Info
Trending

ಕಡತೋಕಾ ಅಂಗನವಾಡಿ ಕೇಂದ್ರದಲ್ಲಿ ಸಂಭ್ರಮದ ಪ್ರಾರಂಭೋತ್ಸವ: ಮಕ್ಕಳಿಗೆ ಸಿಹಿ ವಿತರಿಸಿದ ಶಿವಾನಂದ ಹೆಗಡೆ ಕಡತೋಕಾ

ಹೊನ್ನಾವರ: ಕಡತೋಕಾ ಅಂಗನವಾಡಿ ಕೇಂದ್ರದಲ್ಲಿ ಇಂದು ಸಂಭ್ರಮದಿಂದ ಪ್ರಾರಂಭೋತ್ಸವ ನಡೆಸಲಾಯಿತು. ಕಳೆದ ಸುಮಾರು ಎರಡು ವರ್ಷಗಳಿಂದ ಮಕ್ಕಳ ಪಾಲಿಗೆ ಮುಚ್ಚಲ್ಪಟ್ಟಿದ್ದ ಅಂಗನವಾಡಿ ಕೇಂದ್ರಗಳು ಇಂದಿನಿಂದ ಮಕ್ಕಳ ಹಾಜರಾತಿಯೊಂದಿಗೆ ಪೂರ್ಣ ಪ್ರಮಾಣದಲ್ಲಿ ಪ್ರಾರಂಭಿಸಲ್ಪಟ್ಟವು. ಕಡತೊಕಾದ ಅಂಗನವಾಡಿ ಕೇಂದ್ರದಲ್ಲಿ ಮಕ್ಕಳನ್ನು ಹೂಗುಚ್ಛ ನೀಡಿ ಆತ್ಮೀಯತೆಯಿಂದ ಸ್ವಾಗತಿಸಲಾಯಿತು.

ಜಿಲ್ಲಾ ಪಂಚಾಯತದ ಮಾಜಿ ಸದಸ್ಯ ಶಿವಾನಂದ ಹೆಗಡೆ ಕಡತೋಕಾ ಮಕ್ಕಳಿಗೆ ಸಿಹಿ ವಿತರಿಸಿದರು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಸದಸ್ಯೆ ನೇತ್ರಾವತಿ ಮುಕ್ರಿ, ಪ್ರಾಥಮಿಕ ಶಾಲಾ ಮುಖ್ಯಾಧ್ಯಾಪಕಿ ಮಹಾಲಕ್ಷ್ಮಿ ಹೆಗಡೆ, ಅಂಗನವಾಡಿ ಕಾರ್ಯಕರ್ತೆ ಕುಸುಮಾ ನಾಯ್ಕ್, ಸಹಾಯಕಿ ಶಾರದಾ ಸಿದ್ದನ್, ಆಶಾ ಕಾರ್ಯಕರ್ತೆ ಜಯಲಕ್ಷ್ಮಿ ಶೇಟ್, ಕುಮಾರಿ ದೀನಾ ಪಟಗಾರ್, ಹಿರಿಯ ನಾಗರಿಕರಾಗಿ ವಿಮಲಾ ಮೊಗೇರ್, ರವಿ ಸಿದ್ದನ್, ಗೌರಿ ಸಿದ್ದನ್, ಮಂಗಲಾ ಸಿದ್ದನ್, ಶ್ವೇತಾ ಪಟಗಾರ್, ಸುನೀತಾ ಶೇಟ್, ಗಣಪತಿ ಸಿದ್ದನ್ ಮುಂತಾದವರು ಭಾಗವಹಿಸಿದ್ದರು.

ವಿಸ್ಮಯ ನ್ಯೂಸ್ ಶ್ರೀಧರ್ ನಾಯ್ಕ ಹೊನ್ನಾವರ

Back to top button