಅಲ್ಪಾಯುಷಿಗಳೆಂದು, ಶ್ರೀ ಗಾಣಾಗಾಪುರಕ್ಕೆ ಹೋಗಿ ಶ್ರೀ ದತ್ತ ಗುರುವಿನ ಸೇವೆ, ಅನುಸ್ಠಾನ, ತಪವನ್ನಾಚರಿಸಿದರೆ ನಿಮಗೊಬ್ಬ ಕುಲೋದ್ಧಾರಕ ಪುತ್ರನಾಗುವ ಯೋಗವಿದೆ’ ಎಂದು ಕುಲಪುರೋಹಿತರು ಇವರ ಜಾತಕವನ್ನು ನೋಡಿ ಹೇಳಿದ್ದರಂತೆ.

ಅಂತೆಯೇ ಈ ದಂಪತಿಗಳು ಗಾಣಗಾಪುರಕ್ಕೆ ತೆರಳಿ ಉಗ್ರ ತಪಸ್ಸನ್ನಾಚರಿಸಲು, ಶ್ರೀ ದತ್ತನ ಸಾಕ್ಷಾತ್ಕಾರವಾಯಿತು.ಇದರಂತೆಯೇ ಗರ್ಭವತಿಯಾದ ಕಮಲಾಬಾಯಿಯವರನ್ನು ಇವರ ತಾಯಿಯು ತನ್ನ ಇನ್ನೊಂದು ಮಗಳ ಮನೆಯಾದ ಕರ್ನಾಟಕ ರಾಜ್ಯದ ಗುಲ್ಬರ್ಗ ಜಿಲ್ಲೆಯ ಲಾಡ್ ಚಿಂಚೋಳಿಗೆ ಕರೆದೊಯ್ದರು. ಲಾಡ್ ಚಿಂಚೋಳಿ , ಕರ್ನಾಟಕದ ಗುಲ್ಭರ್ಗ ಜಿಲ್ಲೆಯಲ್ಲಿರುವ ಗಾಣಗಾಪುರದಿಂದ ಸುಮಾರು 25 ಕಿ.ಮೀ. ದೂರದಲ್ಲಿದೆ. ಇಲ್ಲಿಯೇ 07/12/1908 ರಲ್ಲಿ ಸಾಕ್ಷಾತ್ ಪರಬ್ರಹ್ಮ ಸ್ವರೂಪಿ ಶ್ರೀ ಶ್ರೀಧರರು ಜನ್ಮತಾಳಿದರು.

ಸದ್ಗುರು ಶ್ರೀ ಶ್ರೀಧರರಿಗೆ ಬಾಲ್ಯದಲ್ಲಿಯೇ ಹರಿಕಥೆ, ಕೀರ್ತನೆ, ಸತ್ಸಂಗ, ಪುರಣ ಪ್ರವಚನಗಳಲ್ಲಿ ತುಂಬ ಅಭಿರುಚಿಯಿತ್ತು ಮತ್ತು ಸನಾತನ ಧರ್ಮದಲ್ಲಿ ಅಚಲವಾದ ಶ್ರದ್ಧೆ, ಭಕ್ತಿ, ನಿಷ್ಠೆಗಳಿದ್ದವು. ಮುಖ ಕಮಲದಲ್ಲಿ ಅಖಂಡರಾಮನಾಮವಿತ್ತು. ಶ್ರೀಧರರ 12 ನೇ ವಯಸ್ಸಿನೊಳಗಾಗಿಯೇ ತಂದೆ, ಅಕ್ಕ, ತಾಯಿಯೂ ಕಾಲಕ್ಕೆ ತುತ್ತಾಗಿ ಶ್ರೀಧರರನ್ನು ಅಗಲಿದ್ದರು. ಶ್ರೀಧರರ ಬಾಲ್ಯ ಮತ್ತು ವಿದ್ಯಾಭ್ಯಾಸವು ಗುಲ್ಬರ್ಗಾದ ‘ನೂತನ ವಿದ್ಯಾಲಯ’ದಲ್ಲೂ ಅನಂತರ ಪುಣೆಯಯೂ ನಡೆಯಿತು.

ಶ್ರೀಧರ ಸ್ವಾಮಿಗಳ ಬಾಲ್ಯದ ಜೀವನ ಹೇಗಿತ್ತು? ಶಾಲೆಯಲ್ಲಿ ಶ್ರೀಧರರು ಏನು ಮಾಡುತ್ತಿದ್ದರು. ಈ ಎಲ್ಲಾ ಹತ್ತಾರು ಇಂಟರೆಸ್ಟಿಂಗ್ ವಿಷಯ ಕುರಿತು ಇಲ್ಲಿದೆ ಸಂಪೂರ್ಣ ಮಾಹಿತಿ. ಒಂದು ದಿನ ಅಮ್ಮ ಒಂದೇ ಸಮನೆ ಅಳುತ್ತಿದ್ದರಂತೆ. ಅಳುತ್ತಿದ್ದ ಅಮ್ಮನಿಗೆ ಶ್ರೀಧರರು ಕೊಟ್ಟು ಉತ್ತರವೇನು ಗೊತ್ತಾ? ಕಣ್ಣಲ್ಲಿ ನೀರು ತರಿಸುತ್ತೆ- ತಾಯಿ ಮಗನ ಸಂಭಾಷಣೆ.. ಹೆಚ್ಚಿನ ಮಾಹಿತಿಗಾಗಿ ಈ ವಿಡಿಯೋ ನೋಡಿ.

ಶ್ರೀಧರ ಸ್ವಾಮಿಗಳ ಅಪರೂಪದ ಚಿತ್ರ

ಹತ್ತಾರು ಕ್ಷೇತ್ರದಲ್ಲಿ ಇದೆ ಉದ್ಯೋಗಾವಕಾಶಗ್ಲೋಬಲ್ ಕನ್ಸಲ್ಟೆನ್ಸಿ ಸರ್ವೀಸಸ್, ಇಂಡಿಯಾ7TH, SSLC, PUC, DIPLOMA, ITI, D.ED, B.ED, ANY DEGREE, ANY PG, PH.D,ANY PROFESSIONAL COURSES ಆದವರು ಸಂಪರ್ಕಿಸಿ.ಖಾಸಗಿ, ರಾಜ್ಯ & ಕೇಂದ್ರ ಸರ್ಕಾರಿ ಕ್ಷೇತ್ರದಲ್ಲಿ ಉದ್ಯೋಗಾವಕಾಶಇಂದೇ ಸಂಪರ್ಕಿಸಿ: 9880179177ಪ್ರಧಾನ ಕಚೇರಿ ಶಿರಸಿ

Back to top button