Follow Us On

WhatsApp Group
Big News
Trending

ಪೋಲೀಸ್ ಠಾಣೆಯ ಸುಂದರತೆಗೆ ಮೆರಗು ತಂದ ಮಹನೀಯರು | ತನ್ನ ಭಾವಚಿತ್ರದೆದುರೆ ನಿಂತ ಪದ್ಮಶ್ರೀ ಸುಕ್ರಜ್ಜಿ

ಅಂಕೋಲಾ: ಜಾನಪದ ಕೋಗಿಲೆಯಾದ ಬಡಗೇರಿಯ ಸುಕ್ರಜ್ಜಿಗೆ ಪದ್ಮಶ್ರೀ ಪುರಸ್ಕಾರ ಓಲಿದು ಬಂದು ವಿಶ್ವದಾದ್ಯಂತ ಪ್ರಸಿದ್ಧಿ ಪಡೆದಿದ್ದಾರೆ.ಇಳಿ ವಯಸ್ಸಿನಲ್ಲೂ ಅತ್ಯುತ್ಸಾಹದಿಂದ ಎಲ್ಲರಿಗೂ ಪ್ರೇರಣೆಯಾಗಿರುವ ಸುಕ್ರಜ್ಜಿಯ ಭಾವಚಿತ್ರವನ್ನು ಈ ಹಿಂದೆಯೇ ಅಂಕೋಲಾ ಪೋಲೀಸ್ ಠಾಣೆಯ ಹೊರ ಅವರಣದ ಕಂಪೌಂಡ್ ಗೋಡೆ ಮೇಲೆ ಚಿತ್ರಿಸಿ ಗೌರವಿಸಲಾಗಿತ್ತು.

ಅನ್ಯ ಕಾರಣ ನಿಮಿತ್ತ ಠಾಣೆ ಬಳಿ ಬಂದಿದ್ದ ಸುಕ್ರಜ್ಜಿಯನ್ನು ಗಮನಿಸಿದ ಪಿ. ಎಸೈ ಈ ಸಿ ಸಂಪತ್, ಅವರನ್ನು ಕರೆದು ಪ್ರೀತಿ ಹಾಗೂ ಗೌರವದಿಂದ ಮಾತನಾಡಿಸಿ ತಮ್ಮ ಠಾಣೆಯ ಕಂಪೌಂಡ್ ಗೋಡೆ ಬಳಿ ಬರುವಂತೆ ವಿನಂತಿಸಿ, ಅಲ್ಲಿ ಬಿಡಿಸಲಾದ ಸುಕ್ರ ಜ್ಜಿಯ ಭಾವಚಿತ್ರದೆದುರು ಸ್ವತಃ ಅವಳನ್ನೇ ನಿಲ್ಲಿಸಿ, ಕ್ಲಿಕ್ಲಿಸಲು ಹೇಳಿದ ಪೋಟೋ ನೋಡಿದಾಗ, ನಿಜಕ್ಕೂ ಸುಕ್ರಜ್ಜಿ ನಮ್ಮ ನಡುವೆ ಇರುವ ದಂತಕಥೆಯಂತೆ ಭಾಸವಾಗದಿರದು?.

ಮೆರಗು ನೀಡಿದ ಮಹನೀಯರು: ಠಾಣೆಯ ಹೊರ ಅವರಣದಲ್ಲಿ ಬಿಡಿಸಲಾದ ಚಿತ್ರಣಗಳಲ್ಲಿ ಮುಖ್ಯವಾಗಿ,1930 ರಲ್ಲಿ ಮಹಾತ್ಮಾ ಗಾಂಧೀಜಿಯವರು ಅಂಕೋಲೆಗೆ ಭೇಟಿ ನೀಡಿದ್ದ ಕ್ಷಣಗಳು,ಚುಟುಕು ಬ್ರಹ್ಮ ದಿನಕರ ದೇಸಾಯಿ, ಪ್ರಸಿಧ್ಧ ವಚನಕಾರ ಬಸವಣ್ಣ, ಬ್ರಿಟಿಷರಿಗೆ ಗೋ ಬ್ಯಾಕ್ ಎಂದು ಹೇಳಿದ್ದ ಕಣಗಿಲದ ಕಾಣೆ ಬೊಮ್ಮಕ್ಕ, ಕರಬಂಧಿ ಡಿಕ್ಟೇಟರ್ ಬಾಸಗೋಡ ರಾಮಾ ನಾಯಕ, ಕರ್ನಾಟಕದ ಗಾಂಧಿ ಎನಿಸಿಕೊಂಡ ತಿಮ್ಮಪ್ಪ ಮಾಸ್ತರ, ನಾಟಿ ವೈದ್ಯ ಶಿವು ಬೊಮ್ಮ ಗೌಡ ಬೆಳಂಬಾರ, ಸೇರಿದಂತೆ ಇನ್ನಿತರ ಮಹನೀಯರ ಭಾವಚಿತ್ರ ಹಾಗೂ ಕೆಲವರ ಸಂದೇಶ ಎದ್ದು ಕಾಣುತ್ತಿದೆ.

