ಮಾಹಿತಿ
Trending

ಫ್ಯಾಮಿಲಿ ಪ್ಲ್ಯಾನಿಂಗ್ ಅಸೋಸಿಯೇಶನ್ ಆಫ್ ಇಂಡಿಯಾದ ಆಸ್ಪತ್ರೆಯಲ್ಲಿ ದೇಣಿಗೆಯಾಗಿ ನೀಡಿದ ಕಂಪ್ಯೂಟರ್ ಉದ್ಘಾಟನೆ

ಫ್ಯಾಮಿಲಿ ಪ್ಲ್ಯಾನಿಂಗ್ ಅಸೋಸಿಯೇಶನ್ ಆಫ್ ಇಂಡಿಯಾದ ಆಸ್ಪತ್ರೆಯಲ್ಲಿ ಶ್ರೀ ದತ್ತಾತ್ರೇಯ ಗಣಪತಿ ಹೆಗಡೆ, ಯಲವಳ್ಳಿ. ಇವರು ದೇಣಿಗೆಯಾಗಿ ನೀಡಿದ ಕಂಪ್ಯೂಟರನ್ನು ಉದ್ಘಾಟಿಸಲಾಯಿತು. ಉದ್ಘಾಟನೆಯನ್ನು ದೇಣಿಗೆ ನೀಡಿದವರಾದ ಶ್ರೀ ದತ್ತಾತ್ರೇಯ ಗಣಪತಿ ಹೆಗಡೆ ಯಲವಳ್ಳಿ ಇವರಿಂದ ನೆರವೇರಿಸಲಾಯಿತು. ಉದ್ಘಾಟಿಸಿದ ನಂತರ ಮಾತನಾಡುತ್ತಾ ನಾವು ಕೊಟ್ಟ ಈ ಕಿರು ದೆಣಿಗೆಯನ್ನು ಸ್ವೀಕರಿಸಿದ ಶಾಖೆಯ ಅಧ್ಯಕ್ಷರಾದ ಡಾ|| ಅಶೋಕ್ ಭಟ್ ರವರಿಗೆ ಧನ್ಯವಾದವನ್ನು ಸಮರ್ಪಿಸುತ್ತಾ ಇನ್ನು ಮುಂದೆಯೂ ಕೂಡ ಶಾಖೆಗೆ ದೇಣಿಗೆ ನೀಡುವುದಾಗಿ ಭರವಸೆ ಇಟ್ಟರು.

ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಶಾಖೆಯ ಅಧ್ಯಕ್ಷರು ಹಾಗೂ ಖ್ಯಾತ ವೈದ್ಯರೂ ಆದ ಡಾ|| ಆಶೋಕ್ ಭಟ್ ಹಳಕಾರರವರು ಮಾತನಾಡಿ ಸಂಸ್ಥೆಗೆ ಕಂಪ್ಯೂಟರನ್ನು ದೇಣಿಗೆಯಾಗಿ ನೀಡಿದ ಶ್ರೀ ದತ್ತಾತ್ರೇಯ ಗಣಪತಿ ಹೆಗಡೆ ಯಲವಳ್ಲಿ ಮತ್ತು ಕುಟುಂಬದವರನ್ನು ಅಭಿನಂದಿಸಿದರು. ಅವರ ಔದಾರ್ಯವನ್ನು ಕೊಂಡಾಡುತ್ತಾ ತಾನು ಇದೇರೀತಿ ಅನೇಕ ದಾನಿಗಳನ್ನು ಭೇಟಿಯಾಗಿ ಈ ಸಂಸ್ಥೆಯಲ್ಲಿ ಮಾಡಿದ ಅಭಿವೃಧ್ಧಿಯನ್ನು ವಿವರಿಸಿದರು.

ಫ್ಯಾಮಿಲಿ ಪ್ಲ್ಯಾನಿಂಗ್ ಅಸೋಸಿಯೇಶನ್ ಆಫ್ ಇಂಡಿಯಾದ ಕುಮಟಾ. ಶಾಖೆಯ ವ್ಯವಸ್ಥಾಪಕರಾದ ಶ್ರೀಮತಿ ಸಂತಾನ್ ಲೂಯಿಸ್ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು. ವೈದ್ಯಾಧಿಕಾರಿಯಾದಂತಹ ಡಾ|| ಶ್ರೇಯಾ ಶೇಟ್ ಹಾಗೂ ಸಿಬ್ಬಂದಿವರ್ಗದವರು ಉಪಸ್ಥಿತರಿದ್ದರು.

Back to top button