Focus NewsImportant
Trending

ಶ್ರೀ ಶಾಂತಿಕಾ ಪರಮೇಶ್ವರಿ ದೇವಿಗೆ ವಿಶೇಷ ಅಲಂಕಾರ : ದೇವಿಯ ದರ್ಶನ ಪಡೆದು ಪುನೀತರಾದ ಅಪಾರ ಭಕ್ತರು

ಕುಮಟಾ: ಇಲ್ಲಿನ ಗ್ರಾಮದೇವತೆ ಶ್ರೀ ಶಾಂತಿಕಾ ಪರಮೇಶ್ವರಿ ದೇವಸ್ಥಾನದಲ್ಲಿ ಶ್ರಾವಣ ಮಾಸದ ಕೊನೆಯ ಶುಕ್ರವಾರದ ವಿಶೇಷ ಪೂಜೆ ಅಪಾರ ಸಂಖ್ಯೆಯ ಭಕ್ತರ ನಡುವೆ ಸಂಪನ್ನಗೊoಡಿತು. ಶ್ರಾವಣ ಮಾಸದ ಕೊನೆಯ ಶುಕ್ರವಾರದ ಹಿನ್ನಲೆಯಲ್ಲಿ ದೇವಿಯನ್ನು ವಿಶೇಷವಾಗಿ ಶೃಂಗರಿಸಲಾಗಿತ್ತು. ಸಹಸ್ರ ಕುಂಕುಮಾರ್ಚನೆ, ಸಹಸ್ರ ಪುಷ್ಪಾರ್ಚನೆ, ದುರ್ಗಾ ನಮಸ್ಕಾರ ಸೇರಿದಂತೆ ವಿವಿಧ ದೈವಿ ಕೈಂಕರ್ಯಗಳು ನೆರವೇರಿದವು. ಅಪಾರ ಸಂಖ್ಯೆಯ ಭಕ್ತರು ದೇವಿಯ ದರ್ಶನ ಪಡೆದು ಪುನೀತರಾದರು.

ವಿಸ್ಮಯ ನ್ಯೂಸ್, ಕುಮಟಾ

Back to top button