Follow Us On

WhatsApp Group
Big News
Trending

ಬಡ, ಅಮಾಯಕ ನಿವೃತ್ತ ಗ್ರಾಮ ಸೇವಕನಿಗೆ ಮಹಾಮೋಸ: ಖಾಲಿ ಹಾಳೆಯಲ್ಲಿ ಸಹಿ ಪಡೆದು ಮಾಡಿದ್ದೇನು ನೋಡಿ?

ಸುಮಾರು 35 ವರ್ಷಗಳಿಂದ ಅನಂತ ಮಹಾಲೆ ಅವರು ಪ್ರಾಮಾಣಿಕವಾಗಿ ನಿಸ್ವಾರ್ಥ ಕೆಲಸ ಮಾಡಿದ್ದು, ತಮ್ಮ ಸುದೀರ್ಘ ಅವದಿಯ ಸೇವೆಯ ನಂತರ ಅವರು ಸೆಪ್ಟೆಂಬರ್ 30ರಂದು ತಹಶೀಲ್ದಾರ್ ಸಮ್ಮುಖದಲ್ಲಿ ಬೀಳ್ಕೊಡುಗೆ ಕಾರ್ಯಕ್ರಮವನ್ನು ಸಹ ಮಾಡಿ ಗೌರವಿಸಲಾಗಿತ್ತು. ಆದರೀಗ ಅವರಿಗೆ ಮೋಸ ಮಾಡುವ ಪ್ರಯತ್ನ ನಡೆದಿರುವುದು ವಿಪರ್ಯಾಸ.

ಭಟ್ಕಳ : ತಾಲೂಕಿನ ಸೂಸಗಡಿ ಭಾಗದ ಗ್ರಾಮ ಸೇವಕರಾಗಿ ಅನಂತ ಮಹಾಲೆ ಎಂಬುವವರು ಸುಮಾರು 35 ವರ್ಷಗಳ ಕಾಲ ಕೆಲಸ ಮಾಡಿ ನಿವೃತ್ತಗೊಂಡಿದ್ದು, ಅವರಗೀಗ ಅನ್ಯಾಯವಾಗಿದೆ. ಅವರು ಇದೀಗ ತಮಗಾದ ಅನ್ಯಾಯವನ್ನು ಮಾದ್ಯಮದವರೊಂದಿಗೆ ಹಂಚಿಕೊಂಡಿದ್ದು, ನ್ಯಾಯಕೊಡಿಸಬೇಕೆಂದು ವಿನಂತಿಸಿಕೊಂಡಿದ್ದಾರೆ.

ಮಾನವೀಯತೆ ಹಾಗೂ ಸರಕಾರದ ಆದೇಶದಂತೆ ಇವರ ನಿವೃತ್ತಿ ನಂತರ ಅವರ ಕುಟುಂಬದ ಓರ್ವರಿಗೆ ಕೆಲಸ ನೀಡಬೇಕೆಂಬ ಆದೇಶವಿದ್ದರು ಸಹ ‘ನಮಗೆ ಕೆಲಸ ಬೇಕಿಲ್ಲ ಎಂದು ಗುತ್ತಿಗೆ ಆಧಾರದಲ್ಲಿ ಕೆಲಸ ನಿರ್ವಹಿಸುತ್ತಿರುವ ತಹಶೀಲ್ದಾರ್ ಕಾರು ಚಾಲಕ ಗಣಪತಿ ಶೇಟ್ ಎನ್ನುವವರು ಮೋಸದಲ್ಲಿ ಸಹಿ ಪಡೆದು ತನಗೆ ಆ ಕೆಲಸ ಹಾಕಿಸಿಕೊಂಡಿರುವ ಬಗ್ಗೆ ನಿವೃತ್ತ ಗ್ರಾಮ ಸೇವಕ ಅನಂತ ಮಹಾಲೆ ನೇರ ಆರೋಪ ಮಾಡಿದ್ದಾರೆ.

