ಮಾಹಿತಿ
Trending

ತಾಲೂಕಾ ಆಸ್ಪತ್ರೆಯಲ್ಲಿ ಮಕ್ಕಳ ಲಸಿಕಾ ಕೇಂದ್ರ ನಿರ್ಮಿಸಿಕೊಟ್ಟ ಹೊನ್ನಾವರ ರೋಟರಿ ಕ್ಲಬ್

ಹೊನ್ನಾವರ: ಮಕ್ಕಳಿಗೆ ಕೋವಿಡ್ ಲಸಿಕೆಯನ್ನು ಮುಂದಿನ ಕೆಲವು ದಿನಗಳಲ್ಲಿ ಆರಂಭಿಸುವ ತೀರ್ಮಾನ ಸರ್ಕಾರ ಕೈಗೊಂಡಿದ್ದು, ಮುಂದಿನ ದಿನಗಳಲ್ಲಿ ಮಕ್ಕಳಿಗೆ ಉಪಯೋಗವಾಗುವ ದೃಷ್ಠಿಯಿಂದ ಹೊನ್ನಾವರ ತಾಲೂಕಾ ಆಸ್ಪತ್ರೆಗೆ ಸುಸಜ್ಜಿತ ಲಸಿಕಾ ಕೇಂದ್ರವನ್ನು ಹೊನ್ನಾವರ ರೋಟರಿ ಕ್ಲಬ್ ಸದಸ್ಯರು ತಮ್ಮ ಸ್ವಂತ ಹಣದಿಂದ ನಿರ್ಮಿಸಿ ಕೊಟ್ಟಿದ್ದು, ಇದರ ಉದ್ಘಾಟನಾ ಕಾರ್ಯಕ್ರಮ ನಡೆಯಿತು,

ನೂತನ ಲಸಿಕಾ ಕೇಂದ್ರವನ್ನು ಉದ್ಘಾಟನೆಯನ್ನು ರೋಟರಿಯನ್ ಡಾ ಕಿರಣ ಬಳ್ಕೂರ ಮತ್ತು ರೋಟರಿಯನ್ ಡಾ ಪ್ರತಿಭಾ ಬಳ್ಕೂರ ದಂಪತಿಗಳು ರಿಬ್ಬನ್ ಕತ್ತರಿಸುವುದರ ಮೂಲಕ ಚಾಲನೆ ನೀಡಿದರು ನಂತರ ರೋಟರಿಯನ್ ಡಾ ಕಿರಣ ಬಳ್ಕೂರ ಮಾತನಾಡಿ ನಮ್ಮ ರೋಟರಿ ಸಂಸ್ಥೆ ಅನೇಕ ಸಾಮಾಜಿಕ ಸೇವೆಯನ್ನು ಮಾಡುತ್ತಾ ಬಂದಿದೆ. ಕರೋನಾ ಸಮಯದಲ್ಲ ಸ್ವಲ್ಪ ಮಟ್ಟಿಗೆ ಮುಂದೂಡಿದ್ದು, ತಾಲೂಕಾ ಆಸ್ಪತ್ರೆಗೆ ಕರೋನಾ ಸಮಯದಲ್ಲಿ ಅನೇಕ ಸಾಮಗ್ರಿಗಳನ್ನು ನೀಡಲಾಗಿದೆ. ಇದೆಲ್ಲವು ರೋಟರಿ ಕ್ಲಬ್‌ನ ಸದಸ್ಯರು ತಮ್ಮ ಸ್ವಂತ ಹಣದಿಂದಲೆ ನೀಡುತ್ತಿದ್ದಾರೆ ಎಂದರು,

ಡಾ ಪ್ರತಿಭಾ ಬಳ್ಕೂರ ಮಾತನಾಡಿ ಮಕ್ಕಳಿಗೆ ಆದಷ್ಟು ಬೇಗ ವ್ಯಾಕ್ಸಿನ್ ನೀಡಬೇಕು ಎಂದು ಸರ್ಕಾರ ನಿರ್ಧರಿಸಿದೆ. ಈ ತಿಂಗಳ ಕೊನೆಗೆ ನೀಡುವ ಸಾದ್ಯತೆ ಇದ್ದು ಎಲ್ಲರು ಇದರ ಉಪಯೋಗ ಪಡೆದುಕೊಳ್ಳಿ ಎಂದು ಸಲಹೆ ನೀಡಿದರು,

ರೋಟರಿ ಕ್ಲಬ್ ಅದ್ಯಕ್ಷ ಸ್ಟಿಪನ್ ರೋಡ್ರಗಿಸ್ ಮಾತನಾಡಿ ಮುಂದೆ ಮಕ್ಕಳ ಲಸಿಕಾ ವಿತರಣೆ ನಡೆಯಲಿದೆ ಎಂದು ಸರ್ಕಾರ ಮುನ್ನಸೂಚನೆ ನೀಡಿದ್ದು, ನಮ್ಮ ತಾಲೂಕಾ ಆಸ್ಪತ್ರೆಯ ವೈದ್ಯಾದಿಕಾರಿಗಳು ನಮ್ಮ ರೋಟರಿ ಪರಿವಾರಕ್ಕೆ ಮನವಿ ಸಲ್ಲಿಸಿ ಈ ಲಸಿಕಾ ಕೇಂದ್ರವನ್ನು ನಿರ್ಮಿಸಿ ಕೋಡುವಂತೆ ಕೇಳಿಕೊಂಡಿದ್ದರು. ನಮ್ಮ ರೋಟರಿ ಪರಿವಾರದವರು ತನು-ಮನ-ಧನದಿಂದ ಮುಂದೆ ಬಂದು ಈ ಲಸಿಕಾ ಕೇಂದ್ರವನ್ನು ನಿರ್ಮಾಣಮಾಡಿದ್ದಾರೆ. ನಮ್ಮ ಎಲ್ಲಾ ರೋಟರಿ ಮಿತ್ರರಿಗೆ ಅಭಿನಂದನೆಗಳು ಎಂದರು,

ಈ ಸಂದರ್ಭದಲ್ಲಿ ತಾಲೂಕಾ ಆಸ್ಪತ್ರೆಯ ವೈದ್ಯಾದಿಕಾರಿ ಡಾ.ರಾಜೇಶ್ ಕಿಣಿ, ಡಾ. ರಮೇಶ ಗೌಡ, ಡಾ. ಕೃಷ್ಣಾ ಜಿ, ರೋಟೆರಿಯನ್ ಡಾ ಆಶಿಕ್ ಹೆಗಡೆ, ರೋಟರಿ ಕ್ಲಬ್‌ನ ಮಹೇಶ ಕಲ್ಯಾಣಪುರ್, ನಸರುಲ್ಲಾ ಸಿದ್ದಿಕ್, ದಿನೇಶ ಕಾಮತ್, ರೋಟರಿ ಕ್ಲಬ್‌ನ ಸದಸ್ಯರು, ಆಸ್ಪತ್ರೆಯ ಸಿಬ್ಬಂದಿಗಳು ಮುಂತಾದವರು ಇದ್ದರು,

ವಿಸ್ಮಯ ನ್ಯೂಸ್ ಶ್ರೀಧರ ನಾಯ್ಕ ಹೊನ್ನಾವರ,

Back to top button