Follow Us On

WhatsApp Group
Important
Trending

ವಿದ್ಯಾರ್ಥಿನಿಯರ ಅಶ್ಲೀಲ, ಅಸಭ್ಯ ಸಂಭಾಷಣೆ: ಆ ಕಂಡೆಕ್ಟರ್ ಯಾರು? ಟ್ರೋಲ್ ಪೇಜ್ ನಲ್ಲಿ ಟ್ರೆಂಡಿಂಗ್

ಪೋಷಕರು ಕಷ್ಟ ಪಟ್ಟು, ಮಕ್ಕಳು ಓದಲೆಂದು ಶಾಲಾ-ಕಾಲೇಜಿಗೆ ಕಳುಹಿಸುತ್ತಾರೆ. ಆದರೆ, ಇತ್ತಿಚಿನ ದಿನಗಳಲ್ಲಿ ವಿದ್ಯಾರ್ಥಿಗಳು ದಾರಿತಪ್ಪುತ್ತಿದ್ದಾರೆ. ವಿದ್ಯಾರ್ಥಿನಿಯರು ಇದಕ್ಕೆ ಹೊರತಾಗಿಲ್ಲ. ಈ ಆಡಿಯೋದಲ್ಲಿ ವಿದ್ಯಾರ್ಥಿನಿಯರು ಮಾತನಾಡಿದ ಅಶ್ಲೀಲ ಪದಗಳನ್ನು ಕೇಳಿದರೆ, ಇವರು ವಿದ್ಯಾರ್ಥಿಗಳೇ ಅಥವಾ ಮದುವೆಯಾಗಿ ಸಂಸಾರ ಜೀವನ ಮಾಡಿದವರೋ ಎನ್ನುವ ಪ್ರಶ್ನೆ ಕಾಡದೇ ಇರದು.

ಭಟ್ಕಳ: ರಾಜ್ಯದಲ್ಲಿ ಸಿಡಿ ಪ್ರಕರಣ ಸದ್ಯ ಒಂದು ಹಂತಕ್ಕೆ ತಲುಪಿದರೆ, ಈಗ ಭಟ್ಕಳದಲ್ಲಿ ಕಾಲೇಜು ಯುವತಿ ಆಡಿಯೋ ಹವಾ ಜೋರಾಗಿದೆ. ಭಟ್ಕಳ ಜನತೆಗೆ ಸದ್ಯ ಆಡಿಯೋದಲ್ಲಿರುವ ಸಾಹುಕಾರ್ತಿ ಯಾರೆಂದು ಕುತೂಹಲ ಮೂಡಿಸಿದ್ದು, ಈಗ ಎಲ್ಲೆಡೆ ಇದೇ ವಿಷಯದ ಕುರಿತು ಚರ್ಚೆ ಆಗ್ತಿದೆ. ಟ್ರೋಲ್ ಪೇಜ್ ನಲ್ಲಿ ಟ್ರೆಂಡಿಂಗ್ ನಲ್ಲಿದೆ ಈ ವಿಷಯ.

ವಿದ್ಯಾರ್ಥಿನಿಯರಿಬ್ಬರು ಫೋನಿನಲ್ಲಿ ಸಂಭಾಷಣೆ ನಡೆಸುತ್ತಾ, ಕಾಲೇಜಿಗೆ ತೆರಳುವಾಗ ಬಸ್ ನಲ್ಲಿ ನಡೆದ ಘಟನೆ ಕುರಿತು ಮಾತನಾಡಿಕೊಳ್ಳುತ್ತಾರೆ. ಈ ವೇಳೆ ಆ ಕಂಡೆಕ್ಟರ್ ಹೇಗಿದ್ದ. ಆತ ಇಂದು ಏನಿಲ್ಲ ಮಾಡಿದ ? ನಾಳೆ ಏನೇನು ಮಾಡಬಹುದು ಎಂಬುದನ್ನು ಗೆಳತಿಯೊಬ್ಬಳು, ಮತ್ತೊಬ್ಬ ಗೆಳತಿಗೆ ಹೇಳುತ್ತಾಳೆ. ಬಸ್ ನಲ್ಲಿ ರಶ್ ಇರುವ ಸಮಯವನ್ನೇ ಉಪಯೋಗಿಸಿಕೊಂಡ ಕಂಡೆಕ್ಟರ್, ಮುಟ್ಟಬಾರದ ಜಾಗದಲ್ಲಿ ಯುವತಿಯರಿಗೆ ಮುಟ್ಟಿ ಮುಜುಗರ ಉಂಟುಮಾಡುತ್ತಿದ್ದ ಎಂಬುದು ಇವರ ಸಂಭಾಷಣೆಯ ಸಾರಾಂಶ.

