Big Newsvismaya jagattu
Trending

ಇಂದು ಆಗಸದಲ್ಲಿ ವಿಸ್ಮಯಕಾರಿ ವಿದ್ಯಮಾನ: ನೀವೂ ನೋಡಬಹುದು

  • ಈ ಉಲ್ಕಾಪಾತವನ್ನು ಬರಿಗಣ್ಣಿನಿಂದ ವೀಕ್ಷಿಸಬಹುದು
  • ಬೈನಾಕ್ಯುಲರ್‌ಗಳು ಅಥವಾ ದೂರದರ್ಶಕಗಳು ಅಗತ್ಯವಿಲ್ಲ

ಇಂದು ರಾತ್ರಿ ಆಕಾಶದಲ್ಲಿ ಅದ್ಭುತವೊಂದು ಜರುಗಲಿದೆ. ಹೌದು, ಇಂದು ಜೆಮಿನಿಡ್ ಉಲ್ಕಾಪಾತ ಆಗಸದಲ್ಲಿ ಕಾಣಲಿದೆ. ರಾತ್ರಿ 9ಕ್ಕೆ ಪ್ರಾರಂಭವಾಗುವ ಈ ಉಲ್ಕಾಪಾತವನ್ನು ಮುಂಜನಾನೆ 2 ಗಂಟೆಗೆ ವರೆಗೂ ವೀಕ್ಷಿಸಬಹುದು. ಜೆಮಿನಿಡ್ ಉಲ್ಕಾಪಾತದ ಅತ್ಯುತ್ತಮ ವಿಷಯವೆಂದರೆ ಯಾರಾದರೂ ಇದನ್ನು ವೀಕ್ಷಿಸಬಹುದು. ಮತ್ತು ಅದನ್ನು ವೀಕ್ಷಿಸಲು ನಿಮಗೆ ಬೈನಾಕ್ಯುಲರ್‌ಗಳು ಅಥವಾ ದೂರದರ್ಶಕಗಳು ಅಗತ್ಯವಿಲ್ಲ. ಹೀಗಾಗಿ ಈ ಕುತೂಹಲಕಾರಿ ಘಟನೆಯನ್ನು ಯಾವ ಭಯವೂ ಇಲ್ಲದೆ ನೀವು ಕಣ್ತುಂಬಿಕೊಳ್ಳಬಹುದು.


ಭೂಮಿಯು ಸೂರ್ಯನ ಸುತ್ತ ತನ್ನ ಕಕ್ಷೆಯಲ್ಲಿ ಸುತ್ತುವಾಗ, ಈ ಕಕ್ಷೆಯ ಕೆಲವೊಂದು ಭಾಗಗಳಲ್ಲಿ ಯಾವುದಾದರೂ ಧೂಮಕೇತು ಹಾದುಹೋಗಿದ್ದಿದ್ದರೆ ,ಉಲ್ಕಾವೃಷ್ಟಿಯು ಉಂಟಾಗಬಹುದು. ಹಿಮದ ಉಂಡೆಯಾಗಿರುವ ಧೂಮಕೇತು ಸೂರ್ಯನನ್ನು ಸಮೀಪಿಸುತ್ತಿದ್ದಂತೆ ಆವಿಯಾಗುತ್ತ ಬರುತ್ತದೆ. ಈ ಧೂಮಕೇತು ಸೂರ್ಯನ ಸುತ್ತ ಹಾದು ಹೋಗುತ್ತಿದ್ದಂತೆ ಅದರ ಪಥದಲ್ಲಿ ಹಲವಾರು ಅವಶೇಷಗಳು ಉಳಿದುಕೊಳ್ಳುತ್ತವೆ. ಭೂಮಿಯು ತನ್ನ ಕಕ್ಷೆಯಲ್ಲಿ ಸುತ್ತುತಿರುವಾಗ ಈ ಅವಶೇಷಗಳ ಪ್ರದೇಶವನ್ನ ತಲುಪುತ್ತಿದ್ದಂತೆ ಅವುಗಳು ಧೂಮಕೇತುಗಳಾಗಿ ಭೂಮಿಯ ವಾತಾವರಣದಲ್ಲಿ ಸೃಷ್ಟಿಯಾಗುತ್ತವೆ. ಭೂಮಿಯು ಈ ಪ್ರದೇಶವನ್ನು ವರ್ಷಕ್ಕೆ ಒಂದು ಬಾರಿ ಮಾತ್ರ ಹಾದು ಹೋಗುವುದರಿಂದ ಪ್ರತೀವರ್ಷ ನಿರ್ದಿಷ್ಟ ಅವಧಿಯಲ್ಲಿ ಉಲ್ಕಾವೃಷ್ಟಿಯಾಗುತ್ತದೆ. ಉದಾಹರಣೆಗೆ ಪ್ರತೀ ವರ್ಷ ನವೆಂಬರ್ ತಿಂಗಳಿನಲ್ಲಿ ಭೂಮಿಯು “ಟೆಂಪಲ್-ಟಟ್ಟಲ್ ಧೂಮಕೇತುವಿನ ಪಥವನ್ನು ಹಾದು ಹೋಗುವಾಗ ಸಿಂಹರಾಶಿಯಿoದ ಲಿಯೊನಿಡ್ ಉಲ್ಕಾವೃಷ್ಟಿಯು ಗೋಚರಿಸುತ್ತದೆ.