ಕಂದಾಯ ಇಲಾಖೆಯ ಗ್ರಾಮ ಸೇವಕ ಹುದ್ದೆಯಲ್ಲಿ ಕೆಲಸ ಮಾಡಿದ ವ್ಯಕ್ತಿ ಅವನ ನಿವೃತ್ತಿ ನಂತರ ಅವರ ಪುತ್ರ, ಪುತ್ರಿ ಅಥವಾ ಪತ್ನಿಗೆ ಆ ಕೆಲಸ ನೀಡಬೇಕೆಂದು ಸರಕಾರದ ನಿಯಮವಿದೆ. ಆದರೆ ಕಂದಾಯ ಇಲಾಖೆಯಲ್ಲಿ ಸತತ 35 ಕೆಲಸ ಮಾಡಿದ ನಿವೃತ್ತ ಗ್ರಾಮ ಸೇವಕನ ಕುಟುಂಬಕ್ಕೆ ಕೆಲಸ ಸಿಗಬಾರದು ಎಂಬ ದುರುದ್ದೇಶದಿಂದ ಗ್ರಾಮ ಸೇವಕರ ಮನೆಗೆ ತೆರಳಿ ಅವರಿಂದ ಖಾಲಿ ಹಾಳೆಯಲ್ಲಿ ಸಹಿ ಪಡೆದು ಅವರಿಂದ ಕೆಲಸ ತಪ್ಪಿಸುವ ಪ್ರಯತ್ನ ನಡೆದಿರುವುದು ಈಗ ಬಯಲಾಗಿದೆ.

ತಹಶೀಲ್ದಾರ್ ಮುಂದೆ ನಿವೃತ್ತ ಗ್ರಾಮ ಸೇವಕ ಬಾರದೇ ಅವರು ಮುಖಾಮುಖಿಯಲ್ಲಿ ಯಾವುದೇ ಲಿಖಿತ ಹೇಳಿಕೆ ಬರೆದು ಕೊಡದೇ ಇದ್ದರು ತಹಸೀಲ್ದಾರ ಅವರು ಯಾವ ಆಧಾರದ ಮೇಲೆ ಗುತ್ತಿಗೆ ಆಧಾರದಲ್ಲಿ ತಹಸೀಲ್ದಾರ ಕಾರು ಚಾಲಕ ತಂದು ಕೊಟ್ಟ ಸಹಿ ಹಾಕಿ ಪತ್ರವನ್ನು ಅನುಮೋದನೆಗೆ ಸಲ್ಲಿಸಿದ್ದಾರೆಂಬುದು ಕುಟುಂಬದವರ ಪ್ರಶ್ನೆಯಾಗಿದೆ.

ಹಾಗಿದ್ದರೆ ಯಾರೋ ಎಲ್ಲಿಯೋ ಯಾರ ಮುಂದೆಯೋ ಸಹಿ ಪಡೆದಲ್ಲಿ ಅದಕ್ಕೆ ತಹಸೀಲ್ದಾರ ಪರಿಶೀಲನೆ ಮಾಡದೇ ಅನುಮೋದಿಸಬಹುದೇ ಎಂಬುದು ಅವರ ಜವಾಬ್ದಾರಿಯನ್ನು ಪ್ರಶ್ನಿಸಿದಂತಾಗಿದೆ. ಸುಮಾರು 35 ವರ್ಷಗಳಿಂದ ಅನಂತ ಮಹಾಲೆ ಅವರು ಪ್ರಾಮಾಣಿಕವಾಗಿ ನಿಸ್ವಾರ್ಥ ಕೆಲಸ ಮಾಡಿದ್ದು, ತಮ್ಮ ಸುದೀರ್ಘ ಅವದಿಯ ಸೇವೆಯ ನಂತರ ಅವರು ಸೆಪ್ಟೆಂಬರ್ 30ರಂದು ತಹಸೀಲ್ದಾರ ಸಮ್ಮುಖದಲ್ಲಿ ಬೀಳ್ಕೊಡುಗೆ ಕಾರ್ಯಕ್ರಮವನ್ನು ಸಹ ಮಾಡಿ ಗೌರವಿಸಲಾಗಿತ್ತು.

