Important
Trending

Sandalwood: ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ಶ್ರೀಗಂಧದ ತುಂಡುಗಳು ವಶಕ್ಕೆ: ಆರೋಪಿ ಪರಾರಿ

ಶಿರಸಿ: ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ಸುಮಾರು 2 ಲಕ್ಷ 25 ಸಾವಿರ ರೂಪಾಯಿ ಮೌಲ್ಯದ 64 ಕೆ.ಜಿ ಶ್ರೀಗಂಧದ (sandalwood ) ತುಂಡುಗಳನ್ನು ಅರಣ್ಯ ಇಲಾಖೆಯ ವಲಯ ಸಂಚಾರಿ ದಳದ ಇಲಾಖೆ ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ. ತಾಲೂಕಿನ ನರೂರ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಕಾರ್ಯಾಚರಣೆ ವೇಳೆ ಆರೋಪಿ ಸದಾನಂದ ಬಸಪ್ಪ ಗೌಡ ಪರಾರಿಯಾಗಿದ್ದು, ಆರೋಪಿಯ ಬಂಧನಕ್ಕಾಗಿ ಅಧಿಕಾರಿಗಳು ಬಲೆಬೀಸಿದ್ದಾರೆ. ವಲಯ ಸಂಚಾರಿ ದಳದ ವಲಯ ಅರಣ್ಯಾಧಿಕಾರಿ ಅಜಯ್ ಎಚ್ ನಾಯ್ಕ ನೇತೃತ್ವದಲ್ಲಿ ಉಪವಲಯ ಅರಣ್ಯಾಧಿಕಾರಿ ಇಲಿಯಾಸ್ ಶೇಖ್ ,ರಾಜು ಪೂಜಾರ್ ಪಾಲ್ಗೊಂಡಿದ್ದರು.

sandalwood photos

ವಿಸ್ಮಯ ನ್ಯೂಸ್, ಶಿರಸಿ

Back to top button