ಜೊತೆಯಲ್ಲಿ ಅಂಕೋಲಾದ ಚಿತ್ರಣ ಸಾರುವ ಇಲ್ಲಿಯ ಪ್ರಸಿದ್ಧ ದೇಗುಲಗಳು, ದಹಿಂಕಾಲ- ಕಾರ್ತಿಕೋತ್ಸವ, ದೊಡ್ಡದೇವರ ತೇರು, ಬಂಡಿಹಬ್ಬ, ಸುಗ್ಗಿ- ಯಕ್ಷಗಾನ ಕಲಾ ಪ್ರಕಾರಗಳು, ಸಾಂಪ್ರದಾಯಿಕ ಮೀನುಗಾರಿಕೆ, ಬೆಲೇಕೇರಿ ಬಂದರು ಹಾಗೂ ಪೋಲಿಸ್ ಇಲಾಖೆಯಿಂದ ಸಾರ್ವಜನಿಕರ ಹಿತರಕ್ಷಣೆಗಾಗಿ ಹತ್ತಾರು ಜಾಗ್ರತಿ ಸಂದೇಶ, ರಸ್ತೆ ಸುರಕ್ಷತೆ, ಕಾನೂನು ಸುವ್ಯವಸ್ಥೆ, ಇಲಾಖೆ ಕುರಿತಾದ ಉಪಯುಕ್ತ ಮಾಹಿತಿ ನೀಡುವ ಸಂದೇಶ ಸಾರಲಾಗಿದೆ.

ಗಿಡ ಮರಗಳ ಮಧ್ಯೆ ಹುಲ್ಲಿನ ಹಸಿರು ಪರಿಸರ, ಆರಾಮದಾಯಕ ಆಸನ ವ್ಯವಸ್ಥೆ , ಉದ್ಯಾನವನದಂತೆ ಕಂಡು ಬರುತ್ತಿದ್ದು , ಅದರ ನಿರ್ಮಾಣಕ್ಕೆ ಅಂದು ಸಿಪಿಐ ಆಗಿ ಕಾರ್ಯನಿರ್ವಹಿಸಿದ್ದ ಬಿ. ಪ್ರಮೋದ ಕುಮಾರ, ಪಿಎಸೈ ಶ್ರೀಧರ ಎಸ್ ಆರ್ ಅವರ ವಿಶೇಷ ಮುತುವರ್ಜಿ, ಇತರೆ ಎಲ್ಲಾ ಸಿಬ್ಬಂದಿಗಳ ಸಹಕಾರ, ಅಂಬಾರಕೋಡ್ಲದ ಅಶೋಕ ಗೌಡ ಮತ್ತು ಉದಯ ಇವರು ಕುಂಚ ಬಳಿಸಿ ತೋರಿದ ಕಲಾ ನೈಪುಣ್ಯತೆ ಮತ್ತು ಅಂದಿನಿಂದ ಇಂದಿನವರೆಗೂ ಅವರಣದ ಸ್ವಚ್ಛತೆಗೆ ಪ್ರಾಮುಖ್ಯತೆ ನೀಡಿ ಅದನ್ನು ಕಾಯ್ದುಕೊಂಡು ಬರುತ್ತಿರುವ ಎಲ್ಲಾ ಅಧಿಕಾರಿವರ್ಗ ಹಾಗೂ ಸಿಬ್ಬಂದಿಗಳ ಶ್ರಮ ಶ್ಲಾಘನೀಯ. ಒಟ್ಟಿನಲ್ಲಿ ಇದು ಅಂಕೋಲಿಗರ ಹೆಮ್ಮೆ ಹಾಗೂ ಜಿಲ್ಲೆಯ ಹಿರಿಮೆಗೆ ಕಾರಣವಾಗಿದೆ

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

ಶ್ರೀ ವರಾಹಸ್ವಾಮಿ ಜ್ಯೋತಿಷ್ಯ ಪೀಠಂ”ಪ್ರಧಾನ ತಾಂತ್ರಿಕ್ : ಶ್ರೀ ದೇವದತ್ತ ಪಣಿಕರ್ ( ಕೇರಳ ) ಮೊಬೈಲ್ : 9964108888 FAMOUS ASTROLOGER
ಫೋನಿನಲ್ಲಿ ಪ್ರಶ್ನೆ ,ಫೋನಿನಲ್ಲಿ ಉತ್ತರ , ಫೋನಿನಲ್ಲಿ ಪರಿಹಾರ, ನಿಮ್ಮ ಜೀವನದ ಯಾವುದೇ ಕಷ್ಟ ಸಂಕಷ್ಟಗಳಿದ್ದರೂ ಕೇವಲ 3 ದಿನದಲ್ಲಿ ಪರಿಹಾರ ಶತಸಿದ್ಧ ಸ್ತ್ರೀ ಪುರುಷ ಪ್ರೇಮ ವಿಚಾರ, ವಶೀಕರಣ,ಅತ್ತೆ ಸೊಸೆ ಜಗಳ,ಸಂತಾನ,ಆರೋಗ್ಯ ತೊಂದರೆ, ಸ್ತ್ರೀಯರ ಗುಪ್ತ ಸಮಸ್ಯೆ,ಗಂಡ-ಹೆಂಡತಿಯ ಕಲಹ, ನಿಮ್ಮ ಗಂಡ ಪರಸ್ತ್ರೀಯರ ವ್ಯಾಮೋಹ, ವಶೀಕರಣ ಮತ್ತು ನಿಮ್ಮ ಜೀವನದ ಯಾವುದೇ ಸಮಸ್ಯೆಗಳಿದ್ದರೂ ಕೇರಳದ ಪೂಜಾ ವಿಧಿವಿಧಾನದಿಂದ ಕೇವಲ 3 ದಿನದಲ್ಲಿ ಪರಿಹಾರ ಶತಸಿದ್ಧ ಮೊಬೈಲ್ : 9964108888

Back to top button