ಜನರಿಂದಲೂ ಉತ್ತಮ ಸಂಬoಧ ಹೊಂದಿರುವ ಇರುವ ಸರಕಾರಕ್ಕೂ ಅವರ ಸೇವೆ ಅತ್ಯಂತ ತೃಪ್ತಿಯನ್ನು ನೀಡಿತ್ತು. ಆದರೆ ಇವರ ಕೆಲಸಕ್ಕೆ ಈಗ ಕಂದಾಯ ಇಲಾಖೆ ಅಧಿಕಾರಿಗಳಿಂದಲೇ ಮಹಾಮೋಸ ನಡೆದಿರುವದು ಬಟಾಬಯಲಾಗಿದ್ದು, ಅಧಿಕಾರಿ ವರ್ಗವನ್ನು ಪ್ರಶ್ನಿಸುವ ಕೆಲಸ ಮಾಡಬೇಕಾಗಿದೆ.

ಮುಖ್ಯವಾಗಿ ನಿವೃತ್ತ ಬಳಿಕ ಓರ್ವ ಗ್ರಾಮ ಸೇವಕ ಹುದ್ದೆಯ ನೇಮಕಾತಿಯಲ್ಲಿ ನಿಯಮದಂತೆ ಯಾರು ಗ್ರಾಮ ಸೇವಕ ಹುದ್ದೆಯಿಂದ ನಿವೃತ್ತರಾಗುತ್ತಾರೋ ಅವರ ಹುದ್ದೆ ಅವರ ಕುಟುಂಬಕ್ಕೆ ನೀಡಬೇಕು ಎಂಬ ಕಾನೂನಿದೆ. ಇದು ತಪ್ಪಿದಲ್ಲಿ ಆ ಹುದ್ದೆ ಭರ್ತಿ ಮಾಡಿಕೊಳ್ಳಲು ಪತ್ರಿಕೆಯಲ್ಲಿ ಪ್ರಕಟಣೆಯನ್ನು ಹೊರಡಿಸಿ ಎಲ್ಲರ ಗಮನಕ್ಕೆ ತಂದು ಕಾನೂನಿನ ಪ್ರಕಾರ ಹುದ್ದೆಯನ್ನು ಭರ್ತಿ ಮಾಡಿಕೊಳ್ಳಬೇಕಾಗಿದೆ.

ಆದರೆ ಇವೆಲ್ಲ ಕಾನೂನನ್ನು ಅಧಿಕಾರಿಗಳು ಮರೆತರೇ ಅಥವಾ ಇದರಲ್ಲಿ ಏನಾದರು ಒತ್ತಡ ಅಥವಾ ಇನ್ಯಾವುದೇ ಕೊಟ್ಟು ತೆಗೆದುಕೊಳ್ಳುವ ವ್ಯವಹಾರ ನಡೆದಿರುವ ಅನುಮಾನವೂ ವ್ಯಕ್ತವಾಗುತ್ತಿದೆ ಎಂಬ ಮಾತುಗಳು ಎಲ್ಲೆಡೆ ಕೇಳಿ ಬರುತ್ತಿದೆ.

ಆದರೆ ಈ ಯಾವ ನಿಯಮವನ್ನು ಪಾಲಿಸದೇ ಏಕಾಏಕಿ ತಹಸೀಲ್ದಾರ್ ಕಾರು ಚಾಲಕ ಗಣಪತಿ ಶೇಟ್ ಅವರನ್ನು ಗ್ರಾಮ ಸಹಾಯಕ ಹುದ್ದೆಗೆ ನೇಮಕ ಮಾಡಿಕೊಂಡಿರುತ್ತದೆ. ಈ ಬಗ್ಗೆ ತಹಸೀಲ್ದಾರ್ ಅವರ ಗಮನಕ್ಕೆ ತಂದಾಗ ಈ ಹುದ್ದೆ ಮೂರು ತಿಂಗಳ ಹಿಂದೆ ಭರ್ತಿ ಮಾಡಿಕೊಳ್ಳಲಾಗಿದೆ. ಅನಂತ ಮಹಾಲೆ ತನ್ನ ಕುಟುಂಬಕ್ಕೆ ಯಾವುದೇ ಹುದ್ದೆ ಬೇಡ ಎಂದು ಬರೆದುಕೊಟ್ಟಿರುತ್ತಾರೆ ಎಂಬ ಹೇಳಿಕೆ ನೀಡಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.

