Big News
Trending

ಅಂಡಮಾನ್ ಬಳಿಕ ರಾಜ್ಯದಲ್ಲಿ ಎರಡನೇ ಪ್ರಯತ್ನ: ಕಾರವಾರದ ದ್ವೀಪದಲ್ಲಿ ಮ್ಯಾಂಗ್ರೋವ್ ಬೋರ್ಡ್ ವಾಕ್

ಅಂಡಮಾನ್ ಗಳಲ್ಲಿ ಕಾಣಸಿಗುವ ಈ ಮ್ಯಾಂಗ್ರೋವ್ ವಾಕ್ ಕರ್ನಾಟಕದಲ್ಲಿ ಹೊನ್ನಾವರದ ಬಳಿಕ ಇದೀಗ ಕಾರವಾರದ ಕಾಳಿ ದ್ವೀಪದಲ್ಲಿ ಹಚ್ಚ ಹಸಿರಾಗಿ ಬೆಳೆದಿರುವ ಕಾಂಡ್ಲಾ ಸಸ್ಯವನಗಳ ನಡುವೆ ನಿರ್ಮಿಸಲಾಗಿದೆ. ಇದೀಗ ಕಾಳಿಮಾತ ದ್ವೀಪದಲ್ಲಿ “ಮ್ಯಾಂಗ್ರೋವ್ ಬೊರ್ಡ್ ವಾಕ್” ಎಲ್ಲರ ಗಮನ ಸೆಳೆಯುತ್ತಿದೆ.

ಕಾರವಾರ: ಕರಾವಳಿಯಲ್ಲಿ ನದಿ ಹಾಗೂ ನಡುಗಡ್ಡೆಗಳಲ್ಲಿ ಬೆಳೆಯುವ ಅಪರೂಪದ ಸಸ್ಯ ಅಂದ್ರೆ ಅದು ಕಾಂಡ್ಲಾ ಗಿಡ. ನೀರಿನಿಂದ ಮಣ್ಣಿನ ಸವಕಳಿ ತಡೆದು ಪ್ರವಾಹಗಳನ್ನು ತಡೆಯಬಲ್ಲ ಇಂತಹ ಅಪರೂಪದ ಸಸ್ಯ ಪ್ರಬೇಧದವನ್ನ ಉಳಿಸಿ ಬೆಳೆಸುವ ಮತ್ತು ಅದರ ಬಗ್ಗೆ ಸಾರ್ವಜನಿಕರು ಹಾಗೂ ಪ್ರವಾಸಿಗರಲ್ಲಿ ಜಾಗೃತಿ ಮೂಡಿಸಲು ಅರಣ್ಯ ಇಲಾಖೆ ವಿಶಿಷ್ಟ ಪ್ರಯತ್ನವೊಂದನ್ನು ನಡೆಸಿದ್ದು ಈ ಕುರಿತ ಒಂದು ವರದಿ ಇಲ್ಲಿದೆ ನೋಡಿ.

ಉತ್ತರಕನ್ನಡ ಜಿಲ್ಲೆಯ ಕರಾವಳಿಯಲ್ಲಿ ಕಂಡುಬರೊ ಈ ಕಾಂಡ್ಲಾ ಪ್ರಬೇಧ ನದಿ ಹಾಗೂ ಸಮುದ್ರಗಳು ಸಂಗಮಿಸುವ ಪ್ರದೇಶಗಳಲ್ಲಿ ಮತ್ತು ನಡುಗಡ್ಡೆಗಳಲ್ಲಿ ಹೇರಳವಾಗಿ ಬೆಳೆಯುತ್ತದೆ. ಅದರಂತೆ ಕಾರವಾರದ ಕಾಳಿ ನದಿ ದಂಡೆಯುದ್ದಕ್ಕೂ ಸಾವಿರಾರು ಹೆಕ್ಟೇರ್ ಪ್ರದೇಶದಲ್ಲಿ ಸಮೃದ್ಧವಾಗಿ ಬೆಳೆದಿರುವ ಈ ಸಸ್ಯಗಳು ಇದೀಗ ಪ್ರವಾಸಿಗರ ಆಕರ್ಷಣೆ ಕೂಡ ಹೌದು. ಆದರೆ ಇದೀಗ ಇನ್ನಷ್ಟು ಪ್ರವಾಸಿಗರನ್ನು ಆಕರ್ಷಿಸುವ ನಿಟ್ಟಿನಲ್ಲಿ ಕಾರವಾರದ ಅರಣ್ಯ ಇಲಾಖೆ ಕಾಳಿಮಾತ ದ್ವೀಪದಲ್ಲಿ “ಮ್ಯಾಂಗ್ರೋವ್ ಬೊರ್ಡ್ ವಾಕ್” ಒಂದನ್ನು ನಿರ್ಮಾಣ ಮಾಡಿದ್ದು ಇದೀಗ ಎಲ್ಲರ ಗಮನ ಸೆಳೆಯುತ್ತಿದೆ.

