ಡ್ರಿಂಕ್ ಎಂಡ್ ಡ್ರೈವ್ : ಚಾಲಕನಿಗೆ 6000 ರೂ ದಂಡ ವಿಧಿಸಿದ ನ್ಯಾಯಾಲಯ: ಡಿ. ಎಲ್ ಅಮಾನತ್ತಿಗೂ ಶಿಫಾರಸ್ಸು ಮಾಡಿದ ಪೋಲೀಸ್ ಇಲಾಖೆ

ಅಂಕೋಲಾ: ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದ ಅಪಘಾತ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಮಧ್ಯಪಾನ ಮಾಡಿ ವಾಹನ ಚಲಾಯಿಸಿದ್ದ ಎನ್ನಲಾದ ಚಾಲಕನ ಮೇಲೆ ನ್ಯಾಯಾಲಯ ದಂಡ ವಿಧಿಸಿ ತೀರ್ಪು ನೀಡಿದ್ದು ಅದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ಇಲಾಖೆ ಸಹ ಚಾಲಕನ ವಾಹನ ಚಾಲನಾ ಪರವಾನಿಗೆ ರದ್ದು ಮಾಡಲು ಆರ್ ಟಿ ಓ ಅವರಿಗೆ ಶಿಫಾರಸು ಮಾಡಲಾಗುವುದು ಎಂದಿರುವುದು ,ಈ ಬಿಗು  ಕ್ರಮಗಳು  ಮದ್ಯಪಾನ ಮಾಡಿ ವಾಹನ ಚಲಾಯಿಸುವವರಿಗೆ ಎಚ್ಚರಿಕೆಯ ಗಂಟೆ ಎನ್ನಲಾಗಿದೆ.

ದಿನಾಂಕ: 11/03/2023 ರಂದು ಬೆಳಗಿನ ಜಾವ 12-50 ಗಂಟೆಯ ಸುಮಾರಿಗೆ ಲಾರಿ ನಂಬರ ಎಂ.ಹೆಚ್. 12/ ಆರ್.ಎನ್. 8557 ನೇದರ ಚಾಲಕನಾದ ನಾಮದೇವ ತಂದೆ ಗೋವಿಂದ ಸಾ; ಮಹಾರಾಷ್ಟç ಈತನು ಮದ್ಯಪಾನ ಮಾಡಿಕೊಂಡು ಅತೀವೇಗ ಹಾಗೂ ಅಜಾಗರೂಕತೆಯಿಂದ ಲಾರಿಯನ್ನು ಚಲಾಯಿಸಿಕೊಂಡು ಬಂದು ಅಗಸೂರ ಜಗದೀಶ ಹೋಟೇಲ ಹತ್ತಿರ, ಎನ್ ಹೆಚ್.-63 ರಲ್ಲಿ ಬೊರವೇಲ್ ಲಾರಿ ನಂಬರ ಕೆ.ಎ. 01/ ಎಂ.ಎನ್ 9798 ನೇದ್ದಕ್ಕೆ ಡಿಕ್ಕಿ ಹೊಡೆದು ಅಪಘಾತ ಪಡಿಸಿ, ಎರಡು ಲಾರಿ ಜಖಂಗೊಳಿಸಿದ್ದಲ್ಲದೇ ತಾನೂ ಸಹ ಎಡಕಾಲಿಗೆ ಗಾಯನೋವು ಪಡಿಸಿಕೊಂಡ ಬಗ್ಗೆ ಅಂಕೋಲಾ ಪೊಲೀಸ್ ಠಾಣಾ ಸಿ.ಆರ್. ನಂ: 50/2022 ಕಲಂ: 279, 337,ಐ.ಪಿ.ಸಿ ಮತ್ತು 185 ಎಂ,ವಿ ಆಕ್ಟ ರೀತ್ಯ ಪ್ರಕರಣ ದಾಖಲಾಗಿತ್ತು.

ಪ್ರಕರಣದ ವಿಚಾರಣೆ ನಡೆಸಿದ ಮಾನ್ಯ ನ್ಯಾಯಾಲಯವು ಆರೋಪಿಗೆ 6,000/- ರೂ ದಂಡ ವಿಧಿಸಿರುತ್ತದೆ. ಹಾಗೂ ಮದ್ಯಪಾನ ಮಾಡಿ ಚಾಲನೆ ಮಾಡಿದ್ದಕ್ಕಾಗಿ ಆರೋಪಿಯ ಚಾಲನಾ ಪರವಾನಿಗೆ (ಡಿ.ಎಲ್) ಯನ್ನು ಸಹ ಅಮಾನತ್ತು ಮಾಡಲು ಆರ್.ಟಿ.ಓ. ರವರಿಗೆ ಶಿಫಾರಸ್ಸು ಮಾಡಲಾಗುವುದು ಎಂದು ಅಂಕೋಲಾ ಠಾಣೆಯ ಪೊಲೀಸ್ ನಿರೀಕ್ಷಕರಾದ ಶ್ರೀ ಜಾಕ್ಸನ್ ಡಿಸೋಜಾ ರವರು ತಿಳಿಸಿರುತ್ತಾರೆ.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Exit mobile version