ಇನ್ನು ಮುಖ್ಯವಾಗಿ ಈ ನಿವೃತ್ತ ಗ್ರಾಮ ಸೇವಕ ಅನಂತ ಮಹಾಲೆ ಕುಟುಂಬವು ಕಡು ಬಡತನದಲ್ಲಿ ಜೀವನ ನಡೆಸುತ್ತಿದೆ. ಒಂದು ಗಂಡು, ಒಂದು ಹೆಣ್ಣು ಮಗುವಿದ್ದು ಮಕ್ಕಳಿಬ್ಬರು ಕಲಿಯುತ್ತಿದ್ದಾರೆ. ಈ ಆರ್ಥಿಕ ಸಂಕಷ್ಟದ ಸಮಯದಲ್ಲಿ ಅನಂತ ಮಹಾಲೆ ಯಾವ ಧೈರ್ಯದಲ್ಲಿ ತನ್ನ ಕುಟುಂಬಕ್ಕೆ ಸರಕಾರಿ ಕೆಲಸ ಬೇಡ ಎಂದು ಬರೆದುಕೊಡಲು ಸಾಧ್ಯ ಎಂಬುದನ್ನು ಸಹ ಅಧಿಕಾರಿಗಳು ಮರು ಪರಿಶೀಲಿಸಿ ಸಹಾಯಕ ಆಯುಕ್ತರಿಗೆ ಹುದ್ದೆ ಅನುಮೋದನೆಗೆ ಕಳುಹಿಸಿಕೊಡುವ ಜವಾಬ್ದಾರಿಯುತ ಕೆಲಸ ಮಾಡಬಹುದಾಗಿತ್ತು.

ಸದ್ಯ ಗ್ರಾಮ ಸೇವಕ ಹುದ್ದೆ ಹಾಗೂ ಗುತ್ತಿಗೆ ಆಧಾರದ ಮೇಲೆ ಕಾರು ಚಾಲಕ ಕೆಲಸ ಮಾಡುತ್ತಿರುವ ಗಣಪತಿ ಶೇಟ್ ಯಾವ ಹಿನ್ನೆಲೆಯಲ್ಲಿ ಎರಡು ಹುದ್ದೆಯಲ್ಲಿ ಹೇಗೆ ಕೆಲಸ ಮಾಡಲು ಸಾಧ್ಯವಿದೆ. ಸದ್ಯ ಚಾಲಕ , ಹುದ್ದೆಯ ಸಂಬಳ ಗುತ್ತಿಗೆ ಕಂಪನಿಯಿoದ ಪಡೆದಿದ್ದು ತಹಸೀಲ್ದಾರ ಹಂತದಲ್ಲಿ ಗ್ರಾಮ ಸೇವಕ ಹುದ್ದೆಗೆ ಅನುಮೋದನೆ ನೀಡಿ ಸಹಾಯಕ ಆಯುಕ್ತರ ಹಂತದಲ್ಲಿ ಅನುಮೋದನೆ ಹಂತದಲ್ಲಿದ್ದ ಹಿನ್ನೆಲೆ ಗ್ರಾಮ ಸೇವಕ ಹುದ್ದೆಯ ಸಂಬಳ ಬಂದಿಲ್ಲವಾಗಿದೆ. ಸದ್ಯ ಈತ ಚಾಲಕ ಹುದ್ದೆಗೂ ರಾಜೀನಾಮೆ ನೀಡದೇ ಇನ್ನೊಂದು ಕಡೆ ಗ್ರಾಮ ಸೇವಕ ಹುದ್ದೆ ಮಾಡುತ್ತಿರುವುದು ಯಾವ ರೀತಿ ನ್ಯಾಯ ಎಂಬುದು ಅಧಿಕಾರಿಗಳಿಗೆ ತಿಳಿಸಿಬೇಕು ಎಂದು ಅನ್ಯಾಯಕ್ಕೊಳಗಾದ ಅನಂತ್ ಮಹಾಲೆ ಆಗ್ರಹಿಸಿದ್ದಾರೆ. ‘

ಸುಮಾರು 35 ವರ್ಷಗಳಿಂದ ಗ್ರಾಮ ಸಹಾಯಕ ಹುದ್ದೆಯಲ್ಲಿ ಕರ್ತವ್ಯ ನಿರ್ವಹಿಸಿ ಈಗ ನಿವೃತ್ತಿ ಹೊಂದಿದ್ದೇನೆ. ನನ್ನ ಕೆಲಸ ನನ್ನ ಮಗನಿಗೆ ಸಿಗಬೇಕಾಗಿತ್ತು. ಆದರೆ ನನಗೆ ಆದರೆ ಹುದ್ದೆಯನ್ನು ತಹಸೀಲ್ದಾರ್ ವಾಹನ ಚಾಲಕನಿಗೆ ನೀಡಿದ್ದಾರೆ.