ಅಂಡಮಾನ್ ಗಳಲ್ಲಿ ಕಾಣಸಿಗುವ ಈ ಮ್ಯಾಂಗ್ರೋವ್ ವಾಕ್ ಕರ್ನಾಟಕದಲ್ಲಿ ಹೊನ್ನಾವರದ ಬಳಿಕ ಇದೀಗ ಕಾರವಾರದ ಕಾಳಿ ದ್ವೀಪದಲ್ಲಿ ಹಚ್ಚ ಹಸಿರಾಗಿ ಬೆಳೆದಿರುವ ಕಾಂಡ್ಲಾ ಸಸ್ಯವನಗಳ ನಡುವೆ ನಿರ್ಮಿಸಲಾಗಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರದ ಸುಮಾರು 18 ಲಕ್ಷ ಅನುದಾನದಲ್ಲಿ ಮರದ ಹಲಿಗೆಗಳನ್ನು ಬಳಸಿ ಸಿದ್ದಪಡಿಸಿದ್ದು, ಸುಮಾರು 240 ಮೀಟರ್ ವಾಕಿಂಗ್ ಪಾತ್ ಇದೆ.

ಪ್ರವಾಸಿಗರು ವಿಹರಿಸಲು ಇದೊಂದು ಅದ್ಬುತ ತಾಣ. ಮಾತ್ರವಲ್ಲದೆ ಈ ಅಪರೂಪದ ಸಸ್ಯ ಪ್ರಬೇಧಗಳ ಬಗ್ಗೆ ವಿಜ್ಞಾನಿಗಳು, ವಿದ್ಯಾರ್ಥಿಗಳು ಕೂಡ ಇಲ್ಲಿ ಅಧ್ಯಯನ ನಡೆಸಲು ಅನುಕೂಲವಾಗುವಂತೆ ಗಿಡಗಳ ಮಾಹಿತಿ ಒದಗಿಸುವ ಕ್ಯೂ ಆರ್ ಕೋಡ್ ಸ್ಕ್ಯಾನಿಂಗ್ ವ್ಯವಸ್ಥೆ ಕಲ್ಪಿಸಲಾಗಿದೆ. ದ್ವೀಪಕ್ಕೆ ಬಂದು ಹೋಗುವುದಕ್ಕೂ ಪ್ರವಾಸಿಗರಿಗೆ ಬೋಟ್ ವ್ಯವಸ್ಥೆ ಮಾಡಿಕೊಡಲಾಗುತ್ತಿದೆ ಎನ್ನುತ್ತಾರೆ ಡಿಎಫ್ಓ ವಸಂತ್ ರೆಡ್ಡಿ.

ಇನ್ನು ಕಾಳಿಮಾತಾ ದ್ವೀಪ ಈಗಾಗಲೇ ಪ್ರವಾಸಿಗರನ್ನು ಆಕರ್ಷಿಸುವ ಪ್ರಮುಖ ತಾಣ. ಇಲ್ಲಿನ ಕಾಳಿ ಮಾತಾ ದೇವಾಲಯ, ಸುಂದರ ಪರಿಸರ, ದೋಣಿ ವಿಹಾರವನ್ನು ಪ್ರವಾಸಿಗರು ಫುಲ್ ಎಂಜಾಯ್ ಮಾಡುತ್ತಾರೆ. ಆದ್ರೆ ಇದೀಗ ಮ್ಯಾಂಗ್ರೋವ್ ಬೋರ್ಡ್ ವಾಕ್ ನಿರ್ಮಾಣ ಆಗಿರೋದು ಇನ್ನಷ್ಟು ಪ್ರವಾಸಿಗರು ಆಕರ್ಷಣೆಯಾಗುವುದರ ಜೊತೆಗೆ ಕಾಂಡ್ಲಾ ಗಿಡಗಳ ಬಗ್ಗೆ ಸಂಪೂರ್ಣ ಮಾಹಿತಿ ಜನಸಾಮಾನ್ಯರಿಗೆ ಸಿಗಲಿದೆ ಎನ್ನುವುದು ಅಧಿಕಾರಿಗಳ ಅಭಿಪ್ರಾಯವಾಗಿದೆ.

