Follow Us On

WhatsApp Group
Big News
Trending

ಕಡಲತೀರದಲ್ಲಿ ಅಪರೂಪದ ಡಾಲ್ಫಿನ್ ಕಳೆಬರಹ ಪತ್ತೆ : 2.55 ಮೀಟರ್ ಉದ್ದ, 250 ಕೆ.ಜಿ ತೂಕ

ಎರಡು ಅಥವಾ ಮೂರು ದಿನಗಳ ಹಿಂದೆ ಈ ಡಾಲ್ಫಿನ್ ಸಾವನ್ನಪ್ಪಿರಬಹುದು ಎಂದು ಅಂದಾಜಿಸಲಾಗಿದೆ. ಅರಣ್ಯಾಧಿಕಾರಿಗಳು ಕಡಲತೀರಕ್ಕೆ ಆಗಮಿಸಿ ಡಾಲ್ಫಿನ್ ಕಳೆಬರವನ್ನು ಪರಿಶೀಲನೆ ನಡೆಸಿದ್ದು, ಮರಣೋತ್ತರ ಪರೀಕ್ಷೆ ನಡೆಸಿದ್ದಾರೆ.

ಕುಮಟಾ: ಇಲ್ಲಿನ ಕಡಲತೀರಕ್ಕೆ ಬಲು ಅಪರೂಪದ ವಿಶೇಷವಾದ ಡಾಲ್ಫಿನ್ ಕಳೆಬರವೊಂದು ಬಂದು ಬಿದ್ದಿತ್ತು. ಈ ಡಾಲ್ಫಿನ್ ಸರಿಸುಮಾರು 2.55 ಮೀಟರ್ ಉದ್ದದ 250 ಕೆ.ಜಿ ತೂಕವಿದೆ. ಆಹಾರ ಹುಡುಕಿ ಬಂದ ವೇಳೆ ಬೊಟ್ ಗೆ ಡಿಕ್ಕಿ ಹೊಡೆದೋ ಅಥವಾ ಆರೋಗ್ಯ ಸಮಸ್ಯೆಯಾಗಿ ಮೃತಪಟ್ಟಿರಬಹುದು ಎಂದು ಅಧಿಕಾರಿಗಳು ಊಹಿಸಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಹೊಳನಗದ್ದೆ ಕಡಲತೀರದಲ್ಲಿ ಇಂದು ದೊರೆತಿದೆ.

ಮೃತಪಟ್ಟ ಡಾಲ್ಫಿನ್ ಕಳೆಬರಹವನ್ನು ಇಂಡೊ ಫ್ಯಾಸಿಫಿಕ್ ಹಂಪ್ ಬ್ಯಾಕ್ ಡಾಲ್ಫಿನ್ ಕಳೆಬರಹ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಎರಡು ಅಥವಾ ಮೂರು ದಿನಗಳ ಹಿಂದೆ ಈ ಡಾಲ್ಫಿನ್ ಸಾವನ್ನಪ್ಪಿರಬಹುದು ಎಂದು ಅಂದಾಜಿಸಲಾಗಿದೆ. ಅರಣ್ಯಾಧಿಕಾರಿ ಪ್ರವೀಣ್ ರವರು ಕಡಲತೀರಕ್ಕೆ ಆಗಮಿಸಿ ಡಾಲ್ಫಿನ್ ಕಳೆಬರವನ್ನು ಪರಿಶೀಲನೆ ನಡೆಸಿದ್ದು, ಮರಣೋತ್ತರ ಪರೀಕ್ಷೆ ಮಾಡಲಾಗಿದೆ.

ಆಳ ಸಮುದ್ರದಲ್ಲಿ ವಾಸವಿರುವ ಈ ಡಾಲ್ಫಿನ್ ಗಳು 15 ರಿಂದ 20 ಸೆಕೆಂಡ್ ಸಮುದ್ರದ ನೀರಿನಿಂದ ಮೇಲೆಬಂದು ಬಳಿಕ ಮತ್ತೆ ನೀರಿನಲ್ಲಿ ಸಾಗಿ ಮೀನುಗಳನ್ನು ಶಿಕಾರಿ ಮಾಡುತ್ತವೆ. ಇದು ಅತ್ಯಂತ ಬುದ್ಧಿವಂತ ಸಸ್ತನಿಯಾಗಿದೆ ಎಂದು ಅರಣ್ಯಾಧಿಕಾರಿ ಪ್ರವೀಣ್ ರವರು ಮಾಹಿತಿ ನೀಡಿದ್ದಾರೆ.

ಶ್ರೀ ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಪೀಠ “ಪ್ರಧಾನ ತಾಂತ್ರಿಕ್ : ಶ್ರೀ ವಾಸುದೇವನ್ ಮೊಬೈಲ್ : 9964108888,,,, INDIAN FAMOUS ASTROLOGER, ಫೋನಿನಲ್ಲಿ ಪ್ರಶ್ನೆ ,ಫೋನಿನಲ್ಲಿ ಉತ್ತರ , ಫೋನಿನಲ್ಲಿ ಪರಿಹಾರ, ನಿಮ್ಮ ಜೀವನದ ಯಾವುದೇ ಕಷ್ಟ ಸಂಕಷ್ಟಗಳಿದ್ದರೂ ಕೇವಲ 3 ದಿನದಲ್ಲಿ ಪರಿಹಾರ ಶತಸಿದ್ಧ ಸ್ತ್ರೀ ಪುರುಷ ಪ್ರೇಮ ವಿಚಾರ, ವಶೀಕರಣ,ಅತ್ತೆ ಸೊಸೆ ಜಗಳ,ಸಂತಾನ,ಆರೋಗ್ಯ ತೊಂದರೆ, ಸ್ತ್ರೀಯರ ಗುಪ್ತ ಸಮಸ್ಯೆ,ಗಂಡ-ಹೆಂಡತಿಯ ಕಲಹ, ನಿಮ್ಮ ಗಂಡ ಪರಸ್ತ್ರೀಯರ ವ್ಯಾಮೋಹದಲ್ಲಿ ಇದ್ದಾರೆ ವಶೀಕರಣ ಮತ್ತು ನಿಮ್ಮ ಜೀವನದ ಯಾವುದೇ ಸಮಸ್ಯೆಗಳಿದರು ಕೇರಳದ ಪೂಜಾ ವಿಧಿವಿಧಾನದಿಂದ ಕೇವಲ 3 ದಿನದಲ್ಲಿ ಪರಿಹಾರ ಶತಸಿದ್ಧಮೊಬೈಲ್ : 9964108888

ವಿಸ್ಮಯ ನ್ಯೂಸ್, ಕುಮಟಾ

Back to top button