ಹೌದು, ಕೆಲದಿನಗಳ ಹಿಂದಷ್ಟೇ ಕಾಲೇಜು ವಿದ್ಯಾರ್ಥಿನಿಯೊಬ್ಬಳು ತನ್ನ ಗೆಳತಿಯೊಂದಿಗೆ ಮಾತನಾಡಿದ ವಾಟ್ಸಾಪ್  ಆಡಿಯೋ ಇದೀಗ ವೈರಲ್ ಆಗಿದೆ. ವಿಧ್ಯಾರ್ಥಿನಿಯೊಬ್ಬಳು ಬಸ್ ನಲ್ಲಿ ವಿದ್ಯಾರ್ಥಿನಿಯರೊಂದಿಗೆ ಅಸಭ್ಯವಾಗಿ ವರ್ತಿಸುವ ವಿದ್ಯಾರ್ಥಿ ಹಾಗೂ ಕಂಡಕ್ಟರ್ ಬಗ್ಗೆ ಅಶ್ಲೀಲವಾಗಿ ಮಾತನಾಡನಾಡಿರುವ ಆಡಿಯೋ ಇದಾಗಿದೆ.

ಇಲ್ಲಿ ಕಂಡೆಕ್ಟರ್ ಮಾಡಿರುವುದು ತಪ್ಪು ಖಂಡಿತ. ಆದರೆ, ವಿದ್ಯಾರ್ಥಿನಿಯರು ಮಾತನಾಡಿರುವ ರೀತಿ ನೋಡಿದರೆ ಖಂಡಿತ, ನಾಗರಿಕ ಸಮಾಜ ತಲೆತಗ್ಗಿಸುವಂತಿದೆ. ಈ ಆಡಿಯೋದಲ್ಲಿ ಭಟ್ಕಳ ಮುರ್ಡೇಶ್ವರದ ವಿಷಯ ಪ್ರಸ್ತಾಪವಾಗಿದೆ. ಈ ರೀತಿ ಮಾತನಾಡಿದ ವಿದ್ಯಾರ್ಥಿಗಳು ಪ್ರತಿದಿನ ಭಟ್ಕಳಕ್ಕೆ ಕಾಲೇಜಿಗೆ ತೆರಳುವವರು ಎಂಬುದು ಅವರ ಮಾತಿನಿಂದ ಸ್ಪಷ್ಟವಾಗಿದೆ.

ಟ್ರೋಲ್ ಪೇಜ್ ಗಳಲ್ಲಿ ಹಾಗೂ ಭಟ್ಕಳ ಯುವಕರ ವಾಟ್ಸಾಪ್ ಸ್ಟೇಟಸ್ ಗಲ್ಲಿ ಕಂಡೆಕ್ಟರ್ ಯಾರೆಂಬ ಟ್ರೆಂಡಿಂಗ್ ಹವಾ ಜೋರಾಗಿದ್ದು ಯುವತಿ ಆಡಿಯೋದಲ್ಲಿ ಹೇಳಿರೋ ಪ್ರಕಾರ ಬಸ್ ಭಟ್ಕಳ ಘಟಕಕ್ಕೆ ಸೇರಿದ್ದು ಎನ್ನಲಾಗಿದೆ.ಈ ರೀತಿ ದುರ್ವರ್ತನೆ ತೋರುವ ಕಂಡೆಕ್ಟರ್ ಅನ್ನು KSRTC ಘಟಕ ಯಾರೆಂಬುದು ಪತ್ತೆ ಹಚ್ಚಿ ಕ್ರಮ ಕೈಗೊಳ್ಳಬೇಕಿದೆ ಎಂಬುದು ಸಾರ್ವಜನಿಕರ ಒತ್ತಾಯವಾಗಿದೆ.

ವಿಶೇಷ ಸೂಚನೆ: ಮಾದ್ಯಮದ ಸಾಮಾಜಿಕ ಜವಾಬ್ದಾರಿಯನ್ನು ವಿದ್ಯಾರ್ಥಿನಿಯ ಭವಿಷ್ಯದ ಹಿತದೃಷ್ಟಿಯಿಂದ ಈ ಆಡಿಯೋವನ್ನು ಪ್ರಸಾರ ಮಾಡಲಾಗಿಲ್ಲ.

ವಿಸ್ಮಯ ನ್ಯೂಸ್ ,‌ಭಟ್ಕಳ

Back to top button