ಇವರು ನನ್ನ ಕ್ಷೇತ್ರದ ರತ್ನಗಳು: ಶಾಸಕಿ ರೂಪಾಲಿ ನಾಯ್ಕ

ಅಂಕೋಲಾ: ಪದ್ಮಶ್ರೀ ಪ್ರಶಸ್ತಿ ಪಡೆದು ತಮ್ಮ ಸ್ವಗ್ರಾಮಕ್ಕೆ ಆಗಮಿಸಿದ ವೃಕ್ಷಮಾತೆ ತುಳಸಿ ಗೌಡ ಅವರ ಮನೆಗೆ ಭೇಟಿ ನೀಡಿದ ಶಾಸಕಿ ರೂಪಾಲಿ ನಾಯ್ಕ ಅವರು ಅಭಿನಂದನೆ ಸಲ್ಲಿಸಿ, ಅವರನ್ನು ಸನ್ಮಾನಿಸಿದರು. ಬಳಿಕ ಮಾತನಾಡಿ, ಕಾರವಾರ-ಅಂಕೋಲಾ ವಿಧಾನ ಸಭಾ ಕ್ಷೇತ್ರದಲ್ಲಿ ಹಾಡುಹಕ್ಕಿ ಸುಕ್ರಿ ಗೌಡ ಹಾಗೂ ಸಸಿ ಬೆಳೆಸುವುದಕ್ಕೆ ಜೀವವನ್ನು ಮುಡಿಪಾಗಿಟ್ಟ ತುಳಸಿ ಗೌಡ ಎರಡು ಪದ್ಮಶ್ರೀ ಪ್ರಶಸ್ತಿ ಪಡೆದಿದ್ದಾರೆ. ಇದರಿಂದ ನನ್ನ ಕ್ಷೇತ್ರದ ಘನತೆ, ಗೌರವ ಹೆಚ್ಚಾಗಿದೆ ಎಂದರು. ಕ್ಷೇತ್ರಕ್ಕೆ, ನಾಡಿಗೆ ಹೆಮ್ಮೆ ತಂದ ಸಾಧಕರಿಗೆ ಯಾವುದೇ ರೀತಿಯ ಸಹಾಯ ಬೇಕಿದ್ದರೂ ನೇರವಾಗಿ ನನ್ನನ್ನು ಸಂರ‍್ಕಿಸಬಹುದು ಎಂದರು.

ವಿಸ್ಮಯ ನ್ಯೂಸ್, ಅಂಕೋಲಾ

Exit mobile version