ಜಯಾ ಯಾಜಿ ಶಿರಾಲಿ ಗೌರವಾರ್ಥ ರಾಜ್ಯಮಟ್ಟದ ಕಥಾ ಸ್ಪರ್ಧೆಯ ಫಲಿತಾಂಶ ಪ್ರಕಟಿಸಿದ ಜಿಲ್ಲಾ ಕ.ಸಾ.ಪ. : ಮೊದಲ ಮೂರು ಬಹುಮಾನ ಶೋಭಾ ಶಾಲಿನಿ, ಸುಧಾ ಮುಡಿಗೆ

ನಾಡಿನ ಹಿರಿಯ ಕಥೆಗಾರ್ತಿ ದಿ.ಜಯಾ ಯಾಜಿ ಶಿರಾಲಿ ಅವರ ಗೌರವಾರ್ಥ ಉತ್ತರ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಹಮ್ಮಿಕೊಂಡ ಕನ್ನಡದ ಕಥೆಗಾರ್ತಿಯರಿಗಾಗಿಯೇ ಹಮ್ಮಿಕೊಂಡ ರಾಜ್ಯ ಮಟ್ಟದ ಕಥಾಸ್ಪರ್ಧೆಯಲ್ಲಿ ಮೊದಲ ಬಹುಮಾನ-ರೂ. 6000 ಸೌದಿ ಅರೇಬಿಯಾದ ಶೋಭಾ ಹರಿಪ್ರಸಾದ ಉಡುಪಿ (ಕಥೆ : ನಾನು ಗುಲಾಬಿ), ಎರಡನೇ ಬಹುಮಾನ-ರೂ. 3000 ಉತ್ತರ ಕನ್ನಡದ ಸಿದ್ದಾಪುರದ ಶಾಲಿನಿ ರಮೇಶ (ಕಥೆ : ಶಿವರಂಜಿನಿ), ಮೂರನೇ ಬಹುಮಾನ-ರೂ. 2000 ಹೊನ್ನಾವರದ ಸುಧಾ ಭಂಡಾರಿ ಹಡಿನಬಾಳ (ಕಥೆ : ಮನ್ವಂತರ), ಎರಡು ಮಚ್ಚುಗೆ ಬಹುಮಾನಗಳನ್ನು -ತಲಾ ರೂ. 1000 ಶಿವಮೊಗ್ಗದ ಗೌರಿ ಚಂದ್ರಕೇಸರಿ ಹಾಗೂ ಬೆಳಗಾವಿ ಶಹಾಪೂರದ ಸುನಂದಾ ಹಾಲಭಾವಿ ಅವರು ಪಡೆದುಕೊಂಡಿದ್ದಾರೆ.

ಉತ್ತಮ ಕಥೆ ಬರೆದ ಓರ್ವ ಕಾಲೇಜು ವಿದ್ಯಾರ್ಥಿನಿಗೆ ಘೋಷಿಸಿದ ಬಹುಮಾನ-ರೂ. 2000 ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ ಪಿ.ಹೆಚ್.ಡಿ ಆಂತರಿಕ ವಿದ್ಯಾರ್ಥಿನಿ ಮಂಜುಳ ಗೋನಾಳ( ಕಥೆ : ಜ್ಯಾಮಿಟ್ರಿ ಬಾಕ್ಸ್ ) ಪಡೆದುಕೊಂಡಿದ್ದಾರೆ. ವಿಜೇತರಿಗೆಲ್ಲರಿಗೂ ಬಹುಮಾನ ಮೊತ್ತದೊಂದಿಗೆ ಅಭಿನಂದನ ಪತ್ರ ನೀಡಲಾಗುವುದು ಎಂದು ಉತ್ತರ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಅರವಿಂದ ಕರ್ಕಿಕೋಡಿ ತಿಳಿಸಿದ್ದಾರೆ.

ಕಥಾಸ್ಪರ್ಧೆಯ ತೀರ್ಪುಗಾರರಾಗಿ ನಾಡಿನ ಹಿರಿಯ ಕಥೆಗಾರರಾದ ಡಾ. ನಾ. ದಾಮೋದರ ಶೆಟ್ಟಿ ಮತ್ತು ಲಕ್ಷ್ಮಣ ಕೊಡಸೆ ಸಹಕರಿಸಿದ್ದು, ಈರ್ವರಿಗೂ ಜಿಲ್ಲಾ ಕ.ಸಾ.ಪ. ಕೃತಜ್ಞತೆ ಸಲ್ಲಿಸುತ್ತದೆ ಎಂದು ಅರವಿಂದ ಕರ್ಕಿಕೋಡಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಶ್ರೀ ವರಾಹಸ್ವಾಮಿ ಜ್ಯೋತಿಷ್ಯ ಪೀಠಂ”ಪ್ರಧಾನ ತಾಂತ್ರಿಕ್ : ಶ್ರೀ ದೇವದತ್ತ ಪಣಿಕರ್ ( ಕೇರಳ ) ಮೊಬೈಲ್ : 9964108888 FAMOUS ASTROLOGER
ಫೋನಿನಲ್ಲಿ ಪ್ರಶ್ನೆ ,ಫೋನಿನಲ್ಲಿ ಉತ್ತರ , ಫೋನಿನಲ್ಲಿ ಪರಿಹಾರ, ನಿಮ್ಮ ಜೀವನದ ಯಾವುದೇ ಕಷ್ಟ ಸಂಕಷ್ಟಗಳಿದ್ದರೂ ಕೇವಲ 3 ದಿನದಲ್ಲಿ ಪರಿಹಾರ ಶತಸಿದ್ಧ ಸ್ತ್ರೀ ಪುರುಷ ಪ್ರೇಮ ವಿಚಾರ, ವಶೀಕರಣ,ಅತ್ತೆ ಸೊಸೆ ಜಗಳ,ಸಂತಾನ,ಆರೋಗ್ಯ ತೊಂದರೆ, ಸ್ತ್ರೀಯರ ಗುಪ್ತ ಸಮಸ್ಯೆ,ಗಂಡ-ಹೆಂಡತಿಯ ಕಲಹ, ನಿಮ್ಮ ಗಂಡ ಪರಸ್ತ್ರೀಯರ ವ್ಯಾಮೋಹ, ವಶೀಕರಣ ಮತ್ತು ನಿಮ್ಮ ಜೀವನದ ಯಾವುದೇ ಸಮಸ್ಯೆಗಳಿದ್ದರೂ ಕೇರಳದ ಪೂಜಾ ವಿಧಿವಿಧಾನದಿಂದ ಕೇವಲ 3 ದಿನದಲ್ಲಿ ಪರಿಹಾರ ಶತಸಿದ್ಧ ಮೊಬೈಲ್ : 9964108888.

Exit mobile version