Important
Trending

ಔಷಧಿ ಅಂಗಡಿಯ ಶಟರ್ ಮುರಿದು ಕಳ್ಳತನ: ಸಿಸಿಟಿವಿಗೆ ಹಾನಿ ಮಾಡಿ ಎಸ್ಕೇಪ್!

ಭಟ್ಕಳ: ಹೂವಿನ ಚೌಕನಲ್ಲಿರುವ ಔಷಧಿ ಅಂಗಡಿಯ ಶಟರ್ ಮುರಿದು ಕಳ್ಳರು ನಗದು ದೋಚಿ ಪರಾರಿಯಾಗಿರುವ ಘಟನೆ ನಡೆದಿದ್ದು, ಸದ್ಯ ಸಿಸಿಟಿಯಲ್ಲಿ ಈ ದೃಶ್ಯ ಸೆರೆಯಾಗಿದೆ. ಸುಮಾರು 75 ಸಾವಿರ ಕಳ್ಳತನವಾಗಿರುವ ಬಗ್ಗೆ ದೂರು ದಾಖಲಾಗಿದೆ. ಶಟರ್ ಅನ್ನು ಯಾವುದೋ ವಸ್ತುವಿನಿಂದ ಒಡೆದು ಒಳಗೆ ನುಗ್ಗಿದ್ದ ಕಳ್ಳ ಕೌಂಟರಗಳಲ್ಲಿ ಇಟ್ಟಿದ್ದ ಒಟ್ಟು 75 ಸಾವಿರ ನಗದು ಹಣವನ್ನು ಕಳ್ಳತನ ಮಾಡಿಕೊಂಡು ಹೋಗಿದ್ದಾನೆ.

ಸದ್ಯ ಕಳ್ಳತನ ಮಾಡಿರುವ ದ್ರಶ್ಯ ಸಿಸಿಟಿಯಲ್ಲಿ ಸೆರೆಯಾಗಿದೆ. ಕೊನೆಯಲ್ಲಿ ಸಿಸಿಟಿವಿ ಇರುವುದನ್ನು ಗಮನಿಸಿದ ಕಳ್ಳ ಸಿಸಿಟಿಯನ್ನು ಹಾನಿಗೊಳಿಸಿದ್ದಾನೆ. ಸ್ಥಳಕ್ಕೆ ಬಂದ ನಗರ ಠಾಣೆಯ ಪೊಲೀಸರು ಪರಿಶೀಲನೆ ನಡೆಸಿದ್ದಾರೆ.

ವಿಸ್ಮಯ ನ್ಯೂಸ್, ಉದಯ್ ಎಸ್ ನಾಯ್ಕ, ಭಟ್ಕಳ

Back to top button