Info
Trending

ನೇತ್ರದಾನ ನೋಂದಣಿ: ಲಾಯನ್ಸ್ ರೇವಣಕರ ಚೆರಿಟೆಬಲ್ ಕಣ್ಣಿನ ಆಸ್ಪತ್ರೆ’ ಗೆ ಭೇಟಿ ನೀಡಿ ನೇತ್ರದಾನದ ವಾಗ್ದಾನ ಪತ್ರಕ್ಕೆ ಸಹಿ

ಕುಮಟಾ : ತನ್ನ ಜೀವಿತಾವಧಿಯ ನಂತರವೂ ತನ್ನೆರಡು ಕಣ್ಣುಗಳು ಬೆಳಕು ಕಾಣದ ಅಂಧರಿಬ್ಬರ ಬಾಳು ಬೆಳಗುವಂತಾಗಲೆಂಬ ಘನ ಉದ್ದೇಶದಿಂದ ಎಂದೋ ಈ ಕುರಿತು ಸಂಕಲ್ಪಿಸಿದ್ದ ಹೊನ್ನಾವರ ತಾಲೂಕು ಹಳದಿಪುರ ಸಮೀಪದ ಗಾಳಗೇರಿಯ ತರುಣ ಪವನ ಶ್ರೀಧರ ನಾಯ್ಕ ರವರು ನವೆಂಬರ್ ೧ ರ ಕನ್ನಡ ರಾಜ್ಯೋತ್ಸವ ದಿನದಂದು ಕುಮಟಾದ ‘ಲಾಯನ್ಸ್ ರೇವಣಕರ ಚೆರಿಟೆಬಲ್ ಕಣ್ಣಿನ ಆಸ್ಪತ್ರೆ’ ಗೆ ಭೇಟಿ ನೀಡಿ ನೇತ್ರದಾನದ ವಾಗ್ದಾನ ಪತ್ರಕ್ಕೆ ಸಹಿ ಮಾಡಿ ತಮ್ಮ ಹೆಸರು ನೊಂದಾಯಿಸಿ ಆಸ್ಪತ್ರೆಯ ಆಡಳಿತಾಧಿಕಾರಿ ಜಯದೇವ ಬಳಗಂಡಿ ಅವರಿಂದ ಈ ಕುರಿತಾಗಿನ ಪ್ರಮಾಣ ಪತ್ರ ಪಡೆದು ಅನುಕರಣೀಯ ಕಾರ್ಯ ಕೈಕೊಂಡರು.

Back to top button