ಇದು ನನಗೆ ಆದ ಅನ್ಯಾಯವಾಗಿದೆ. ನನ್ನ ಮನೆಗೆ ಕುದ್ದು ಕಾರು ಚಾಲಕ ಗಣಪತಿ ಶೇಟ್ ಹಾಗೂ ಇನ್ನೋರ್ವ ಗ್ರಾಮ ಸೇವಕ ಬಂದು ಖಾಲಿ ಹಾಳೆಯಲ್ಲಿ ಸಹಿ ಹಾಕುವಂತೆ ತಿಳಿಸಿದ್ದು ನನ್ನ ಪತ್ನಿ ಸಹಿ ಮಾಡದಂತೆ ತಿಳಿಸಿದ್ದಳು ಊಟದ ಸಮಯಕ್ಕೆ ಮನೆಗೆ ಬಂದು ಗಡಿಬಿಡಿಯಲ್ಲಿ ಸಹಿ ಪಡೆದು ತೆರಳಿದ್ದರು. ನಮಗೆ ನ್ಯಾಯ ಸಿಗಬೇಕು. ಈ ಬಗ್ಗೆ ಸಹಾಯಕ ಆಯುಕ್ತರಿಗೆ ಮನವಿ ಸಹ ಸಲ್ಲಿಸಿದ್ದು ನನ್ನ ಹುದ್ದೆಗೆ ನನ್ನ ಮಗನನ್ನು ಆಯ್ಕೆ ಮಾಡಬೇಕು ಎಂಬುದು ನನ್ನ ಒತ್ತಾಯ ಎಂದು ಹೇಳಿದ್ದಾರೆ.

ವಿಸ್ಮಯ ನ್ಯೂಸ್, ಉದಯ್ ಎಸ್ ನಾಯ್ಕ, ಭಟ್ಕಳ

ಶ್ರೀ ವರಾಹಸ್ವಾಮಿ ಜ್ಯೋತಿಷ್ಯ ಪೀಠಂ”ಪ್ರಧಾನ ತಾಂತ್ರಿಕ್ : ಶ್ರೀ ದೇವದತ್ತ ಪಣಿಕರ್ ( ಕೇರಳ ) ಮೊಬೈಲ್ : 9964108888 FAMOUS ASTROLOGER
ಫೋನಿನಲ್ಲಿ ಪ್ರಶ್ನೆ ,ಫೋನಿನಲ್ಲಿ ಉತ್ತರ , ಫೋನಿನಲ್ಲಿ ಪರಿಹಾರ, ನಿಮ್ಮ ಜೀವನದ ಯಾವುದೇ ಕಷ್ಟ ಸಂಕಷ್ಟಗಳಿದ್ದರೂ ಕೇವಲ 3 ದಿನದಲ್ಲಿ ಪರಿಹಾರ ಶತಸಿದ್ಧ ಸ್ತ್ರೀ ಪುರುಷ ಪ್ರೇಮ ವಿಚಾರ, ವಶೀಕರಣ,ಅತ್ತೆ ಸೊಸೆ ಜಗಳ,ಸಂತಾನ,ಆರೋಗ್ಯ ತೊಂದರೆ, ಸ್ತ್ರೀಯರ ಗುಪ್ತ ಸಮಸ್ಯೆ,ಗಂಡ-ಹೆಂಡತಿಯ ಕಲಹ, ನಿಮ್ಮ ಗಂಡ ಪರಸ್ತ್ರೀಯರ ವ್ಯಾಮೋಹ, ವಶೀಕರಣ ಮತ್ತು ನಿಮ್ಮ ಜೀವನದ ಯಾವುದೇ ಸಮಸ್ಯೆಗಳಿದ್ದರೂ ಕೇರಳದ ಪೂಜಾ ವಿಧಿವಿಧಾನದಿಂದ ಕೇವಲ 3 ದಿನದಲ್ಲಿ ಪರಿಹಾರ ಶತಸಿದ್ಧ ಮೊಬೈಲ್ : 9964108888

Back to top button