Important
Trending

ಗ್ಯಾಸ್ ಟ್ಯಾಂಕರ್ ಪಲ್ಟಿ: ಗ್ಯಾಸ್ ಸೋರಿಕೆ? ಆತಂಕ

ಹೊನ್ನಾವರ: ಪಟ್ಟಣದ ರಾಷ್ಟ್ರೀಯ ಹೆದ್ದಾರಿ ಪಕ್ಕದ ಆಳದ ಹೊಂಡದಲ್ಲಿ ಗ್ಯಾಸ್ ತುಂಬಿದ ಟ್ಯಾಂಕರ್ ಬಿದ್ದು, ಗ್ಯಾಸ್ ಸೋರಿಕೆ ಆಗುತ್ತಿದೆ ಎನ್ನಲಾಗಿದೆ. ಮೂರು ವಿದ್ಯುತ್ ಕಂಬಗಳು ಮರಿದು ಬಿದ್ದಿದ್ದು, ವಿದ್ಯುತ್ ಕಡಿತ ಉಂಟಾಗಿದೆ. ಇದರಿಂದಾಗಿ ಹೊನ್ನಾವರ ಪಟ್ಟಣ ಕತ್ತಲು ಆವರಿಸಿಕೊಂಡಂತಾಗಿದೆ. ಅನಿಲ ಸೋರಿಕೆಯಿಂದಾಗಿ ರಾಷ್ಟ್ರೀಯ ಹೆದ್ದಾರಿ ಸಂಚಾರ ಅಸ್ತವ್ಯಸ್ತ ಗೊಂಡಿದೆ.

ಇದನ್ನೂ ಓದಿ: ಉತ್ತರಕನ್ನಡದ ಕುಮಟಾ, ಶಿರಸಿ, ಹೊನ್ನಾವರದಲ್ಲಿ 17ಕ್ಕೂ ಹೆಚ್ಚು ಹುದ್ದೆಗಳಿಗೆ ನೇಮಕಾತಿ: ಇಎಸ್‌ಐ, ಪಿಎಫ್ ಸೇರಿ ಆಕರ್ಷಕ ವೇತನ: Apply Now

ಮಂಗಳೂರಿನಿಂದ ಹುಬ್ಬಳ್ಳಿಯ ಕಡೆಗೆ ಹೋಗುತ್ತಿದ್ದ ಗ್ಯಾಸ್ ಟ್ಯಾಂಕರ್ ಇದು ಎನ್ನಲಾಗಿದೆ. ಹೊನ್ನಾವರದಿಂದ ಕುಮಟಾಕ್ಕೆ‌ ಹೋಗುವ ಕಾಮತ್ ಎಕ್ಸಿಕ್ಯೂಟ್ಯೂವ್ ಹೋಟೆಲ್ ಪಕ್ಕದಲ್ಲಿರುವ ಆಳದ ಹೊಂಡಕ್ಕೆ ಬಿದ್ದಿದು ಕಾಮತ್ ಎಕ್ಸಕ್ಯೂಟಿವ್ ಹತ್ತಿರ ಕುಂಜಪ್ಪ ಆಚಾರಿ ಮನೆ ಮೇಲೆ ಬಿದ್ದರುವುದಾಗಿ ತೀಳಿದು ಬಂದಿದೆ.

ಈ ಘಟನೆಗೆ ಐ ಆರ್ ಬಿ ಕಂಪನಿಯ ಅವೈಜ್ಞಾನಿಕ ಕಾಮಗಾರಿ ಕಾರಣ ಎಂದು ಹೇಳಲಾಗುತ್ತಿದೆ. ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿಗಳು ಆಗಮಿಸಿ ಪರಿಶೀಲನೆ ನಡೆಸಿದ್ದು, ಯ್ಯಾವುದೆ ಆತಂಕ ಇಲ್ಲವೆಂದು ತಿಳಿಸಿದ್ದಾರೆ.

ವಿಸ್ಮಯ ನ್ಯೂಸ್ ಶ್ರೀಧರ್ ನಾಯ್ಕ ಹೊನ್ನಾವರ

Back to top button