ಆದರೆ ಮಿಥುನ ರಾಶಿಯಿಂದ ಆರಂಭವಾಗುವ ಜೆಮಿನಿಡ್ ಉಲ್ಕಾವೃಷ್ಟಿಯು “3200 ಫೆಥನ್” ಎಂಬ ಒಂದು ಕ್ಷುದ್ರಗ್ರಹದಿಂದ ಉಧ್ಭವಿಸುತ್ತದೆ, ಧೂಮಕೇತುವಿನ ಕಾರಣದಿಂದಲ್ಲ. ಈ ಕ್ಷುದ್ರಗ್ರಹದ ಅವಶೇಷಗಳು ತುಂಬಾ ಹೆಚ್ಚಾಗಿರುವುದರಿಂದ ಜೆಮಿನಿಡ್ ಉಲ್ಕಾವೃಷ್ಟಿಯೂ ಒಂದು ಕುತೂಹಲಕಾರಿ ವಿದ್ಯಮಾನವಾಗಿದೆ. ಇದನ್ನು ವೀಕ್ಷಿಸುವವರಿಗೆ ಸುಮಾರು ಗಂಟೆಗೆ 120 ರಷ್ಟು ಉಲ್ಕೆಗಳು ಗೋಚರಿಸುತ್ತದೆ. ಪ್ರತಿ 30 ಸೆಕೆಂಡುಗಳಿಗೊಮ್ಮೆ ಕಾಣುವ ಈ ಉಲ್ಕಾಪಾತದ ವಿಸ್ಮಯವನ್ನು ಯಾರು ಬೇಕಾದರು ಬರಿಗಣ್ಣಿನಿಂದ ವೀಕ್ಷಿಸಬಹುದು.

ಈ ಉಲ್ಕಾಪಾತ ಸಂಭವಿಸುವುದು ಹೇಗೆ?

Pathan Asteroid ಧೂಮಕೇತು ಸೂರ್ಯನ ಸುತ್ತ ಬಂದು ಹೋಗುವಾಗ ಕೆಲ ಕಲ್ಲು ಧೂಳಿನ ಕಣಗಳನ್ನು ಬಿಟ್ಟು ಹೋಗಿರುತ್ತದೆ. ಆ ದಾರಿಯಲ್ಲಿ ಭೂಮಿ ಕ್ರಮಿಸುವಾಗ ,ಆ ಕಣಗಳೆಲ್ಲ, ಗುರುತ್ವಾಕರ್ಷಣೆ ಯಿಂದ ಭೂಮಿಗೆ ಬೀಳುತ್ತದೆ. ಬೀಳುವಾಗಲೇ ವಾತಾವರಣ ದಲ್ಲಿ ಘರ್ಷಣೆ ಯಿಂದ ಸುಟ್ಟು ಹೋಗುತ್ತವೆ. ಈ ಘಟನೆಯೇ ಉಲ್ಕಾಪಾತವಾಗಿ ಗೋಚರಿಸುತ್ತದೆ

ಬ್ಯೂರೋ ರಿಪೋರ್ಟ್, ವಿಸ್ಮಯ ನ್ಯೂಸ್

Back to top button