ಇನ್ನು ಕಾಳಿ ಮ್ಯಾಂಗ್ರೋವ್ ಬೋರ್ಡ್ ವಾಕ್ ಅನ್ನು ಶಾಸಕಿ ರೂಪಾಲಿ ನಾಯ್ಕ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅರಣ್ಯ ಇಲಾಖೆಯ ಶ್ರಮದಿಂದಾಗಿ ಕಾಳಿ ಮಾತಾ ದ್ವೀಪದ ಪ್ರವಾಸಿ ತಾಣಕ್ಕೆ ಇನ್ನಷ್ಟು ಕಳೆ ಬಂದಿದೆ. ಇದು ಪ್ರವಾಸಿಗರನ್ನು ಹೆಚ್ಚಿನ ಸಂಖ್ಯೆಯಲ್ಲಿ ಆಕರ್ಷಿಸುವ ನಿರೀಕ್ಷೆ ಇದೆ. ಈ ನಿಟ್ಟಿನಲ್ಲಿ ಪ್ರವಾಸಿಗರಿಗೆ ಬಂದು ಹೋಗಲು ಅನುಕೂಲವಾಗುವಂತೆ ಅರಣ್ಯ ಇಲಾಖೆ ಮತ್ತು ಪ್ರವಾಸೋದ್ಯಮ ಇಲಾಖೆಯಿಂದ ದೋಣಿಯ ವ್ಯವಸ್ಥೆ ಮಾಡಲಾಗುತ್ತದೆ ಎಂದು ಶಾಸಕಿ ರೂಪಾಲಿ ನಾಯ್ಕ ಹೇಳಿದ್ದಾರೆ.

ಒಟ್ಟಿನಲ್ಲಿ ಕಾಂಡ್ಲಾ ಗಿಡಗಳನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಮತ್ತು ಅದನ್ನು ಪ್ರವಾಸಿಗರಿಗೆ ಪರಿಚಯಿಸಲು ಅರಣ್ಯ ಇಲಾಖೆ ಮ್ಯಾಂಗ್ರೋವ್ ಬೋರ್ಡ್ ವಾಕ್ ಮೂಲಕ ಆಕರ್ಷಣೆಗೆ ವಿಶಿಷ್ಟ ಪ್ರಯತ್ನ ನಡೆಸಿದೆ.

ಶ್ರೀ ವರಾಹಸ್ವಾಮಿ ಜ್ಯೋತಿಷ್ಯ ಪೀಠಂ”ಪ್ರಧಾನ ತಾಂತ್ರಿಕ್ : ಶ್ರೀ ದೇವದತ್ತ ಪಣಿಕರ್ ( ಕೇರಳ ) ಮೊಬೈಲ್ : 9886460777INDIAN FAMOUS ASTROLOGER
ಫೋನಿನಲ್ಲಿ ಪ್ರಶ್ನೆ ,ಫೋನಿನಲ್ಲಿ ಉತ್ತರ , ಫೋನಿನಲ್ಲಿ ಪರಿಹಾರ, ನಿಮ್ಮ ಜೀವನದ ಯಾವುದೇ ಕಷ್ಟ ಸಂಕಷ್ಟಗಳಿದ್ದರೂ ಕೇವಲ 3 ದಿನದಲ್ಲಿ ಪರಿಹಾರ ಶತಸಿದ್ಧ ಸ್ತ್ರೀ ಪುರುಷ ಪ್ರೇಮ ವಿಚಾರ, ವಶೀಕರಣ,ಅತ್ತೆ ಸೊಸೆ ಜಗಳ,ಸಂತಾನ,ಆರೋಗ್ಯ ತೊಂದರೆ, ಸ್ತ್ರೀಯರ ಗುಪ್ತ ಸಮಸ್ಯೆ,ಗಂಡ-ಹೆಂಡತಿಯ ಕಲಹ, ನಿಮ್ಮ ಗಂಡ ಪರಸ್ತ್ರೀಯರ ವ್ಯಾಮೋಹ, ವಶೀಕರಣ ಮತ್ತು ನಿಮ್ಮ ಜೀವನದ ಯಾವುದೇ ಸಮಸ್ಯೆಗಳಿದ್ದರೂ ಕೇರಳದ ಪೂಜಾ ವಿಧಿವಿಧಾನದಿಂದ ಕೇವಲ 3 ದಿನದಲ್ಲಿ ಪರಿಹಾರ ಶತಸಿದ್ಧ ಮೊಬೈಲ್ : 9886460777

ವಿಸ್ಮಯ ನ್ಯೂಸ್, ಕಾರವಾರ

Back to top button