ಕೆಕ್ಕಾರಿನಲ್ಲಿ ಭಾನುವಾರ ಶ್ರೀರಾಮಚಂದ್ರ ಭಾರತೀ ಮಹಾಸ್ವಾಮಿಗಳ ಆರಾಧನಾ ಮಹೋತ್ಸವ: ಸರ್ಕಾರದ ಕೋವಿಡ್ ಮಾರ್ಗಸೂಚಿಯಂತೆ ಆಚರಣೆ : ಯಾವುದೇ ಸಭೆ, ಸಾರ್ವಜನಿಕ ಕಾರ್ಯಕ್ರಮ ಇಲ್ಲವೆಂದು ಮಾಹಿತಿ ನೀಡಿದ ಸಂಘಟಕರು

ಕೆಕ್ಕಾರು: ಮಾರ್ಚ್ 28ರ ಭಾನುವಾರ ರಂದು ಕೆಕ್ಕಾರಿನ ಶ್ರೀರಘೂತ್ತಮ ಮಠದಲ್ಲಿ ಬ್ರಹ್ಮೈಕ್ಯ ಪರಮಪೂಜ್ಯ ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಮಚಂದ್ರಭಾರತೀ ಮಹಾಸ್ವಾಮಿಗಳವರ ಆರಾಧನಾ ಮಹೋತ್ಸವದ ಧಾರ್ಮಿಕ ಕಾರ್ಯಕ್ರಮ ಹಾಗೂ ಧರ್ಮ ಸಭೆಯನ್ನು ಹಮ್ಮಿಕೊಳ್ಳಲಾಗಿತ್ತು. ಈ ಕುರಿತಾದ ಎಲ್ಲಾ ಪೂರ್ವಸಿದ್ಧತೆಗಳೂ ನಡೆದಿತ್ತಾದರೂ ಕೋವಿಡ್ 19 ನಿಯಂತ್ರಣದ ನಿಟ್ಟಿನಲ್ಲಿ ಸರಕಾರ ಮಾರ್ಗಸೂಚಿಗಳನ್ನು ಬದಲಾವಣೆ ಮಾಡಿದೆ. ಹೀಗಾಗಿ ಸರಕಾರದ ಎಲ್ಲಾ ಮಾರ್ಗಸೂಚಿಗಳನ್ನೂ ಈ ಹಿಂದಿನಿoದಲೂ ಪಾಲಿಸುತ್ತಾ ಬಂದಿರುವ ಶ್ರೀಮಠವು ಈ ಸಂದರ್ಭದಲ್ಲಿಯೂ ಸರಕಾರದ ಮಾರ್ಗಸೂಚಿಯನ್ನು ಕಟ್ಟುನಿಟ್ಟಾಗಿ ಪಾಲಿಸಲಿದೆ.

ಕೋವಿಡ್ 19 ನಿಯಂತ್ರಣಕ್ಕಾಗಿ ಸರಕಾರ ಕೈಗೊಂಡಿರುವ ಮಾರ್ಗಸೂಚಿಗಳನ್ನು ಗೌರವಪೂರ್ವಕವಾಗಿ ಪಾಲಿಸುವ ಮೂಲಕ ಆರಾಧನಾ ಮಹೋತ್ಸವದ ಧಾರ್ಮಿಕ ಕಾರ್ಯಗಳನ್ನು ಮಾತ್ರವೇ ನಡೆಸಲು ನಿರ್ಧರಿಸಿದ್ದು, ಆರಾಧನಾ ಮಹೋತ್ಸವದ ದಿನ ಯಾವುದೇ ಸಾರ್ವಜನಿಕ ಸಭೆ, ಸಮಾರಂಭ ಇರುವುದಿಲ್ಲ. ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗವಹಿಸುವವರೂ ಖಡ್ಡಾಯವಾಗಿ ಕೋವಿಡ್ ಸಂಬAಧಿಸಿದ ನಿಯಮ ಪಾಲಿಸಬೇಕೆಂದು ತಿಳಿಸಲಾಗಿದೆ.

ಕೊರೋನಾ ನಿಯಂತ್ರಣಕ್ಕಾಗಿ ಸರಕಾರದ ಜೊತೆಗೆ ನಾವೆಲ್ಲರೂ ಕೈಜೋಡಿಸಬೇಕಿದ್ದು, ಕಟ್ಟುನಿಟ್ಟಾಗಿ ಸರಕಾರದ ಮಾರ್ಗಸೂಚಿಗಳನ್ನು ಪಾಲಿಸಬೇಕಿದೆ. ಸರಕಾರದ ಯಾವುದೇ ನಿಯಮಗಳನ್ನು ಮೀರದಂತೆ ವರ್ತಿಸುವ ಮೂಲಕ ಜವಾಬ್ದಾರಿಯುತ ನಾಗರೀಕರಾಗಬೇಕಾಗಿದೆ. ಹೀಗಾಗಿ ಶ್ರೀ ಮಠದ ಸಮಸ್ತ ಶಿಷ್ಯ ಭಕ್ತರು ಕೊನೆಯ ಕ್ಷಣದ ಅನಿವಾರ್ಯ ಈ ಬದಲಾವಣೆಗೆ ಸಹಕರಿಸಬೇಕೆಂದು ಆರಾಧನಾ ಮಹೋತ್ಸವದ ಸಂಘಟಕರು ಪ್ರಕಟಣೆಯ ಮೂಲಕ ವಿನಂತಿಸಿದ್ದಾರೆ.

ಶ್ರೀ ವರಾಹಸ್ವಾಮಿ ಜ್ಯೋತಿಷ್ಯ ಪೀಠಂ”ಪ್ರಧಾನ ತಾಂತ್ರಿಕ್ : ಶ್ರೀ ದೇವದತ್ತ ಪಣಿಕರ್ ( ಕೇರಳ ) ಮೊಬೈಲ್ : 9886460777INDIAN FAMOUS ASTROLOGER
ಫೋನಿನಲ್ಲಿ ಪ್ರಶ್ನೆ ,ಫೋನಿನಲ್ಲಿ ಉತ್ತರ , ಫೋನಿನಲ್ಲಿ ಪರಿಹಾರ, ನಿಮ್ಮ ಜೀವನದ ಯಾವುದೇ ಕಷ್ಟ ಸಂಕಷ್ಟಗಳಿದ್ದರೂ ಕೇವಲ 3 ದಿನದಲ್ಲಿ ಪರಿಹಾರ ಶತಸಿದ್ಧ ಸ್ತ್ರೀ ಪುರುಷ ಪ್ರೇಮ ವಿಚಾರ, ವಶೀಕರಣ,ಅತ್ತೆ ಸೊಸೆ ಜಗಳ,ಸಂತಾನ,ಆರೋಗ್ಯ ತೊಂದರೆ, ಸ್ತ್ರೀಯರ ಗುಪ್ತ ಸಮಸ್ಯೆ,ಗಂಡ-ಹೆಂಡತಿಯ ಕಲಹ, ನಿಮ್ಮ ಗಂಡ ಪರಸ್ತ್ರೀಯರ ವ್ಯಾಮೋಹ, ವಶೀಕರಣ ಮತ್ತು ನಿಮ್ಮ ಜೀವನದ ಯಾವುದೇ ಸಮಸ್ಯೆಗಳಿದ್ದರೂ ಕೇರಳದ ಪೂಜಾ ವಿಧಿವಿಧಾನದಿಂದ ಕೇವಲ 3 ದಿನದಲ್ಲಿ ಪರಿಹಾರ ಶತಸಿದ್ಧ ಮೊಬೈಲ್ : 9886460777.

Exit mobile version